Webdunia - Bharat's app for daily news and videos

Install App

ಸುರತ್ಕಲ್ ನಲ್ಲಿ ಮುಳುಗುವ ಭೀತಿಯಲ್ಲಿ ಡ್ರೆಜ್ಜಿಂಗ್ ಹಡಗು

Webdunia
ಭಾನುವಾರ, 18 ಜೂನ್ 2023 (19:15 IST)
ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್​ಯಿಂದ ಸುರತ್ಕಲ್​ನಲ್ಲಿ ಡ್ರೆಜ್ಜಿಂಗ್ ಹಡಗು ಮುಳುಗುವ ಭೀತಿ ಇದೆ. ಹಡಗು ನಾಲ್ಕು ವರ್ಷಗಳಿಂದ ಸಮುದ್ರ ದಡದಲ್ಲಿ ಸಿಲುಕಿದೆ. ಹಡಗು ಮಂಗಳೂರು ಹೊರವಲಯದ ಸುರತ್ಕಲ್ ಬೀಚ್ ನಲ್ಲಿದೆ. ಭಗವತಿ ಪ್ರೇಮ್ ಹೆಸರಿನ ಹಡಗನ್ನು ಆವರಿಸಿ ಮೇಲಕ್ಕೆ ಸಾಗರದ ಅಲೆಗಳು ಚಿಮ್ಮುತ್ತಿದೆ. ಸಮುದ್ರ ದಡದ ಮರಳಿನಲ್ಲಿ 9498 ಟನ್ ಭಾರದ ಡ್ರೆಜ್ಜಿಂಗ್ ಹಡಗು ಹೂತು ಹೋಗಿದೆ. ಮಂಗಳೂರು ಎನ್ಎಂಪಿಟಿ ಬಂದರಿನಲ್ಲಿ ಮುಂಬೈ ಮೂಲದ ಹಡಗು ಡ್ರೆಜ್ಜಿಂಗ್ ನಡೆಸುತ್ತಿದೆ. 2019ರ ಅಕ್ಟೋಬರ್ ನಲ್ಲಿ ಇಂಜಿನ್ ಕೆಟ್ಟು ಸಮುದ್ರದ ಅಬ್ಬರಕ್ಕೆ ಹಡಗು ದಡಕ್ಕೆ ಬಂದಿದೆ. ನೂರಾರು ಟನ್ ಆಯಿಲ್ ಹೊಂದಿದ್ದು ಹಡಗು ತೆರವು ಮಾಡದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ. ಮುಳುಗಿದರೆ ಅಥವಾ ಆಯಿಲ್ ಸೋರಿಕೆಯಾದಲ್ಲಿ ಭಾರೀ ಜಲಮಾಲಿನ್ಯ, ಸಮುದ್ರ ಜೀವಿಗಳಿಗೆ ಅಪಾಯವಿದೆ. ಈ ಬಾರಿ ಚಂಡಮಾರುತಕ್ಕೆ ಸಮುದ್ರದಲ್ಲಿ ಹಡಗು ಕುಸಿದು ಹೋಗುವ ಭೀತಿಯಲ್ಲಿ ಸ್ಥಳೀಯರು ಇದ್ಧಾರೆ. ಹಡಗು ಒಡೆಯದೆ ಸ್ಥಳಾಂತರ ಮಾಡಬೇಕೆಂಬ ಮೀನುಗಾರರ ಒತ್ತಾಯಕ್ಕೆ ಎನ್ಎಂಪಿಟಿ ನಿರ್ಲಕ್ಷ್ಯ ತೋರುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments