ಪೂಜೆ ಮಾಡಿದ್ದು ನಿಮಗಾ, ಸಿದ್ದರಾಮಯ್ಯಗಾಗಿಯಾ: ಡಿಕೆ ಶಿವಕುಮಾರ್ ಕಾಲೆಳೆದ ನೆಟ್ಟಿಗರು

Krishnaveni K
ಮಂಗಳವಾರ, 27 ಆಗಸ್ಟ್ 2024 (08:39 IST)
ಬೆಂಗಳೂರು: ಒಂದೆಡೆ ಸಿಎಂ ಸಿದ್ದರಾಮಯ್ಯಗೆ ಮುಡಾ ಸಂಕಷ್ಟ ಬಂದೆರಗಿದ್ದರೆ ಇತ್ತ ಡಿಸಿಎಂ ಡಿಕೆ ಶಿವಕುಮಾರ್ ಜಮ್ಮು ಕಾಶ್ಮೀರದಲ್ಲಿರುವ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಮುಡಾ ಸಂಕಷ್ಟದ ಸಮಯದಲ್ಲಿ ನಾನು ಬಂಡೆಯಂತೆ ಅವರ ಬೆನ್ನಿಗಿರುತ್ತೇನೆ ಎಂದು ಡಿಕೆ ಶಿವಕುಮಾರ್ ಹೇಳಿದ್ದರು. ಅದಕ್ಕೆ ತಕ್ಕಂತೆ ದೆಹಲಿಯಲ್ಲಿ ಹೈಕಮಾಂಡ್ ಭೇಟಿ ಮಾಡುವಾಗ ಸಿದ್ದರಾಮಯ್ಯಗೆ ಡಿಕೆಶಿ ಜೊತೆಯಾಗಿದ್ದರು. ಭಾನುವಾರ ಪತ್ನಿ ಸಮೇತರಾಗಿ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಮೊನ್ನೆ ವೈಷ್ಣೋದೇವಿ ಮಂದಿರಕ್ಕೆ ಭೇಟಿ ನೀಡಿದ ಡಿಕೆಶಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಹಲವು ಖ್ಯಾತನಾಮರು ಸಂಕಷ್ಟದ ಸಮಯದಲ್ಲಿ ಇಲ್ಲಿಗೆ ಬಂದು ಪೂಜೆ ಮಾಡಿಸಿಕೊಂಡು ಹೋಗುತ್ತಾರೆ. ಇದೀಗ ಡಿಕೆ ಶಿವಕುಮಾರ್ ಕೂಡಾ ಪತ್ನಿ ಸಮೇತರಾಗಿ ಭೇಟಿಯಾಗಿದ್ದಾರೆ.

ಆದರೆ ಡಿಕೆಶಿ ಪೂಜೆ ಸಲ್ಲಿಸಿದ್ದು ಸಿದ್ದರಾಮಯ್ಯನವರಿಗಾಗಿಯೇ ತಮಗಾಗಿಯೇ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ ಡಿಕೆಶಿ ಸಿಎಂ ಪಟ್ಟದ ದಾರಿ ಕ್ಲಿಯರ್ ಆಗುತ್ತದೆ. ಮುಂದೆ ತಾನು ಸಿಎಂ ಆಗಬೇಕೆಂದು ಈ ಪೂಜೆ ಮಾಡಿಸಿದ್ದಾರೆಯೇ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕೊಳಕು ಕಿಡ್ನಿ ನೀಡಿದ್ದೇನೆ ಎಂದಿದ್ದಾರೆ, ನನ್ನ ತಪ್ಪು ಯಾರೂ ಮಾಡಬೇಡಿ: ಲಾಲು ವಿರುದ್ಧ ಕಿಡಿಕಾರಿದ ಪುತ್ರಿ ರೋಹಿಣಿ

ಭಯೋತ್ಪಾದನಾ ಜಾಲ ಹಿನ್ನೆಲೆ: ಅನಂತ್‌ನಾಗ್‌ನ ವೈದ್ಯರ ಮನೆ ಮೇಲೆ ಸಿಐಕೆ ದಾಳಿ

ಅಣ್ಣ ಶಿವಕುಮಾರ್ ಸಿಎಂ ಆಗುವ ಭವಿಷ್ಯದ ಬಗ್ಗೆ ಡಿಕೆ ಸುರೇಶ್ ಹೇಳಿದ್ದೇನು ಗೊತ್ತಾ

ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆ

Karnataka Weather:ಕರಾವಳಿಯಲ್ಲಿ ಮಳೆ ನಿರೀಕ್ಷೆ, ಉತ್ತರ ಕರ್ನಾಟಕದಲ್ಲಿ ಶೀತಗಾಳಿ ಸಾಧ್ಯತೆ

ಮುಂದಿನ ಸುದ್ದಿ
Show comments