Webdunia - Bharat's app for daily news and videos

Install App

ಬೆಂಗಳೂರು ರೇಪ್ ರಾಜಧಾನಿ ಎಂಬ ಅಪ್ರಪಚಾರ ಬೇಡ: ಕೆ. ಜೆ. ಜಾರ್ಜ್

Webdunia
ಭಾನುವಾರ, 23 ನವೆಂಬರ್ 2014 (11:16 IST)
ಬೆಂಗಳೂರು ಅತ್ಯಾಚಾರದ ರಾಜಧಾನಿ ಎಂದು ಅಪಪ್ರಚಾರ ನಡೆಸುತ್ತಿರುವ ಬಿಜೆಪಿ ಈ ಬಗ್ಗೆ  ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಗೃಹ ಸಚಿವ ಕೆ. ಜೆ. ಜಾರ್ಜ್ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು "ಕಳೆದ ವರ್ಷ ಕರ್ನಾಟಕದಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳು 1030. ಇದೇ ಸಾಲಿನಲ್ಲಿ ಮಧ್ಯಪ್ರದೇಶದಲ್ಲಿ 4135, ರಾಜಸ್ಥಾನದಲ್ಲಿ 3585 ಮತ್ತು ಛತ್ತೀಸ್‌ಗಡ್‌ನಲ್ಲಿ 1380 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.  ಶೇಕಡಾವಾರು ಹೇಳುವುದಾದರೆ ಬೆಂಗಳೂರಿನಲ್ಲಿ ಅತ್ಯಾಚಾರದ ಪ್ರಕರಣಗಳು ಪ್ರತಿಶತ 5.88 ಏರಿಕೆಯಾದರೆ, ದೆಹಲಿಯಲ್ಲಿ ಪ್ರತಿಶತ 21 ಏರಿಕೆಯಾಗಿದೆ. ಅಹಮದಾಬಾದಿನಲ್ಲಿ ಈ ಪ್ರಮಾಣ 5.58. ಈ ಅಂಕಿಅಂಶಗಳ ಮೇಲೆ ದೃಷ್ಟಿ ಹರಿಸಿದರೆ  ಬೆಂಗಳೂರು ಅತ್ಯಾಚಾರದ ರಾಜಧಾನಿ ಅಪ್ರಪಚಾರ" ಎನ್ನುವುದು ಸ್ಪಷ್ಟವಾಗುತ್ತದೆ ಎಂದರು.
 
"ಶಾಲೆಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ  ನಾವು  ರೂಪಿಸಿದ ಮಾರ್ಗದರ್ಶಿ ಸೂತ್ರಗಳನ್ನು ಉಚ್ಚ ನ್ಯಾಯಾಲಯ ಒಪ್ಪಿದೆ. ಕ್ಯಾಬಿನೇಟ್‌ನಲ್ಲಿ ಇದಕ್ಕೆ ಅನುಮೋದನೆ ದೊರೆತ ನಂತರ ಇದನ್ನು ಅನುಷ್ಠಾನಕ್ಕೆ ತರಲಾಗುವುದು" 
 
"ರೇಪ್ ಕೇಸ್ ಸಂಬಂಧ  ರಾಜ್ಯದಲ್ಲಿ 10 ತ್ವರಿತಗತಿ ನ್ಯಾಯಾಲಯ  ಸ್ಥಾಪನೆ ಮಾಡುವಂತೆ ಕೋರಲಾಗಿತ್ತು. ಆದರೆ ಕೇವಲ 3  ಕಡೆ ತ್ವರಿತಗತಿ ನ್ಯಾಯಾಲಯ ಸ್ಥಾಪನೆಗೆ ನ್ಯಾಯಮೂರ್ತಿಗಳು ಅನುಮತಿ ನೀಡಿದ್ದಾರೆ" ಎಂದು ಅವರು ಹೇಳಿದ್ದಾರೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ