ಶಾಲೆಗೆ ನುಗ್ಗಿದ ಪೊಲೀಸ್ ಪೇದೆ ಶಿಕ್ಷಕಿಗೆ ಮಾಡಿದ್ದೇನು ಗೊತ್ತಾ?

Webdunia
ಶುಕ್ರವಾರ, 10 ಜನವರಿ 2020 (06:25 IST)
ಚಿಕ್ಕಬಳ್ಳಾಪುರ : ಪೊಲೀಸ್ ಪೇದೆಯೊಬ್ಬ ಶಾಲೆಗೆ ನುಗ್ಗಿ ಶಿಕ್ಷಕಿಯ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ನಡೆದಿದೆ.



ಗುಡಿಬಂಡೆ ಪೊಲೀಸ್ ಠಾಣೆಯ ಪೇದೆ ರಮೇಶ್ ಎಂಬಾತ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದ ಯುವತಿಯನ್ನು ಪ್ರೀತಿಸುತ್ತಿದ್ದು, ಇವರ ಮದುವೆಗೆ ಶಿಕ್ಷಕಿಯ ಮನೆಯವರು ಒಪ್ಪದ ಕಾರಣ ಪೇದೆ ರಮೇಶ್ ಏಕಾಏಕಿ ಶಾಲೆಗೆ ನುಗ್ಗಿ ಪಾಠ ಮಾಡುತ್ತಿದ್ದ ಶಿಕ್ಷಕಿಯ ಕೈ ಹಿಡಿದು ಎಳೆದಾಡಿ ಮದುವೆಯಾಗೋಣ ಬಾ ಎಂದು ಎಳೆದಾಡಿದ್ದಾನೆ. ಆಗ ಇದನ್ನು ತಡೆಯಲು ಬಂದ ಶಾಲಾ ಮುಖ್ಯಸ್ಥರಿಗೂ ಅವಾಜ್ ಹಾಕಿದ್ದಾನೆ.


ಈ ಘಟನೆಗೆ ಸಂಬಂಧಿಸಿದಂತೆ ಪೇದೆ ರಮೇಶ್ ವಿರುದ್ಧ ಶಾಲಾ ಮುಖ್ಯಸ್ಥರು ಹಾಗೂ ಶಿಕ್ಷಕಿಯ ಪೋಷಕರು ದೂರು ನೀಡಿದ್ದಾರೆ. ಅಲ್ಲದೇ ಶಿಕ್ಷಕಿಯ ಪೋಷಕರ ಒತ್ತಾಯದ ಮೇರೆಗೆ ಎಸ್ ಪಿ ಆತನನ್ನು ಗುಡಿಬಂಡೆ ಠಾಣೆಯಿಂದ ವರ್ಗಾವಣೆ ಮಾಡಿ ತನಿಖೆಗೆ ಆದೇಶಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ, ಸೋನಿಯಾ, ಪ್ರಿಯಾಂಕಾರನ್ನು ಎಂಥವಳೋ ಎಂದು ಸಂಬೋಧನೆ ಮಾಡೋ ತಾಕತ್ತಿದೆಯಾ

ಸಂಕಷ್ಟಕ್ಕೆ ಕೈಜೋಡಿಸಿದ ಭಾರತಕ್ಕೆ ಶ್ರೀಲಂಕಾ ಧನ್ಯವಾದ

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾದಲ್ಲಿ ಮೃತರ ಸಂಖ್ಯೆ 627ಕ್ಕೆ ಏರಿಕೆ, ಇನ್ನೂ ಹಲವು ಮಂದಿ ನಾಪತ್ತೆ

ನಾಳೆಯಿಂದ ಬೆಳಗಾವಿ ಅಧಿವೇಶನ, ಖಾಕಿ ಪಡೆ ಹೈ ಅಲರ್ಟ್‌

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಮುಂದಿನ ಸುದ್ದಿ
Show comments