ಬೆಂಗಳೂರಿಗರೇ ನೀವು ಮುದ್ದಾಗಿ ಸಾಕುವ ನಾಯಿಯಿಂದಲೇ ಅಪಾಯ ಎದುರಾಗಬಹುದು

Krishnaveni K
ಮಂಗಳವಾರ, 28 ಮೇ 2024 (10:13 IST)
ಬೆಂಗಳೂರು:  ಶ್ವಾನ ಪ್ರಿಯ ಬೆಂಗಳೂರಿಗರಿಗೆ ಪಶು ವೈದ್ಯರು ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ.  ಮುದ್ದಾಗಿ ಸಾಕುವ ನಿಮ್ಮ ನಾಯಿಯಿಂದಲೇ ಅಪಾಯ ಎದುರಾಗಬಹುದು ಎಂದಿದ್ದಾರೆ.

ಬೆಂಗಳೂರಿನಲ್ಲಿ ನಾಯಿಗಳಿಗೆ ಇತ್ತೀಚೆಗೆ ಇಲಿ ಜ್ವರ ಹೆಚ್ಚಾಗುತ್ತಿದೆ. ಇದು ಜನರಿಗೂ ಹರಡುವ ಅಪಾಯವಿದೆ. ಹೀಗಾಗಿ ನಿಮ್ಮ ನಾಯಿಗಳು ಜ್ವರಕ್ಕೆ ತುತ್ತಾದರೆ ಎಚ್ಚರವಾಗಿರಬೇಕು ಎಂದು ಪಶು ವೈದ್ಯರು ಎಚ್ಚರಿಸಿದ್ದಾರೆ.

ಇಲಿ ಜ್ವರ ಎನ್ನುವುದು ಇಲಿಗಳ ಮೂತ್ರದಿಂದ ಹರಡುತ್ತದೆ. ಇದು ನಾಯಿಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ನಾಯಿಗಳಿಂದ ಇದು ಮನುಷ್ಯರಿಗೂ ಹರಡುವ ಅಪಾಯವಿದೆ. ನಾಯಿಗಳಿಗೆ ಇದಕ್ಕೆ ಲಸಿಕೆ ಹಾಕಿಸಿಕೊಳ್ಳಬಹುದು. ಆದರೆ ಮನುಷ್ಯರಿಗೆ ಯಾವುದೇ ಲಸಿಕೆಯಿಲ್ಲ. ಹೀಗಾಗಿ ಎಚ್ಚರಿಕೆಯಿಂದಿರಬೇಕು.

ನಾಯಿಗಳಿಗೆ ಅತೀವ ಜ್ವರ, ಕಣ್ಣುಗಳು ಹಳದಿಗಟ್ಟುವುದು, ವಾಂತಿ ಬೇಧಿ ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಚಿಕಿತ್ಸೆ ಮಾಡಿಸಬೇಕು. ಜ್ವರ ಪೀಡಿತ ನಾಯಿಗಳನ್ನು ಮಕ್ಕಳಿಂದ ದೂರವೇ ಇಡಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಎಲ್ಲರೆದುರೆ ಮೈಮರೆತ ಜೋಡಿ, ಮೆಟ್ರೋ ಪ್ರಯಾಣಿಕರಿಗೆ ಇರುಸು ಮುರುಸಾದ ಯುವ ಜೋಡಿಗಳ ಪ್ರಣಯ

ಮಂಗಳೂರು ಜೈಲಿನಲ್ಲಿ 12ಅಡಿ ಎತ್ತರದ ಬೇಲಿ, ಇದರ ಹಿಂದಿದೆ ಈ ಉದ್ದೇಶ

ಮಾಜಿ ಸಚಿವ ರಾಮಚಂದ್ರ ಗೌಡರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

ಕಾಸರಗೋಡು: ಅಪಾಯಕಾರಿ ರೀತಿಯಲ್ಲಿ ಈಜಾಡುತ್ತಿದ್ದ ಹಿನ್ನೆಲೆ ಪೊಲೀಸ್ ದಾಳಿ

ಒಬ್ಬ ಸಚಿವನೂ ಸಾಂತ್ವನ ಹೇಳಲು ಬರಲಿಲ್ಲ, ವಿಶಾಖಪಟ್ಟಣದ ದೋಣಿ ದುರಂತದ ಸಂಬಂಧ ಆಂಧ್ರ ಸರ್ಕಾರಕ್ಕೆ ಜಗನ್ ರೆಡ್ಡಿ ಕ್ಲಾಸ್

ಮುಂದಿನ ಸುದ್ದಿ
Show comments