ಇತ್ತೀಚಿಗೆ ಆಕೆಯ ಪತಿ ಪತ್ನಿಯನ್ನು ನೋಡಲು ಆಕೆಯ ತವರಿಗೆ ಬಂದಿದ್ದ. ಆ ಸಂದರ್ಭದಲ್ಲಿ ಆಕೆ ತರಬೇತಿ ಕೇಂದ್ರಕ್ಕೆ ಹೋಗಲೆಂದು ಅಲ್ಲಿನ ಸಮವಸ್ತ್ರವಾಗಿದ್ದ ಪ್ಯಾಂಟ್, ಶರ್ಟ್ ಮತ್ತು ಟೈಯನ್ನು ಧರಿಸಿಕೊಂಡಿದ್ದಳು. ಇದನ್ನು ನೋಡಿದ್ದೇ ತಡ ವ್ಯಗ್ರನಾದ ಆಕೆಯ ಪತಿ ಕೋಪದ ಭರದಲ್ಲಿ ಆಕೆಯ ಮೂಗಿಗೆ ಬಾಯಿ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
ಪಾಶ್ಚಿಮಾತ್ಯ ಶೈಲಿಯ ಬಟ್ಟೆ ಧರಿಸಿದ್ದಾಳೆ ಎಂಬ ಕಾರಣಕ್ಕೆ ಕೋಪಗೊಂಡ ಪತಿಯೊಬ್ಬ ಪತ್ನಿಯ ಮೂಗಿಗೆ ಕಚ್ಚಿ ಗಾಯಗೊಳಿಸಿದ ವಿಲಕ್ಷಣ ಘಟನೆ ಡೆಹರಾಡೂನ್‌ನಲ್ಲಿ ನಡೆದಿದೆ. ಪೀಡಿತ ಪತ್ನಿ ಆಸ್ಪತ್ರೆಗೆ ದಾಖಲಾಗಿದ್ದು, ಪತಿ ಈಗ ಪೊಲೀಸರ ವಶದಲ್ಲಿದ್ದಾನೆ.
ಲಖೀಮ್ ಪುರ್-ಖೇರಿ ಜಿಲ್ಲೆಯ ಮೋತಿಪುರ ಗ್ರಾಮದ ನಿವಾಸಿಯಾಗಿರುವ ರಾಜ್ ಕುಮಾರಿ ದೇವಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿತ್ತು. ಆಕೆಯ ಪೋಷಕರು ಗೋಲಾ ಪ್ರಾಂತ್ಯದಲ್ಲಿ ವಾಸವಾಗಿದ್ದು, ಇತ್ತೀಚಿಗೆ ಅಲ್ಲಿ ಆಕೆ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಸೇರಿಕೊಂಡಿದ್ದು ಕಳೆದ 7 ತಿಂಗಳಿಂದ ಪೋಷಕರ ಜತೆ ವಾಸವಾಗಿದ್ದಳು.