Webdunia - Bharat's app for daily news and videos

Install App

ರಾಜೀನಾಮೆ ವಾಪಸ್ ಪಡೆಯಲು ವೈದ್ಯರ ಸಮ್ಮತಿ : ಸಂಧಾನ ಯಶಸ್ವಿ

Webdunia
ಬುಧವಾರ, 29 ಅಕ್ಟೋಬರ್ 2014 (17:49 IST)
ಸಾಮೂಹಿಕ ರಾಜೀನಾಮೆ ನೀಡಿದ ವೈದ್ಯರ ಜೊತೆ ಸಿಎಂ ಮಾತುಕತೆಯಲ್ಲಿ ನಿರತವಾಗಿದ್ದು, ಮಾತುಕತೆ ಸುಗಮ ದಾರಿಯಲ್ಲಿ ಸಾಗಿದೆ ಎಂದು ಮೂಲಗಳು ಹೇಳಿವೆ. ವೈದ್ಯರ ಜೊತೆ ಸಿಎಂ ಸಂಧಾನದ ಮಾರ್ಗ ಹಿಡಿದಿದ್ದು, ರಾಜೀನಾಮೆ ವಾಪಸ್ ಪಡೆಯಲು ವೈದ್ಯರು ಸಮ್ಮತಿಸಿದ್ದಾರೆಂದು ತಿಳಿದುಬಂದಿದೆ.

ಸಿಎಂ, ಆರೋಗ್ಯ ಸಚಿವ ಖಾದರ್ ನೇತೃತದಲ್ಲಿ ಈ ಸಭೆ ನಡೆದಿದ್ದು, ವೈದ್ಯರ ಬಹುತೇಕ ಬೇಡಿಕೆಗಳಿಗೆ ಸರ್ಕಾರ ಅಸ್ತು ಎಂದಿದೆ. ಸಿಎಂ ಮಾತುಕತೆಯಿಂದ ವೈದ್ಯರೂ ಸಂತೃಪ್ತರಾಗಿದ್ದು,  ರಾಜೀನಾಮೆ ವಾಪಸ್ ಪಡೆಯಲು ಸಮ್ಮತಿಸಿದರು ಮತ್ತು ಪುನಃ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದರು. ವೈದ್ಯರ ಮುಷ್ಕರದಿಂದಾಗಿ ಜಿಲ್ಲಾಸ್ಪತ್ರೆಗಳಲ್ಲಿ ವೈದ್ಯರ ಕೊರತೆಯಿಂದ ಪರದಾಡುವಂತಾಗಿತ್ತು.

ಕರ್ನಾಟಕ ಹೈಕೋರ್ಟ್ ಕೂಡ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡು ವೈದ್ಯರ ವಿರುದ್ಧ ಎಸ್ಮಾ ಕಾಯ್ದೆ ಏಕೆ ಜಾರಿಗೆ ತಂದಿಲ್ಲ ಎಂದು ಪ್ರಶ್ನಿಸಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರ ರಾಜೀನಾಮೆ ಬಿಕ್ಕಟ್ಟನ್ನು ಕೂಡಲೇ ಇತ್ಯರ್ಥಕ್ಕೆ ಸಿಎಂ ನಿರ್ಧರಿಸಿ ಅವರ ಬಹುತೇಕ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿದ್ದರಿಂದ ಪ್ರಕರಣ ಸುಖಾಂತ್ಯಗೊಂಡಿದೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments