ಬದಿಯಡ್ಕ: ಗೂಗಲ್ ಮ್ಯಾಪ್ ಆಧರಿಸಿ ಕಾರು ಚಲಾಯಿಸುತ್ತಿದ್ದಾಗ ತೋಡಿನ ಕಡೆ ಮ್ಯಾಪ್ ತೋರಿಸಿದ್ದರಿಂದ ಕಾರು ಸಂಪೂರ್ಣವಾಗಿ ಮುಳುಗಿದ ಘಟನೆ ಕರ್ನಾಟಕದ ಉಪ್ಪಿನಂಗಡಿಗೆ ತೆರಳುತ್ತಿದ್ದಾಗ ಇಲ್ಲಿನ ಪಳ್ಳಂಜಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಗೂಗಲ್ ಮ್ಯಾಪ್ ಆಧರಿಸಿ ಕಾರು ಚಲಾಯಿಸುತ್ತಿದ್ದಾಗ ಘಟನೆ ನಡೆದಿದೆ ಎಂದು ಚಾಲಕ ತಿಳಿಸಿದ್ದಾರೆ. ಎರಡೂ ಬದಿಯಲ್ಲಿ ಯಾವುದೇ ಆಧಾರ ಇಲ್ಲದ ತೋಡಿನ ಸೇತುವೆ ದಾಟುವಾಗ ಕಾರು ಉರುಳಿದೆ. ಈ ವೇಳೆ ತೋಡು ತುಂಬಿ ಹರಿಯುತ್ತಿತ್ತು.
ಕಾರು ಸಂಪೂರ್ಣವಾಗಿ ಮುಳುಗಿದ್ದರೂ ಕಾರಿನಿಂದ ಹೊರಬಂದ ತಸ್ರೀಫ್, ರಶೀದ್ ಅವರು ಮರವನ್ನು ಹಿಡಿದು ಕುಳಿತು ಪೊಲೀಸರಿಗೆ ಕರೆ ಮಾಡಿ ಅಪಾಯದಿಂದ ಪಾರಾಗಿದ್ದಾರೆ.