Select Your Language

Notifications

webdunia
webdunia
webdunia
webdunia

ರಾಜ್ಯಕ್ಕೆ ಅನ್ಯಾಯವಾಗದಂತೆ ಸಚಿವೆ ಉಮಾಭಾರತಿಗೆ ಪೇಜಾವರ ಶ್ರೀಗಳ ಮನವಿ

ರಾಜ್ಯಕ್ಕೆ ಅನ್ಯಾಯವಾಗದಂತೆ ಸಚಿವೆ ಉಮಾಭಾರತಿಗೆ ಪೇಜಾವರ ಶ್ರೀಗಳ ಮನವಿ
ಉಡುಪಿ , ಶುಕ್ರವಾರ, 30 ಸೆಪ್ಟಂಬರ್ 2016 (19:39 IST)
ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಬಾರದೆಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಅವರಿಗೆ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಕರೆ ಮಾಡಿರುವುದಾಗಿ ಹೇಳಿದ್ದಾರೆ. 
 
ಕೇಂದ್ರ ಸಚಿವೆ ಉಮಾಭಾರತಿಯವರು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಕಟ್ಟಾ ಶಿಷ್ಯೆಯಾಗಿರುವ ಕಾರಣಕ್ಕಾಗಿ ಸ್ವಾಮೀಜಿ ಅವರು ಕರೆ ಮಾಡಿ, ಕರ್ನಾಟಕ ರಾಜ್ಯಕ್ಕೆ ಯಾವುದೇ ಕಾರಣಕ್ಕೂ ಅನ್ಯಾಯವಾಗಬಾರದೆಂದು ಹೇಳಿದ್ದಾರೆಂದು ಮಠದ ಮೂಲಗಳು ತಿಳಿಸಿವೆ. 
 
ತಮಿಳುನಾಡಿನಲ್ಲಿ ನನಗೆ ಭಕ್ತರಿದ್ದಾರೆ. ಆದರೆ, ಯಾವುದೇ ರಾಜಕಾರಣಿಗಳೊಂದಿಗೆ ಒಡನಾಟವಿಲ್ಲ ಎಂದು ಶ್ರೀಗಳು ಸ್ಪಷ್ಟಪಡಿಸಿದ್ದಾರೆ.
 
ಉಡುಪಿಯ ಪೇಜಾವರ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ ಅವರು, ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಿಂದ ನಮಗೆ ಈವರೆಗೂ ಅನುಕೂಲವಾಗಿಲ್ಲ. ಜಲ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ರಾಜ್ಯದ ಜನತೆ ಗಲಾಟೆ-ಹಿಂಸಾಚಾರ ಆಗದಿರಲಿ ಎಂದು ಎರಡು ರಾಜ್ಯಗಳ ಜನತೆಯ ಬಳಿ ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಾಟ್ಸ್‌ಅಪ್‌ ವೈರಲ್ ಫನ್ನಿ ವಿಡಿಯೋ