Select Your Language

Notifications

webdunia
webdunia
webdunia
webdunia

ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಕೈ ಮುಗಿದು ಬೇಡಿದ ಸಿಎಂ ಸಿದ್ದರಾಮಯ್ಯ

ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಕೈ ಮುಗಿದು ಬೇಡಿದ ಸಿಎಂ ಸಿದ್ದರಾಮಯ್ಯ
ಮೈಸೂರು , ಮಂಗಳವಾರ, 13 ಅಕ್ಟೋಬರ್ 2015 (13:43 IST)
ಇಂದು ನಾಡಹಬ್ಬ ದಸರಾದಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ದಸರಾ ಉದ್ಘಾಟನೆಯ ಬಳಿಕ ಮಾತನಾಡಿ ರೈತರ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಆದ ಕಾರಣ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು. 
 
ದಸರಾ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಈ ಹಿಂದಿನಿಂದಲೂ ಕೂಡ ರಾಜ್ಯ ಸರ್ಕಾರವೇ ದಸರಾ ಉಸ್ತುವಾರಿಯನ್ನು ವಹಿಸಿ ಎಂದಿನ ಸಂಪ್ರದಾಯದಂತೆ ನಡೆಸಿಕೊಂಡು ಬರುತ್ತಿದೆ. ಅಲ್ಲದೆ ಪ್ರಸ್ತುತ ರಾಜ್ಯದಲ್ಲಿ ಬರಗಾಲ ಆವರಿಸಿರುವ  ಹಿನ್ನೆಲೆಯಲ್ಲಿ ದಸರಾವನ್ನು ಸರಳವಾಗಿ ಆಚರಿಸಲಾಗುತ್ತಿದೆ. ವಿಶೇಷವೆಂದರೆ ರೈತರ ಆತ್ಮಹತ್ಯೆಯನ್ನು ತಡೆಗಟ್ಟಬೇಕು ಹಾಗೂ ರೈತನಲ್ಲಿ ಆತ್ಮವಿಶ್ವಾಸ ಮೂಡಿಸಬೇಕು ಎಂಬ ಹಿತದೃಷ್ಟಿಯಿಂದ ರೈತ ಪುಟ್ಟಯ್ಯ ಅವರಿಂದ ದಸರಾಗೆ ಚಾಲನೆ ನೀಡಲಾಗಿದೆ ಎಂದರು.  

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಸಂಖ್ಯೆ ಕಡಿಮೆಯಾಗಿತ್ತು. ಈ ಹಿಂದಿನ ವರ್ಷಗಳಲ್ಲಿ ಅಂದರೆ 2013-14ನೇ ಸಾಲಿನಲ್ಲಿ 58 ಮಂದಿ, 2014-15ನೇ ಸಾಲಿನಲ್ಲಿ 48 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಈ ವರ್ಷ ಮಾತ್ರ ರಾಜ್ಯದಲ್ಲಿ ಒಟ್ಟು 516 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದು ಸಹಿಸಲು ಅಸಾಧ್ಯ. ಆದರೆ ಇಡೀ ದೇಶವೇ ಬರಗಾಲವನ್ನೆದುರಿಸುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಅತಂತ್ರಕ್ಕೆ ಸಿಲುಕಿವೆ ಎಂದರು. 
 
ಇದೇ ವೇಳೆ, ಆತ್ಮಹತ್ಯೆ ಎಂಬುದು ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇಡೀ ದೇಶಕ್ಕೆ ಆತ್ಮಹತ್ಯೆ ಭೀತಿ ತಟ್ಟಿದೆ. ಆದರೆ ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ 1 ನಿಮಿಷ ಕುಟುಂಬದ ಇತರೆ ಸದಸ್ಯರ ಬಗ್ಗೆ ಯೋಚಿಸಬೇಕು. ನೀವು ಆತ್ಮಹತ್ಯೆ ಮಾಡಿಕೊಂಡಲ್ಲಿ ತಮ್ಮನ್ನು ನಂಬಿಕೊಂಡಿರುವವರು ಬೀದಿ ಪಾಲಾಗುತ್ತಾರೆ ಎಂದು ಸಲಹೆ ನೀಡಿದ ಸಿದ್ದರಾಮಯ್ಯ, ಆತ್ಮಹತ್ಯೆಯನ್ನು ಮಾಡಿಕೊಳ್ಳಬೇಡಿ ಎಂದು ರೈತರಲ್ಲಿ ಕೈ ಮುಗಿದು ಮನವಿ ಮಾಡಿಕೊಂಡರು. ಇದೇ ವೇಳೆ ಪ್ರಗತಿಪರ ರೈತ ಪುಟ್ಟಯ್ಯ ಅವರನ್ನು ಪ್ರಶಂಸಿಸಿದರು.

Share this Story:

Follow Webdunia kannada