ಹಣ ನೀಡಲ್ಲ ಎಂದ ತಾಯಿಗೆ ಕುಡುಕ ಮಗ ಮಾಡಿದ್ದೇನು ಗೊತ್ತಾ?

Webdunia
ಶುಕ್ರವಾರ, 18 ಜನವರಿ 2019 (06:22 IST)
ಚಿಕ್ಕಮಗಳೂರು : ಹಣ ನೀಡಲು ನಿರಾಕರಿಸಿದ್ದಕ್ಕೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ  ವೃದ್ಧ ತಾಯಿಯನ್ನೇ ಬರ್ಬರವಾಗಿ ಹತ್ಯೆ ಮಾಡಿ ರೋಡಿಗೆಸೆದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದಿದೆ.


ಮೀನಾಕ್ಷಿ ಮಗನಿಂದ ಕೊಲೆಯಾದ ದುರ್ದೈವಿ. ಗಣೇಶ್(48) ಹಣಕ್ಕಾಗಿ ತಾಯಿಯನ್ನೇ ಕೊಲೆ ಮಾಡಿದ ಪಾಪಿ ಮಗ. ಗಣೇಶ್ ತನ್ನ ತಾಯಿಯೊಂದಿಗೆ ವಾಸವಾಗಿದ್ದು, ಕೆಲವು ವರ್ಷಗಳ ಹಿಂದೆ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದನು. ಇದರಿಂದ ತಾಯಿಯೇ ದುಡಿದು ಸಂಸಾರವನ್ನು ನಡೆಸುತ್ತಿದ್ದರು.


ಆದರೆ ಇತ್ತೀಚೆಗೆ ತಾಯಿಗೆ ಸರ್ಕಾರದಿಂದ ಸುಮಾರು 1.5 ಸಾವಿರ ರೂ. ಪಿಂಚಣಿ ಹಣ ಬಂದಿತ್ತು. ಅದನ್ನು ತನಗೆ ಕೊಡುವಂತೆ ತಾಯಿಯ ಬಳಿ ಕೇಳಿದ್ದ. ಇದಕ್ಕೆ ತಾಯಿ ನಿರಾಕರಿಸಿದಾಗ ರಾತ್ರಿ ಮನೆಗೆ ಕುಡಿದು ಬಂದು ತಾಯಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ತಾಯಿ ಸ್ಥಳದಲ್ಲೇ  ಮೃತಪಟ್ಟಿದ್ದಾರೆ. ಬಳಿಕ ತಾಯಿಯ ಶವವನ್ನು ರಸ್ತೆಮೇಲೆ ಹಾಕಿ ಹೋಗಿದ್ದಾನೆ.


ಇದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಣಕಲ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೆಲಸ ಹುಡುಕಿ ನಗರಕ್ಕೆ ಬಂದಿದ್ದ ಯುವಕ ಅನುಮಾನಸ್ಪದ ಸಾವು

ಬೆಳಗಾವಿ: ಮನೆಯಿಂದ ಕೊಳೆತ ವಾಸನೆ, ಬಾಗಿಲು ತೆರೆದಾಗ ಮಾಜಿ ಪತಿ ಪೊಲೀಸಪ್ಪನ ಕೃತ್ಯ ಬಟಾಬಯಲು

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಮುಂದಿನ ಸುದ್ದಿ
Show comments