Select Your Language

Notifications

webdunia
webdunia
webdunia
webdunia

ನೇಪಾಳ ಭೂಕಂಪ: 3700 ನಾಗರೀಕರ ಸಾಮೂಹಿಕ ಅಂತ್ಯ ಸಂಸ್ಕಾರ

ನೇಪಾಳ ಭೂಕಂಪ: 3700 ನಾಗರೀಕರ ಸಾಮೂಹಿಕ ಅಂತ್ಯ ಸಂಸ್ಕಾರ
ಕಠ್ಮಂಡು , ಸೋಮವಾರ, 27 ಏಪ್ರಿಲ್ 2015 (17:17 IST)
ನೇಪಾಳ ರಾಷ್ಟ್ರವು ಭೂಕಂಪನಕ್ಕೆ ತತ್ತರಿಸಿ ಹೋಗಿದ್ದು, ಕಳೆದ ಮೂರು ದಿನಗಳ ಅಬ್ಬರಕ್ಕೆ ಪ್ರಾಣ ತೆತ್ತಿರುವ 3700ಕ್ಕೂ ಅಧಿಕ ಮಂದಿ ಸಾರ್ವಜನಿಕರ ಅಂತ್ಯ ಸಂಸ್ಕಾರವನ್ನು ನಗರದ ಭಾಗಮತಿ ನದಿ ದಂಡೆಯ ಮೇಲೆ ನಡೆಸಲಾಗುತ್ತಿದೆ. 
 
ಇಲ್ಲಿ ಕಳೆದ ಮೂರು ದಿನಗಳಿಂದ ಭೂಕಂಪನ ಸಂಭವಿಸುತ್ತಿದ್ದು, 70 ಭಾರಿ ಭೂಮಿ ನಡುಗಿದೆ. ನೇಪಾಳದ ಹಲವಾರು ಕಟ್ಟಡಗಳು ನೆಲಸಮವಾಗಿದ್ದು, ಕಟ್ಟಡಗಳ ಅವಶೇಷಗಳಡಿ ಸಿಲುಕಿದ್ದ ಹಲವಾರು ಮಂದಿ ಸಾರ್ವಜನಿಕರು ಸಾವನ್ನಪ್ಪಿದ್ದಾರೆ. 
 
ಇಲ್ಲಿನ ಸರ್ಕಾರದ ಮಾಹಿತಿ ಪ್ರಕಾರ, ಇಲ್ಲಿಯವರೆಗೆ 3700 ಮಂದಿ ಸಾವನ್ನಪ್ಪಿದ್ದು, ಎಲ್ಲರನ್ನೂ ಕೂಡ ರಕ್ಷಣಾ ಕಾರ್ಯಾಚರಣೆಯ ಮೂಲಕ ಹೊರ ತೆಗೆಯಲಾಗಿದೆ. ಅಲ್ಲದೆ ಆ ಎಲ್ಲಾ ಮೃತ ದೇಹಗಳನ್ನೂ ಕೂಡ ಇಲ್ಲಿನ ಭಾಗಮತಿ ನದಿ ದಂಡೆಗೆ ತರಲಾಗುತ್ತಿದ್ದು, ಸಾಮೂಹಿಕ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ. 6800ಕ್ಕೂ ಅಧಿಕ ಮಂದಿ ಗಾಯಗೊಂಡು 67 ಸಾವಿರ ಮಂದಿ ಸಂತ್ರಸ್ತರಿದ್ದಾರೆ.  
 
ಮೃತಪಟ್ಟವರಲ್ಲಿ ಸಾವಿರ ಮಂದಿ ರಾಷ್ಟ್ರದ ರಾಜಧಾನಿ ಕಠ್ಮಂಡು ನಗರ ನಿವಾಸಿಗಳಾಗಿದ್ದು, ಇತರರು ಇತರೆ ಜಿಲ್ಲೆಗಳ ನಿವಾಸಿಗಳಾಗಿದ್ದಾರೆ. ನೇಪಾಳದಲ್ಲಿ ಒಟ್ಟು 75 ಜಿಲ್ಲೆಗಳಿದ್ದು, 30 ಜಿಲ್ಲೆಗಳಲ್ಲಿ ಭೂಕಂಪನ ಸಂಭವಿಸಿದೆ. ಇಲ್ಲಿನ ಪೊಕ್ರಾ ಹಾಗೂ ಕೊರಾಡಿ ನಗರಗಳು ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಹೆಚ್ಚೆಂದರೆ 7.9ರಷ್ಟು ತೀವ್ರತೆ ದಾಖಲಾಗಿದೆ. 
 
ಇನ್ನು ನೇಪಾಳಕ್ಕೆ ಪ್ರವಾಸ ಕೈಗೊಂಡಿದ್ದ 3200 ಮಂದಿ ಭಾರತೀಯ ನಾಗರೀಕರನ್ನು ರಕ್ಷಿಸಲಾಗಿದ್ದು, ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸಲಾಗಿದೆ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ. ಮೇ 1ರಿಂದ ಭೂಕಂಪ ಸಂತ್ರಸ್ತರಿಗಾಗಿ ಚರ್ಚ್ ಹಾಗೂ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಂದ ನಿಧಿ ಸಂಗ್ರಹ ಮಾಡಲು ಕ್ರೈಸ್ತ ಸಮುದಾಯ ನಿರ್ಧರಿಸಿದೆ.  
 
ಈ ಬಗ್ಗೆ ನೇಪಾಳ ಪ್ರಧಾನಿ ಸುಶೀಲ್ ಕೋಯಿರಾಲಾ ಪ್ರತಿಕ್ರಿಯಿಸಿದ್ದು, ಭೂಕಂಪನ ಹಿನ್ನೆಲೆಯಲ್ಲಿ ಹಲವಾರು ರಾಷ್ಟ್ರಗಳು ರಕ್ಷಣಾ ಕಾರ್ಯಕ್ಕೆ ಸಹಕರಿಸುತ್ತಿದ್ದು, ಆಹಾರ ಔಷಧ ಸೇರಿದಂತೆ ಇನ್ನಿತರೆಗಳನ್ನು ಅಗಾಧ ಪ್ರಮಾಣದಲ್ಲಿ ರವಾನಿಸಿ ಸಹಕರಿಸುತ್ತಿವೆ. ಆದರೆ ಹೆಚ್ಚು ಮಂದಿ ಗಾಯಾಳುಗಳಾಗಿದ್ದು, ಚಿಕಿತ್ಸೆ ನೀಡುವ ಅಗತ್ಯತೆ ಇದ್ದು, ರಕ್ತದ ಪೊಟ್ಟಣಗಳನ್ನು ರವಾನಿಸಿ ಎಂದು ಇತರೆ ರಾಷ್ಟ್ರಗಳಿಗೆ ಮನವಿ ಮಾಡಿದ್ದಾರೆ.     

Share this Story:

Follow Webdunia kannada