Select Your Language

Notifications

webdunia
webdunia
webdunia
webdunia

ಪರಾರಿಯಾದ ಪತ್ನಿ: ಆಕೆ ಎಷ್ಟು ಮದುವೆಯಾದರೂ ಸರಿ ನನಗವಳೇ ಬೇಕು ಎನ್ನುತ್ತಿದ್ದಾನೆ ಈತ

ಪರಾರಿಯಾದ ಪತ್ನಿ: ಆಕೆ ಎಷ್ಟು ಮದುವೆಯಾದರೂ ಸರಿ ನನಗವಳೇ ಬೇಕು ಎನ್ನುತ್ತಿದ್ದಾನೆ ಈತ
ಬೆಂಗಳೂರು , ಶುಕ್ರವಾರ, 28 ಅಕ್ಟೋಬರ್ 2016 (14:15 IST)
ಮೋಜು-ಮಸ್ತಿ ಮಾಡಲು ಬೆಂಗಳೂರಿಗನನ್ನು ಮದುವೆಯಾದ ದುಬೈ ಮೂಲದ ಯುವತಿ ನಾಲ್ಕೇ ತಿಂಗಳಲ್ಲಿ ಮರಳಿ ತನ್ನ ದೇಶಕ್ಕೆ ಪರಾರಿಯಾದ ಘಟನೆ ಬಹಳ ತಡವಾಗಿ ಬೆಳಕಿಗೆ ಬಂದಿದೆ. 

ಆರೋಪಿ ಮಹಿಳೆಯನ್ನು ಶೈಮಾನಿಸಾ ಎಂದು ಗುರುತಿಸಲಾಗಿದ್ದು ಆಕೆಯಿಂದ ಮೋಸ ಹೋದ ಯುವಕನನ್ನು ಟ್ಯಾನಿ ರಸ್ತೆ ವೆಂಕಟೇಶಪುರಂ ನಿವಾಸಿ, ಉದ್ಯಮಿ ಮೊಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದೆ. 
 
ಫೇಸ್‌ಬುಕ್‌ನಲ್ಲಿ ಇವರಿಬ್ಬರಿಗೆ ಪರಿಚಯವಾಗಿತ್ತು. ಸ್ನೇಹ ಪ್ರೀತಿಗೆ ತಿರುಗಿ 2013ರಲ್ಲಿ ಎರಡು ಕುಟುಂಬಗಳ ಒಪ್ಪಿಗೆ ಪಡೆದು ಜೋಡಿ ಮದುವೆಯಾಗಿತ್ತು.
 
ಪ್ರೀತಿಸಿದವಳನ್ನೇ ಕೈ ಹಿಡಿದ ಖುಷಿಯಲ್ಲಿ ಮೊಹಮ್ಮದ್‌ಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನಿಸಿತು. ಆದರೆ ಮದುವೆಯಾದ ನಾಲ್ಕೇ ತಿಂಗಳಲ್ಲಿ ಆಕೆ ಗಂಡನನ್ನು ತೊರೆದು ಪರಾರಿಯಾಗಿದ್ದಾಳೆ. 
 
ಮತ್ತೀಗ ವಿಚ್ಛೇದನ ಪಡೆಯದ ಆಕೆ ಮರು ಮದುವೆಯಾಗಿದ್ದಾಳೆ ಎಂಬ ಸುದ್ದಿ ಮೊಹಮ್ಮದ್‌ಗೆ ತಲುಪಿದೆ. ಆದರೆ ಆಕೆಯನ್ನು ಮರೆಯಲಾಗದೆ ಒದ್ದಾಡುತ್ತಿರುವ ಆತ ಆಕೆ ಎಷ್ಟು ಮದುವೆಯಾದರೂ ಸರಿ ಆಕೆಯೇ ನನಗೆ ಬೇಕು. ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಾತ ಕಾನೂನು ಹೋರಾಟಕ್ಕೆ ಮುಂದಾಗಿದ್ದಾನೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ತಾನದ ಅರ್ಚಕನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ!