ಹಿಂದೂ ಧರ್ಮ ಅವಹೇಳನ ಮಾಡಿದವರು ಏನಾದ್ರು ಗೊತ್ತಾ?

Webdunia
ಸೋಮವಾರ, 25 ಫೆಬ್ರವರಿ 2019 (18:16 IST)
ಹಿಂದೂ ಧರ್ಮ ಅವಹೇಳನ ಪುಸ್ತಕ ಮಾರಾಟ ಜಾಲ ಪತ್ತೆಯಾಗಿದೆ.

ಹಿಂದೂ ಧರ್ಮವನ್ನು ಅವಹೇಳನ ಮಾಡುವಂತಹ ಪುಸ್ತಕಗಳ ಮಾರಾಟ ಹಿನ್ನೆಲೆಯಲ್ಲಿ ರಾಯಚೂರಿನ ನೇತಾಜಿ ಠಾಣೆಯ ಪೊಲೀಸರು 8 ಜನರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.

ಆಂಧ್ರದ ತಾಡಪತ್ರಿ ಮೂಲದ ಪ್ರಭುನಂದ ಯೋಗೀಶ್ವರ ಮಠದ ಪ್ರಭುನಂದ ಸ್ವಾಮಿಗಳು ಬರೆದ ಪುಸ್ತಕದಲ್ಲಿ ಹಿಂದೂ ಎನ್ನುವ ಪದಕ್ಕೆ ಅರ್ಥವೇ ಇಲ್ಲ. ಇದು ಅರ್ಥ ಹೀನ, ಜ್ಞಾನವಿಲ್ಲದ ಪದವೆಂದು ಪ್ರಚಾರ ಮಾಡಲಾಗಿತ್ತು. ಇಂತಹ ಪುಸ್ತಕ ಮಾರಾಟ ಬಗ್ಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ನೇತಾಜಿ ನಗರ ಠಾಣೆಯ ಪೊಲೀಸರು ಸ್ವಯಂ ತೆರಳಿ ಪುಸ್ತಕಗಳನ್ನು ಪರಿಶೀಲಿಸಿ 8 ಜನರನ್ನು ಬಂಧಿಸಿದ್ದರು.

ಬಂಧಿತರನ್ನು ತೆಲಂಗಾಣ ಮೂಲದ ವನ್ಪರ್ತಿಗೆ ಸೇರಿದ ಸುರೇಶಕುಮಾರ, ರಾಮು ಗೋಪಾಲ್, ಗುರುಮೂರ್ತಿ ವೆಂಕಯ್ಯ, ರವಿ ರಾಮುಲು, ರಾಯಚೂರಿನ ಗಿರಿ ಸುಬ್ಬಯ್ಯ, ಗದ್ವಾಲ್ ಜಯರಾಮ ನಾಯಕ, ಭೀರಯ್ಯ, ನಾರಾಯಣಪೇಟೆ ಮೂಲದ ಈಶ್ವರಯ್ಯ, ಕುರುಮಯ್ಯ, ಕ್ಯಾತನೂರು ಕೆ.ಎನ್.ಕೆ.ಕುಮಾರ, ರಾಮುಲು ಇವರನ್ನು ಬಂಧಿಸಲಾಗಿದೆ. ತಿಮ್ಮಾಪೂರು ಪೇಟೆಯ ಹನುಮಾನ್ ಚಿತ್ರಮಂದಿರ ಬಳಿ ಸೂಪರ್ ಟಾಟಾ ಏಸಿ ವಾಹನದಲ್ಲಿ ಪುಸ್ತಕ ಮಾರಾಟ ಮಾಡಲಾಗುತ್ತಿತ್ತು. ಕುರಿತು ನೇತಾಜಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಎಲ್ಲಾ ಬಂಧಿತರನ್ನು ತಹಶೀಲ್ದಾರರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುರ್ಚಿ ಫೈಟ್ ನಿವಾರಣೆಗೆ ಹೈಕಮಾಂಡ್ ಅಖಾಡಕ್ಕೆ: ಈಗೆಲ್ಲಿದ್ದಾರೆ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಗೆ ಪಟ್ಟ ಕಟ್ಟಲು ಕೈ ಹೈಕಮಾಂಡ್ ಗೆ ಕಾಡುತ್ತಿರುವ ಭಯ ಯಾವುದು ಗೊತ್ತಾ

ಎಲ್ಲಾ ಹೈಕಮಾಂಡ್ ನಿರ್ಧರಿಸುತ್ತದೆ ಎಂದ ಮಲ್ಲಿಕಾರ್ಜುನ ಖರ್ಗೆ: ಹಾಗಿದ್ರೆ ನೀವ್ಯಾರು ಎಂದು ಪ್ರಶ್ನಿಸಿದ ಪಬ್ಲಿಕ್

Karnataka Weather: ರಾಜ್ಯದಲ್ಲಿ ಈ ವಾರವೂ ಮಳೆಯಿರುತ್ತಾ ಇಲ್ಲಿದೆ ಹವಾಮಾನ ವರದಿ

ಅಸಹಾಯಕರಾದ ಮಲ್ಲಿಕಾರ್ಜುನ ಖರ್ಗೆ: ಇನ್ನು ರಾಹುಲ್ ಗಾಂಧಿಯೇ ಬರಬೇಕು

ಮುಂದಿನ ಸುದ್ದಿ
Show comments