Webdunia - Bharat's app for daily news and videos

Install App

ಸಚಿವ ಪರಮೇಶ್ವರ್ ನಾಯ್ಕ ವಿರುದ್ಧ ದಾಖಲೆ ಬಿಡುಗಡೆ ಸುಳಿವು

Webdunia
ಬುಧವಾರ, 8 ಜೂನ್ 2016 (17:29 IST)
ಡಿವೈಎಸ್‌ಪಿ ಹುದ್ದೆಗೆ ರಾಜೀನಾಮೆ ನೀಡಿ, ಕಳೆದ ನಾಲ್ಕು ದಿನಗಳಿಂದ ಅಧಿಕಾರಿಗಳ ಸಂಪರ್ಕಕ್ಕೆ ಸಿಗದಿರುವ ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ, ನಾಳೆ ಬಳ್ಳಾರಿ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ ವಿರುದ್ಧದ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಜೂನ್ 4 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ಅಜ್ಞಾತ ಪ್ರದೇಶಕ್ಕೆ ತೆರಳಿರುವ ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರು ನಾಳೆ ಕುಟುಂಬ ಸಮೇತ ಬಳ್ಳಾರಿಗೆ ತೆರಳಿ ಮಾಧ್ಯಮದ ಮುಂದೆ ಪ್ರತ್ಯಕ್ಷರಾಗಲಿದ್ದಾರೆ ಎಂದು ಅವರ ಸಹೋದರ ಮಾಹಿತಿ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಬಳ್ಳಾರಿ ಉಸ್ತುವಾರಿ ಸಚಿವರ ವಿರುದ್ಧ ಮಹತ್ವದ ದಾಖಲೆಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿದೆ ಎಂದು ಮೂಲಗಳು ತಿಳಿಸಿವೆ.
 
ಬಳ್ಳಾರಿ ಉಸ್ತುವಾರಿ ಸಚಿವರ ಬೆಂಬಲಿಗರ ಪುಂಡಾಟಿಕೆಗೆ ಬೇಸತ್ತು ಅನುಪಮಾ ಶೆಣೈ ಅವರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದ್ದು. ಅವರು ಕಳೆದ ನಾಲ್ಕು ದಿನಗಳಿಂದ ಅಜ್ಞಾತ ಸ್ಥಳದಿಂದ ಫೇಸ್ ಬುಕ್ ಸಾಮಾಜಿಕ ಜಾಲತಾಣ ಮೂಲಕ ಸರಕಾರ ಮತ್ತು ರಾಜಕಾರಣದ ವಿರುದ್ಧ ಸಮರ ಸಾರಿದ್ದರು.
 
ನನ್ನ ವಿರುದ್ಧ ಅನುಪಮಾ ಶೆಣೈ ಅವರು ಮೊದಲು ಸಿಡಿ ಬಿಡುಗಡೆ ಮಾಡಲಿ. ನಾನು ಏಕಪತ್ನಿ ವೃತಸ್ಥ ಇದು ನೂರಕ್ಕೆ ನೂರು ಸತ್ಯ. ಇದುವರೆಗೂ ನಾನು ಹಾನಗಲ್ ಗೆಸ್ಟ್ ಹೌಸ್‌ಗೆ ತೆರಳಿಲ್ಲ. ರಾಜಕೀಯದಲ್ಲಿ ನನ್ನ ಏಳಿಗೆ ಸಹಿಸದವರು ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅನುಪಮಾ ಶೆಣೈ ಅವರು ಮೊದಲು ನನ್ನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲಿ. ನಂತರ ನನ್ನ ರಾಜೀನಾಮೆ ಕೇಳಲಿ ಎಂದು ಪರಮೇಶ್ವರ್ ನಾಯ್ಕ ಹೇಳಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್ ಬೆನ್ನಲ್ಲೇ ಇಸ್ರೇಲ್‌ನಿಂದ ಭಾರತೀಯರನ್ನು ಕರೆತರಲು ಮುಂದಾದ ಕೇಂದ್ರ ಸರ್ಕಾರ

ರಾಹುಲ್ ಗಾಂಧಿ ಜನ್ಮದಿನಕ್ಕೆ ಡಿಕೆಶಿಯಿಂದ ಕಣ್ಣುಗಳೇ ಗಿಫ್ಟ್

Sonia Gandhi: ಹಿರಿಯ ನಾಯಕಿ ಆಸ್ಪತ್ರೆಯಿಂದ ಡಿಸ್ಚಾರ್ಜ್‌

Air India Plane Crash: ತಾಯ್ನಾಡಿಗೆ ತಲುಪಿದ ಸಿಬ್ಬಂದಿ ಲಾಮ್‌ನುಂಥೆಮ್‌ ಮೃತದೇಹ

ಆಧುನಿಕ ಹಿಟ್ಲರ್ ಖಮೇನಿ ಅಸ್ತಿತ್ವ ಹೆಚ್ಚು ದಿನ ಇರಲ್ಲ: ಇಸ್ರೇಲ್ ರಕ್ಷಣಾ ಸಚಿವ ವಾರ್ನಿಂಗ್‌

ಮುಂದಿನ ಸುದ್ದಿ
Show comments