ರಾಜಕಾಲುವೆ ಒತ್ತುವರಿ ತೆರವಿಗೆ ನಿರ್ಲಕ್ಷ್ಯ ಬೇಡ-ತುಷಾರ್ ಗಿರಿನಾಥ್

Webdunia
ಗುರುವಾರ, 14 ಸೆಪ್ಟಂಬರ್ 2023 (15:27 IST)
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನಿನ್ನೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನೇತೃತ್ವದಲ್ಲಿ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಸಭೆ ಸೇರಲಾಗಿತ್ತು. ವಿಶೇಷ ಆಯುಕ್ತರಾದ ಹರೀಶ್ ಕುಮಾರ್ ಹಾಗು ತ್ರಿಲೋಕ ಚಂದ್ರ ಸಭೆ ಭಾಗಿಯಾಗಿದ್ರು. ಅಷ್ಟೇ ಅಲ್ಲದೇ ಎಲ್ಲ ವಲಯಗಳ ಜೆಸಿ, ಸಿಇ ಹಾಗು ಇಇಗಳು ಕೂಡ ಹಾಜರಿದ್ರು. ಸಭೆಯಲ್ಲಿ ಯಾವುದೇ ಕಾರಣಕ್ಕೂ ಈ ಬಾರಿ ತೆರವು ವಿಚಾರದಲ್ಲಿ ನಿರ್ಲಕ್ಷ ವಹಿಸದಂತೆ ಸೂಚಿಸಲಾಗಿದೆ. ಇನ್ನು, ಒತ್ತುವರಿ ತೆರವು ವಿಚಾರವಾಗಿ ಸರ್ಕಾರ ಕೆರೆಗೆ ಸಂಬಂಧಿಸಿದಂತೆ ಹಾಗು ಕಾಲುವೆಗೆ ಸಂಬಂಧಿಸಿದಂತೆ ಒಂದು ನೋಟಿಫಿಕೇಶನ್ ಹೊರಡಿಸಿದೆ.

ಅದರ ಅನ್ವಯ ಕಾಲುವೆ ಒತ್ತುವರಿ ವಿಚಾರವಾಗಿ ಪ್ರತಿಯೊಂದು ಕಿಲೋಮೀಟರ್ ಒತ್ತುವರಿ ಪತ್ತೆಹಚ್ಚಲು ಒಬ್ಬ ಇಂಜಿನಿಯರ್‌ಗೆ ಜವಾಬ್ದಾರಿ ನೀಡಲಾಗಿದೆ. ಅವರ ನೇತೃತ್ವದಲ್ಲಿ ಯಾರ ಅವಧಿಯಲ್ಲಿ ಕರ್ತವ್ಯ ಲೋಪ ಅಂತ ರಿಪೋರ್ಟ್ ಮಾಡಬೇಕು. ಪೂರ್ಣವಾದ ತೆರವು ರಿಪೋರ್ಟ್ ಹಾಗು ಕರ್ತವ್ಯ ಲೋಪ ರಿಪೋರ್ಟ್ ಪಾಲಿಕೆಗೆ ಸಲ್ಲಿಸಬೇಕು. 10 ದಿನಗಳಲ್ಲಿ ಅವರಿಗೆ ನೀಡಿರೋ ಟಾಸ್ಕ್ ಮಾಡಿಲ್ಲವಾದ್ರೆ ಆ ಎಂಜಿನಿಯರ್ ವಿರುದ್ದ ಕ್ರಮ ಜರುಗಿಸಲಾಗುತ್ತೆ. ಇದೇ ರೀತಿ 10 ಕೆರೆಗಳ ಒತ್ತುವರಿಗೆ ಸಂಬಂಧಿಸಿದಂತೆ 3 ದಿನಗಳ ಸಮಯ ನೀಡಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಿಸ್ಟರ್ ಕ್ಲೀನ್, ಸ್ಮಶಾನ ಭೂಮಿ, ಕೆರೆ ಅಂಗಳವನ್ನು ತಮ್ಮ ಹೆಸರಿಗೆ ಮಾಡಿಕೊಂಡದ್ದು ಹೇಗೆ

ಆರೋಗ್ಯದಲ್ಲಿ ಏರುಪೇರು, ವಿಶ್ರಾಂತಿಯಲ್ಲಿರುವ ಸಿದ್ದರಾಮಯ್ಯರನ್ನು ಭೇಟಿಯಾದ ಪುತ್ರ ಯತೀಂದ್ರ

ಎಐ ದುರ್ಬಳಕೆ ಬಗ್ಗೆ ಶ್ರೀಲೀಲಾ ಗರಂ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡ ನಟಿ

ಗೋವಾ ನೈಟ್‌ಕ್ಲಬ್ ದುರಂತ, ಪರಾರಿಯಾಗಿದ್ದ ಮಾಲಕ ಸಹೋದರರ ವಿಚಾರಣೆ

ಖಾಕಿ ಮೇಲೆ ಕೈ ಹಾಕಿದ ಮೂವರು ಮೂವರಿಗೆ 7 ವರ್ಷ ಜೈಲೇ ಗತಿ

ಮುಂದಿನ ಸುದ್ದಿ
Show comments