Webdunia - Bharat's app for daily news and videos

Install App

ಗೋವನ್ನು ಹಣದ ಲೆಕ್ಕದಲ್ಲಿ ಅಳೆಯಬೇಡಿ : ರಾಘವೇಶ್ವರಶ್ರೀ

Webdunia
ಗುರುವಾರ, 28 ಜುಲೈ 2016 (19:38 IST)
ಗೋವನ್ನು ಹಣದಲೆಕ್ಕದಲ್ಲಿ ಅಳೆಯಬೇಡಿ, ಗೋವುಗಳನ್ನು ದೇಶ ಪೂಜಿಸಿದರೆ, ಭಾರತ ದೇಶವು ತನ್ನ ವೈಭವವನ್ನು ಮರಳಿ ಪಡೆಯಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ನುಡಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ, ಗೋವಿನಲ್ಲಿ ಸಂತತ್ವ ಇದೆ, ಸಾಮಾನ್ಯರ ಬರಿಗಣ್ಣಿಗೆ ಕಾಣಲಾಗದ್ದನ್ನು ಕೂಡ ಗೋವು ಅರಿಯಬಲ್ಲದು. ತಿರುಪತಿ ಮುಂತಾದ ಪುಣ್ಯಕ್ಷೇತ್ರಗಳು ಕೂಡ ಗೋವಿನಿಂದಾಗಿ ಗೋಚರಿಸಿತು ಎಂದ ಶ್ರೀಗಳು, ಶ್ರೀಮಠದ ಗೋಜಾಗೃತಿಯ ಆಂದೋಲನಕ್ಕೆ ಸ್ಪೂರ್ತಿಯಾದ ‘ಮಹಾನಂದಿ’ ಹಾಗೂ ಕೆಲದಿನಗಳ ಹಿಂದೆ ಕಸಾಯಿಖಾನೆ ಪಾಲಾಗುತ್ತಿದ್ದಾಗ ರಕ್ಷಿಸಲ್ಪಟ್ಟ ‘ಧವಲಗಿರಿ’ ನಂದಿಗಳಲ್ಲಿನ ಸಂತತ್ವ ಗುಣಗಳನ್ನು ಸಭೆಗೆ ತಿಳಿಸಿದರು.
 
ಮೈಸೂರಿನ ಆಯುರ್ವೇದ ತಜ್ಞ ಡಾ. ಪ್ರಸನ್ನ ವೆಂಕಟೇಶ್ ಅವರಿಗೆ ಗೋಸೇವಾಪುರಸ್ಕಾರವನ್ನು ಅನುಗ್ರಹಿಸಿದ ಪೂಜ್ಯ ಶ್ರೀಗಳು, ಗೋವಿಲ್ಲದೇ ಆಯುರ್ವೇದವಿಲ್ಲ, ಆಯುರ್ವೇದ ತಜ್ಞರು ಗೋವನ್ನುಮರೆಯಬಾರದು, ಗೋವಿನ ಕುರಿತು ಮತ್ತಷ್ಟು ಅನ್ವೇಷಣೆಗಳಾಗಲಿ ಎಂದು ಆಶಿಸಿದರು. 
 
ಗುಲ್ಬರ್ಗಾದ  ಶ್ರೀ ರೇವಣಸಿದ್ಧ ಶಿವಾಚಾರ್ಯ ಮಹಾಸ್ವಾಮೀಜಿಗಳು ಸಂತಸಂದೇಶವನ್ನು ನೀಡಿ, ಕಲ್ಲುಮಣ್ಣಿನಲ್ಲಿ ನಾವು ದೇವರನ್ನು ಕಾಣುತ್ತೇವೆ, ಹಾಗೆಯೇ ಗೋವಿನಲ್ಲೂ ದೇವರನ್ನು ಕಂಡು ಗೋಜಾಗೃತಿ ಮೂಡಿಸುತ್ತಿರುವ ಅಪರೂಪದ ಸಂತರು ರಾಘವೇಶ್ವರ ಶ್ರೀಗಳು, ಮನೆಮನೆಗಳಲ್ಲಿ ಗೋವಿಗೆ ಸ್ಥಾನನೀಡುವ ಮೂಲಕ ಗೋವಿನ ಕುರಿತಾದ ಶ್ರೀಗಳ ಆಂದೋಲನಕ್ಕೆ ನಮ್ಮ ಅಳಿಲು ಸೇವೆ ಸಲ್ಲಿಸೋಣ ಎಂದು ಕರೆನೀಡಿದರು. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು, ದೇವಾಪುರ, ಯಾದಗಿರಿ ಹಾಗೂ ಶಹಾಪುರದ ಶ್ರೀ ಶಿವಲಿಂಗರಾಜೇಂದ್ರ  ಶಿವಾಚಾರ್ಯ ಮಹಾಸ್ವಾಮೀಜಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
 
ಗೋಸೇವಾಪುರಸ್ಕಾರವನ್ನು ಸ್ವೀಕರಿಸಿದ  ಮೈಸೂರಿನ ಆಯುರ್ವೇದ ತಜ್ಞ ಡಾ. ಪ್ರಸನ್ನ ವೆಂಕಟೇಶ್ ಅವರು, ‘ದೇಶಿ ಗೋಸೇವಾ ಪುರಸ್ಕಾರ ಪಡೆದ ಮೈಸೂರಿನ ಆಯುರ್ವೇದ ತಜ್ಞ ಡಾ. ಪ್ರಸನ್ನ ವೆಂಕಟೇಶ್ ಗೋವಿನ ಹಾಲು ಮತ್ತು ಮಜ್ಜಿಗೆ’ ಎಂಬ ವಿಷಯದ ಕುರಿತು ಮಾತನಾಡಿದರು. ಗೋಸಂರಕ್ಷಣೆಯಲ್ಲಿ ನಾವು ಕೈ ಜೋಡಿಸದೇ ಇದ್ದರೆ, ಅಮೃತವನ್ನು ಕೈಯಾರೆ ನಾವೇ ಕಳದುಕೊಂಡಂತೆ  ಎಂದು ಅಭಿಪ್ರಾಯಪಟ್ಟರು.
 
ಶ್ರೀಭಾರತೀಪ್ರಕಾಶನವು ಹೊರತಂದ ‘ಪರಾಶರ’ ಎಂಬ ಪುಸ್ತಕ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿಯನ್ನು ರಾಘವೇಶ್ವರಶ್ರೀಗಳು ಲೋಕಾರ್ಪಣೆ ಮಾಡಿದರು. ಪುಸ್ತಕದ ಲೇಖಕಕರಾದ ವಿದ್ವಾನ್ ಗುರುಪ್ರಸಾದ್ ಮೈಸೂರು ಅವರು ಶ್ರೀಗಳಿಂದ ಆಶೀರ್ವಾದ ಪಡೆದರು. ಸಭಾಕಾರ್ಯಕ್ರಮದ ನಂತರ ಕಲಾರಾಮದಲ್ಲಿ ಭೂಮಾ ಭಾರದ್ವಾಜ್ ಮತ್ತು ಬಿಂಜು ನಾಯಕ್ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು. 
 
ಸಿದ್ದಾಪುರ, ಭಾನ್ಕುಳಿ, ಇಟಗಿ, ತಾಳಗುಪ್ಪ-ಇಡವಾಣಿ ವಲಯದವರು ಸರ್ವಸೇವೆಯನ್ನು ನೆರವೆರಿಸಿದರು. ಹೈ.ಕ ಜನಸಂಘರ್ಷ ಸಮಿತಿಯ ಶ್ರೀ ನಾಗದೇವ ಮಠಪತಿ,  ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು,  ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ನಡಿಬೈಲು ಮಹಾಬಲ ಭಟ್ ದಂಪತಿಗಳು ಸಭಾಪೂಜೆಯನ್ನು ನೆರವೇರಿಸಿದರು. ಮೋಹನ ಭಾಸ್ಕರ ಹೆಗಡೆ ಹಾಗೂ ಸತ್ಯನಾರಾಯಣ ಭಟ್ ನಿರೂಪಿಸಿದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
ಇಂದಿನ ಕಾರ್ಯಕ್ರಮ (29.07.2016):
 
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಬೆಳಗ್ಗೆ 12.00 : ಫಲಸಮರ್ಪಣೆ, ಅನುಗ್ರಹ ಮಂತ್ರಾಕ್ಷತೆ 
ಅಪರಾಹ್ನ 3.00 :  
      ಗೋಸಂದೇಶ : ದೇಶಿ ಹಾಲು ಮತ್ತು ಶಿಶು ಆರೋಗ್ಯ - ಡಾ. ಹನುಮಂತ ಮಳಲಿ
      ಲೋಕಾರ್ಪಣೆ : ವನಜೀವನ ಯಜ್ಞ - ಪುಸ್ತಕ : ಲೇಖಕ - ನರೇಂದ್ರ ಹೊಂಡಗಾಶಿ
                         ಸಾಧನಾಪಂಚಕ ಪ್ರವಚನಮಾಲಿಕೆ - ಧ್ವನಿಮುದ್ರಿಕೆ
      ಗೋಸೇವಾಪುರಸ್ಕಾರ : ಭಾಜನರು - ಡಾ. ಹನುಮಂತ ಮಳಲಿ 
      ಸಂತ ಸಂದೇಶ : ಶ್ರೀ ಶ್ರೀ ಶ್ರೀ 1008 ಶ್ರೀ ವಿದ್ಯಾವಾರಿಧಿ ತೀರ್ಥ ಶ್ರೀಪಾದಂಗಳವರು,
                         ಶ್ರೀಮತ್ ಕಣ್ವಮಠ ಮೂಲ ಮಹಾಸಂಸ್ಥಾನ (ವೀಟಘಟ್ಟ) ಹುಣಸಿಹೊಳೆ
                        ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
                       ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
                       ರಾತ್ರಿ 8.00 : ಶ್ರೀಸಂಸ್ಥಾನದವರಿಂದ 'ಸಾಧನಾಪಂಚಕ' ಪ್ರವಚನ

 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments