Webdunia - Bharat's app for daily news and videos

Install App

ನಾಳೆಯೇ ಡಾ ಮಂಜುನಾಥ್ ಬಿಜೆಪಿಗೆ ಸೇರ್ಪಡೆ

Krishnaveni K
ಬುಧವಾರ, 13 ಮಾರ್ಚ್ 2024 (15:59 IST)
ಬೆಂಗಳೂರು: ಜಯದೇವ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಬಿಜೆಪಿ ಸೇರ್ಪಡೆಗೆ ಮುಹೂರ್ತ ಫಿಕ್ಸ್ ಆಗಿದೆ. ನಾಳೆಯೇ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ಡಾ ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ತಯಾರಿ ನಡೆಸಿದೆ. ಇದಕ್ಕೆ ಈಗಾಗಲೇ ಡಾ ಮಂಜುನಾಥ್ ಮನವೊಲಿಸಲಾಗಿದೆ. ಅವರೂ ಕೂಡಾ ಒಪ್ಪಿದ್ದಾರೆ ಎನ್ನಲಾಗಿದೆ.

ಇದೇ ಕಾರಣಕ್ಕೆ ನಾಳೆ ಅಧಿಕೃತವಾಗಿ ಮಂಜುನಾಥ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುತ್ತಿದೆ. ನಾಳೆ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಂಜುನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ಸಂಜೆ ಬಿಎಸ್ ಯಡಿಯೂರಪ್ಪ ನೇರವಾಗಿ ಮಂಜುನಾಥ್ ಅವರನ್ನು ಭೇಟಿಯಾಗಿ ಮಾತನಾಡಲಿದ್ದಾರೆ.

ನಾಳೆಯ ಕಾರ್ಯಕ್ರಮಕ್ಕೆ ಯಡಿಯೂರಪ್ಪ, ಬಿವೈ ವಿಜಯೇಂದ್ರ, ಆರ್.ಅಶೋಕ್ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಉಪಸ್ಥಿತರಿದ್ದು ಮಂಜುನಾಥ್ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ. ಮಂಜುನಾಥ್ ಪಕ್ಷ ಸೇರ್ಪಡೆಯಾಗಬೇಕೆಂಬುದು ಬಿಜೆಪಿ ಹೈಕಮಾಂಡ್ ಒತ್ತಾಸೆಯೂ ಆಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೃಷ್ಣ ಭೈರೇಗೌಡ ಬಳಿಕ ಭೈರತಿ ಸುರೇಶ್ ಸರದಿ: ದಿಡೀರ್ ಬಿಎಂಟಿಸಿ ಬಸ್ ಸ್ಟ್ಯಾಂಡ್ ನಲ್ಲಿ ಸಚಿವರು ಪ್ರತ್ಯಕ್ಷ Video

ಸಾರ್ವಜನಿಕರ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ನೀಡಲು ಸರ್ಕಾರದಿಂದ ಪ್ರಜಾಸೇವಾ ಅಭಿಯಾನ: ಕಾರ್ಯನಿರ್ವಹಣೆ ಹೇಗೆ ಗಮನಿಸಿ

H-1B ಕಟ್ಟುಪಾಡು: ಭಾರತೀಯ ಐಟಿ ಮಂದಿಗೆ ಸವಾಲೋ, ಗ್ಲೋಬಲ್ ಆಫರ್ ಪಡೆಯುವ ಬಂಗಾರದ ಅವಕಾಶವೋ

ಉತ್ತರ ಪ್ರದೇಶದಲ್ಲಿ ಖಾಸಗಿ ಬಸ್ ಏರಿದ ಯುವತಿಗೆ ಇದೆಂಥಾ ಶಾಕ್: ಬಸ್ ನಲ್ಲೇ ನಡೆಯಿತು ರೇಪ್ Video

ಸಚಿವರೆಂದರೆ ಹೀಗಿರಬೇಕು…ಬೆಳ್ಳಂ ಬೆಳಿಗ್ಗೆ ಕಸದ ಗಾಡಿ ಪಕ್ಕ ಕೃಷ್ಣ ಭೈರೇಗೌಡ ನೋಡಿ ಜನರಿಗೆ ಶಾಕ್: Video

ಮುಂದಿನ ಸುದ್ದಿ
Show comments