Select Your Language

Notifications

webdunia
webdunia
webdunia
webdunia

ಮತ್ತೆ ಕಂಪಿಸಿದ ಭೂಮಿ: ನೇಪಾಳ ಕಾರ್ಯಾಚರಣೆಗೆ ಅಡ್ಡಿ

ಮತ್ತೆ ಕಂಪಿಸಿದ ಭೂಮಿ: ನೇಪಾಳ ಕಾರ್ಯಾಚರಣೆಗೆ ಅಡ್ಡಿ
ಕಠ್ಮಂಡು , ಸೋಮವಾರ, 4 ಮೇ 2015 (12:32 IST)
ಕಳೆದ ಏಪ್ರಿಲ್ 25ರಿಂದ ಸಂಭವಿಸಿದ್ದ ಭೂಕಂಪನದ ಆರ್ಭಟಕ್ಕೆ ತತ್ತರಿಸಿದ್ದ ನೇಪಾಳದಲ್ಲಿ ಇಂದು ಬೆಳಗ್ಗೆ ಕೂಡ ಭೂಮಿ ಕಂಪಿಸಿದ್ದು, ಜನರನ್ನು ಮತ್ತೆ ಭಯಭೀತಗೊಳಿಸಿದೆ.

ಇಂದು ಬೆಳಗ್ಗೆ 6.45ರ ವೇಳೆಯಲ್ಲಿ ಭೂಮಿ ಒಂದು ಬಾರಿ ಕಂಪಿಸಿದ್ದು, ರಿಕ್ಟರ್ ಮಾಪನದಲ್ಲಿ 4.6ರಷ್ಟು ತೀವ್ರತೆ ದಾಖಲಾಗಿದೆ.

ಇನ್ನು ಈ ಹಿಂದೆ ನಡೆದ ಭಯಾನಕ ಭೂಕಂಪದ ಪರಿಣಾಮ ಸಾಕಷ್ಟು ಹಾನಿ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಸ್ತುತ ಹಲವು ರಾಷ್ಟ್ರಗಳು ಪರಿಹಾ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿದ್ದು, ಕಾರ್ಯಾಚರಣೆಗೆ ಮತ್ತಷ್ಟು ಅಡ್ಡಿಯುಂಟಾಗಿದೆ.

ಈ ಹಿಂದೆ ನಡೆದ ಭಯಾನಕ ಭೂಕಂಪನದ ಪರಿಣಾಮ 7000ಕ್ಕೂ ಅಧಿಕ ಮಂದಿ ಸಾರ್ವಜನಿಕರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 14 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇಲ್ಲಿನ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada