Webdunia - Bharat's app for daily news and videos

Install App

ಪಾನಮತ್ತ ವಿದ್ಯಾರ್ಥಿನಿಯ ಕಾರಿಗೆ ಸಿಕ್ಕಿ ಪಾದಚಾರಿ ಸಾವು

Webdunia
ಶುಕ್ರವಾರ, 26 ಆಗಸ್ಟ್ 2016 (12:06 IST)
ಕುಡಿದ ಮತ್ತಿನಲ್ಲಿ ಫೂಟ್‌ಪಾತ್ ಮೇಲೆ ಕಾರು ಚಲಾಯಿಸಿದ ವಿದ್ಯಾರ್ಥಿನಿಯೋರ್ವಳು ಪಾದಚಾರಿಯೊಬ್ಬನ ಸಾವಿಗೆ ಕಾರಣಳಾಗಿದ್ದಾಳೆ. ನಗರದ ಲಾಲ್‌ಬಾಗ್ ರಸ್ತೆಯಲ್ಲಿ ನಡೆದ ಈ ದುರ್ಘಟನೆಯಲ್ಲಿ ಮತ್ತೊಬ್ಬ ಗಾಯಗೊಂಡಿದ್ದು , ಮನೆಯೊಂದರ ಕೌಂಪೌಂಡ್ ಮತ್ತು ಮೋಟಾರ್ ಸೈಕಲ್ ಒಂದಕ್ಕೆ ಹಾನಿಯಾಗಿದೆ.
 
ಮೃತರನ್ನು ತ್ಯಾಗರಾಜನಗರದ ನಿವಾಸಿ ಸುಬ್ರಹ್ಮಣ್ಯ(50) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಖಾಸಗಿ ಕಂಪನಿ ಉದ್ಯೋಗಿ ಸುಜಿತ್ (26) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 
ಕೇಂದ್ರ ಬೆಂಗಳೂರಿನ ದೊಡ್ಡಮಾವಳ್ಳಿಯ ಮೂಡಲಪಾಳ್ಯ ರಸ್ತೆಯಲ್ಲಿ ಬುಧವಾರ ರಾತ್ರಿ ಈ ಅಪಘಾತ ನಡೆದಿದ್ದು ಆರೋಪಿಯನ್ನು ನಗರದ ನಿವಾಸಿ ಭವತಾರಿಣಿ ಎಂದು ಗುರುತಿಸಲಾಗಿದೆ. ಲಂಡನ್‌ನ 'ವೆಸ್ಟ್ ಮಿನ್ಸ್ಟರ್ ' ವಿಶ್ವವಿದ್ಯಾಲಯದಲ್ಲಿ ಎಮ್‌ಬಿಎ ಓದುತ್ತಿರುವ ಭವತಾರಣಿ ರಜೆ ಇದ್ದುದರಿಂದ ಕಳೆದ 12 ದಿನಗಳ ಹಿಂದೆ ನಗರಕ್ಕೆ ಬಂದಿದ್ದರು. ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿಕೊಂಡು 11 ಗಂಟೆ ಸುಮಾರಿಗೆ ಕಾರ್‌ನಲ್ಲಿ ಮನೆಗೆ ಮರಳುತ್ತಿದ್ದರು. 
 
ಈ ಸಂದರ್ಭದಲ್ಲಿ ಕುಡಿದ ಮತ್ತಿನಲ್ಲಿದ್ದ ಅವರು ಮಿನರ್ವ್ ಸರ್ಕಲ್ ಬಳಿ ಪಾದಚಾರಿ ರಸ್ತೆಯ ಮೇಲೆ ಕಾರ್ ಚಲಾಯಿಸಿದ ಆಕೆ ಈ ದುರಂತಕ್ಕೆ ಕಾರಣಳಾಗಿದ್ದಾಳೆ. 
 
ಆರೋಪಿ ವಿದ್ಯಾರ್ಥಿನಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯನವರೇ ಇನ್ನೆಷ್ಟು ದಿನ ಈ ಭಂಡ ಬಾಳು: ಆರ್‌ ಅಶೋಕ್ ವ್ಯಂಗ್ಯ

ಮರಾಠಿ vs ಹಿಂದೆ ಭಾಷೆ ವಿವಾದ, ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸಬಾರದು: ಕಂಗನಾ ರನೌತ್‌

ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್‌ಗೆ ಉನ್ನತ ಸ್ಥಾನ ಸಿಗಬೇಕು: ರಂಭಾಪುರಿ ಸ್ವಾಮೀಜಿ

ಸದ್ಯದಲ್ಲೇ ಸಿದ್ದರಾಮಯ್ಯ ದೆಹಲಿಗೆ ವರ್ಗಾವಣೆ ಪಕ್ಕಾ: ಬಿವೈ ವಿಜಯೇಂದ್ರ

ಸಂದೇಶ್‌ಖಾಲಿ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಸಿಬಿಐ: ಟಿಎಂಸಿ ಮುಖಂಡ ಶಹಜಹಾನ್‌ ಶೇಖ್‌ಗೆ ಶಾಕ್‌

ಮುಂದಿನ ಸುದ್ದಿ
Show comments