Select Your Language

Notifications

webdunia
webdunia
webdunia
webdunia

ಡಾ. ರಾಜ್ ಅಜಾತ ಶತ್ರು, ಸರಳ, ಸಜ್ಜನಿಕೆಯ ವ್ಯಕ್ತಿ: ಡಿವಿಎಸ್ ಬಣ್ಣನೆ

ಡಾ. ರಾಜ್ ಅಜಾತ ಶತ್ರು, ಸರಳ, ಸಜ್ಜನಿಕೆಯ ವ್ಯಕ್ತಿ:  ಡಿವಿಎಸ್ ಬಣ್ಣನೆ
ಬೆಂಗಳೂರು , ಶನಿವಾರ, 29 ನವೆಂಬರ್ 2014 (13:20 IST)
2014ರ ಕರ್ನಾಟಕ ರಾಜ್ಯೋತ್ಸವ ನ.1ರಂದು ಅಲ್ಲ, ನ.29ರಂದು ನಡೆದಿದೆ ಎಂದು ಹೇಳಲು ನಾನು ಬಯಸುತ್ತೇನೆ. ಡಾ.ರಾಜ್  ಒಬ್ಬ ಅಜಾತ ಶತ್ರು, ಒಬ್ಬ ಸರಳ ಸಜ್ಜನಿಕೆಯ ವ್ಯಕ್ತಿ, ತಾನು ನಡೆದು ಇತರರಿಗೆ ಮಾರ್ಗದರ್ಶನ ಮಾಡಿದವರು ಡಾ.ರಾಜ್ ಎಂದು ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಡಾ.ರಾಜ್ ಅವರ ವ್ಯಕ್ತಿತ್ವವನ್ನು ಬಣ್ಣಿಸಿದರು.

 ಕಂಠೀರವ ಸ್ಟುಡಿಯೋದಲ್ಲಿ ಡಾ.ರಾಜ್ ಸ್ಮಾರಕ ಲೋಕಾರ್ಪಣೆ ಸಮಾರಂಭದಲ್ಲಿ  ಅವರು ಮಾತನಾಡುತ್ತಿದ್ದರು. ನಾವು ಗೋಕಾಕ್ ಚಳವಳಿಯ ಬಗ್ಗೆ ಜ್ಞಾಪಕ ಮಾಡಿಕೊಂಡಾಗ. ಡಾ. ರಾಜ್ ಚಳವಳಿಗೆ ಧುಮುಕಿದಾಗಲೇ ಗೋಕಾಕ್ ಚಳವಳಿಗೆ ಚಾಲನೆ, ಹುರುಪು ಸಿಕ್ಕಿತು ಎಂದು ಸದಾನಂದ ಗೌಡರು ಹೇಳಿದರು.

ಡಾ.ರಾಜ್ ಅಪಹರಣವಾಗಿ 108 ದಿನಗಳಲ್ಲಿ ಬಿಡುಗಡೆಯಾದ ಬಳಿಕ ಕರ್ನಾಟಕದ ಮಣ್ಣನ್ನು ಕೈಗೆತ್ತಿಕೊಂಡು ನಮಸ್ಕಾರ ಮಾಡಿದರು. ಇವತ್ತು ಅದ್ಭುತವಾದ ಸ್ಮಾರಕ ಲೋಕಾರ್ಪಣೆಯಾಗಿದೆ. ಡಾ.ರಾಜ್ ಶಾಶ್ವತವಾಗಿ ಕನ್ನಡ ನೆಲದಲ್ಲಿದ್ದು, ಇಂತಹ ಅದ್ಭುತ ಕೆಲಸ ಮಾಡಿದ ಎಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ. ಜೈ ಹಿಂದ್, ಜೈ ಕರ್ನಾಟಕ ಎಂದು ಹೇಳಿ ಮಾತು ಮುಗಿಸಿದರು. 

Share this Story:

Follow Webdunia kannada