ಹೈಕಮಾಂಡ್`ನಿಂದ ಡಿ.ಕೆ. ಶಿವಕುಮಾರ್`ಗೆ ಭರ್ಜರಿ ಗಿಫ್ಟ್..?

Webdunia
ಬುಧವಾರ, 9 ಆಗಸ್ಟ್ 2017 (09:23 IST)
ರಾಜ್ಯಸಭೆ ಚುನಾವಣೆಯ ಕುದುರೆ ವ್ಯಾಪಾರದಿಂದ ಪಾರಾಗಲು ರಾಜ್ಯಕ್ಕೆ ಬಂದ ಗುಜರಾತ್`ನ 44 ಕಾಂಗ್ರೆಸ್ ಶಾಸಕರಿಗೆ ರಕ್ಷಣೆ ನೀಡಿದ್ದು ಸಚಿವ ಡಿ.ಕೆ. ಶಿವಕುಮಾರ್. ಐಟಿ ದಾಳಿ ನಡೆದರೂ ವಿಚಲಿತರಾಗದೇ ಶಾಸಕರನ್ನ ಸುರಕ್ಷಿತವಾಗಿ ಆಗಸ್ಟ್ 7ರಂದು ಅಹಮದಾಬಾದ್`ಗೆ ಕಳುಹಿಸಿಕೊಟ್ಟಿದ್ದರು. ಪಕ್ಷ ನಿಷ್ಠೆ ಮೆರೆದ ಡಿ.ಕೆ. ಶಿವಕುಮಾರ್ ಅವರಿಗೆ ಹೈಕಮಾಂಡ್ ಭಾರೀ ಗಿಫ್ಟ್ ನೀಡುವ ಸಾಧ್ಯತೆ ಇದೆ ಮಾಧ್ಯಮಗಳು ವರದಿ ಮಾಡಿವೆ.

ಮಾಧ್ಯಮಗಳ ವರದಿಗಳ ಪ್ರಕಾರ, ಡಿಸೆಂಬರ್`ನಲ್ಲಿ ನಡೆಯಲಿರುವ ಗುಜರಾತ್ ಚುನಾವಣಾ ಉಸ್ತುವಾರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನ ನಿಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಬಿಜೆಪಿಯ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಸೆಡ್ಡು ಹೊಡೆಯಲು ಡಿ.ಕೆ. ಶಿವಕುಮಾರ್ ಸೂಕ್ತ ವ್ಯಕ್ತಿ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ. ಹಾಗೇನಾದರೂ ಆದಲ್ಲಿ ಗುಜರಾತ್ ವಿಧಾನಸಭಾ ಚುನಾವಣಾ ರಂಗೇರಲಿದೆ. ರಾಷ್ಟ್ರೀಯ ನಾಯಕರಾಗಿ ಡಿ.ಕೆ. ಶಿವಕುಮಾರ್ ಗುರುತಿಸಿಕೊಳ್ಳಲಿದ್ದಾರೆ.

ಗುಜರಾತ್ ಕಾಂಗ್ರೆಸ್ ಶಾಸಕರಿಗೆ 9 ದಿನ ರಕ್ಷಣೆ ನೀಡಿದ ಡಿ.ಕೆ. ಶಿವಕುಮಾರ್ ಅವರ ಶ್ರಮ ಫಲ ಕೊಟ್ಟಿದೆ. ಗುಜರಾತ್ ರಾಜ್ಯಸಭಾ ಚುನಾವಣೆಯಲ್ಲಿ ಅಹ್ಮದ್ ಪಟೇಲ್ ಗೆಲುವು ಸಾಧಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೆಟ್ಟಿಲಿನಿಂದ ಬೀಳುತ್ತಿದ್ದ ಮಗುವನ್ನು ಹೀರೋ ಥರಾ ಹಿಡಿದು ಪ್ರಾಣ ಉಳಿಸಿದ ವ್ಯಕ್ತಿ: shocking video

ಪತ್ನಿಗೆ ಹೊಡೆಯಬಹುದು, ಆದರೆ ಮೂಳೆ ಮುರಿಯೋ ಹಾಗಿಲ್ಲ: ಹೊಸ ರೂಲ್ಸ್

ಭಾರತ ಪಾಕಿಸ್ತಾನಕ್ಕೆ ಇದೊಂದು ಎಚ್ಚರಿಕೆ ಕೊಟ್ಟೆ, ಯುದ್ಧ ನಿಲ್ಲಿಸಿಬಿಟ್ರು: ಹೊಗಳಿಕೊಂಡ ಡೊನಾಲ್ಡ್ ಟ್ರಂಪ್

ಪ್ರಿಯಾಂಕ ಗಾಂಧಿ ಜೊತೆ ಡಿಕೆ ಶಿವಕುಮಾರ್ ಟೆಂಪಲ್ ರನ್: ನೆಟ್ಟಿಗರ ಕಾಮೆಂಟ್ ನೋಡಿ

Karnataka Weather: ಎಚ್ಚರಿಕೆ ಗಮನಿಸಿ, ಇಂದು ತಾಪಮಾನದಲ್ಲಿ ಮತ್ತಷ್ಟು ಹೆಚ್ಚಳ

ಮುಂದಿನ ಸುದ್ದಿ
Show comments