ವಿಜಯೇಂದ್ರ ಹಿಸ್ಟರಿ ಬಿಚ್ಚಿಡುತ್ತೇನೆ ಎಂದು ಸವಾಲು ಹಾಕಿದ ಸಂಸದ ಡಾ ಕೆ ಸುಧಾಕರ್

Krishnaveni K
ಬುಧವಾರ, 29 ಜನವರಿ 2025 (17:27 IST)
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇದೀಗ ಮತ್ತೊಬ್ಬ ಪ್ರಮುಖ ನಾಯಕ ಸಿಡಿದೆದ್ದಿದ್ದಾರೆ. ಸಂಸದ ಡಾ ಕೆ ಸುಧಾಕರ್ ನಿಮ್ಮ ಹಿಸ್ಟರಿ ಬಿಚ್ಚಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದ್ದಂತೇ ಈಗ ವಿಜಯೇಂದ್ರ ವಿರುದ್ಧ ಒಬ್ಬೊಬ್ಬರೇ ನಾಯಕರು ಬಹಿರಂಗವಾಗಿಯೇ ಕಿಡಿ ಕಾರುತ್ತಿದ್ದಾರೆ. ಯತ್ನಾಳ್ ಬಣದ ಬಳಿಕ ಶ್ರೀರಾಮುಲು ಸಿಡಿದೆದ್ದಿದ್ದರು. ಇದೀಗ ಚಿಕ್ಕಬಳ್ಳಾಪುರ ಸಂಸದ ಡಾ ಕೆ ಸುಧಾಕರ್ ಅಸಮಾಧಾನ ಹೊರಹಾಕಿದ್ದಾರೆ.

ಚಿಕ್ಕಬಳ್ಳಾಪುರ ಬಿಜೆಪಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ತಮ್ಮ ಅಭಿಪ್ರಾಯಕ್ಕೆ ಬೆಲೆ ನೀಡದೇ ಇರುವುದು ಸುಧಾಕರ್ ಅಸಮಾಧಾನಕ್ಕೆ ಕಾರಣವಾಗಿದೆ. ತಾಕತ್ತಿದ್ದರೆ ನಿಮ್ಮ ನಾಯಕತ್ವದಲ್ಲಿ ಚಿಕ್ಕಬಳ್ಳಾಪುರದಲ್ಲಿ ಒಂದು ಸೀಟು ಗೆಲ್ಲಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ನಿಂದ ಬಂದ ತಮ್ಮನ್ನು ನಡೆಸಿಕೊಳ್ಳುತ್ತಿರುವ ಬಗ್ಗೆಯೂ ಸುಧಾಕರ್ ಅಸಮಾಧಾನ ಹೊರಹಾಕಿದ್ದಾರೆ. ವಿಜಯೇಂದ್ರಗೆ ಅಹಂಕಾರ, ದರ್ಪ ಇದೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿನಯವಂತಿಕೆಯೇ ಇಲ್ಲ. ಹೀಗೇ ಮುಂದುವರಿದರೆ ಪಕ್ಷ ಬಿಡುಬೇಕಾಗುತ್ತದೆ ಎಂದು ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಟನೆಲ್ ರೋಡ್ ಹೆಸರಲ್ಲಿ ಜನರ ಜೀವದ ಜೊತೆ ಚೆಲ್ಲಾಟ ಬೇಡ: ಶೋಭಾ ಕರಂದ್ಲಾಜೆ ಎಚ್ಚರಿಕೆ

ಬೆಂಗಳೂರು ಸುರಂಗ ರಸ್ತೆ ನೆಪದಲ್ಲಿ ದುಡ್ಡು ಹೊಡೆಯುವ ಸ್ಕೀಮ್: ಆರ್ ಅಶೋಕ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬಿಹಾರ ಚುನಾವಣೆ ನ್ಯಾಯವಾಗಿ ನಡೆದಿಲ್ಲ ಎಂದ ರಾಹುಲ್ ಗಾಂಧಿ: ವಿದೇಶದಲ್ಲಿ ಕೂತು ನೆಪ ಹೇಳ್ತೀರಿ ಎಂದ ನೆಟ್ಟಿಗರು

ರಾಹುಲ್ ಗಾಂಧಿ ಮತಗಳ್ಳತನ ಹೋರಾಟದ ಕತೆ ಏನಾಗಲಿದೆ

ಮುಂದಿನ ಸುದ್ದಿ
Show comments