Webdunia - Bharat's app for daily news and videos

Install App

ಬಿಜೆಪಿ‌ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ

Webdunia
ಮಂಗಳವಾರ, 9 ಮೇ 2023 (13:23 IST)
ರಾಮನ ತಂದೆ ದಶರಥ ಮಹಾರಾಜನ ದೇವಸ್ಥಾನ ಇಲ್ಲ .ರಾಮನ ಬಂಟ ಆಂಜನೇಯ ದೇವಸ್ಥಾನಗಳಿವೆ .ಆಂಜನೇಯ ಸಮಾಜದ ಸೇವಕ.ಆಂಜನೇಯನ ಅನುಗ್ರಹ ನಮ್ಮ ಮೇಲೆ ಯಾವಾಗ್ಲೂ ಕೂಡ ಇರುತ್ತೆ.ಇಲ್ಲಿಂದ ಮೈಸೂರಿನವರೆಗೂ ಕೂಡ ಸುಮಾರು 25 ಆಂಜನೇಯ ದೇವಸ್ಥಾನಗಳಿವೆ .ಆಂಜನೇಯ ಹೇಗೆ ಸೇವೆ ಮಾಡಿದ್ದಾನೋ ಆ ರೀತಿ ಸಮಾಜ ಸೇವೆ ಮಾಡುವ ಶಕ್ತಿ ಆಂಜನೇಯ ನೀಡಲಿ ಅಂತ ಕೇಳಿಕೊಂಡಿದ್ದೇನೆ .ನಮ್ಮ ನಾಡಿನ ದೇವತೆ ನಾಡಿನ ಜನತೆಯನ್ನು ಸುಭಿಕ್ಷವಾಗಿ ಇಡಲಿ ಅಂತ ಹೋಗ್ತಿದ್ದೇವೆ.ನಾಡಿನ ದೇವತೆ ಚಾಮುಂಡೇಶ್ವರಿ ಪ್ರಾರ್ಥನೆ ಮಾಡಬೇಕಾದದ್ದು ನಮ್ಮ ಕರ್ತವ್ಯ .ಇದು ನಮ್ಮ ಸಂಸ್ಕೃತಿ ಆಚಾರ ವಿಚಾರ .ನಾವು ಯಾವುದೇ ಕೆಲಸ ಮಾಡಲು ಹೋಗುವ ಮುಂಚೆ  ಚಾಮುಂಡಿಗೆ ಪ್ರಾರ್ಥನೆ ಮಾಡಿ ಹೋಗುತ್ತೇವೆ  ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಅಲ್ಲದೇ ನಾನು ಸಿದ್ದರಾಮಯ್ಯ ಇಬ್ಬರು ಹೋಗಿ ತಾಯಿ ಚಾಮುಂಡಿಗೆ ಆಶೀರ್ವಾದ ಪಡೆಯಬೇಕೆಂದು ಹೊರಟಿದ್ದೇವೆ ಎಂದು ಹೇಳಿದ್ರು.ಈ ವೇಳೆ ಡಿಕೆಶಿ ವಿರುದ್ಧ ಸಿದ್ದರಾಮಯ್ಯ ಅಸಮಾಧಾನದ ನಕಲಿ ಪತ್ರ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ್ದು,ಪಾಪ ಸಿದ್ದರಾಮಯ್ಯನವರು ಯಾಕೆ ಹಾಗೆ ಮಾಡುತ್ತಾರೆ.ಬೆಳಗ್ಗೆ ಸಂಜೆ ಇಡೀ ಕ್ಷೇತ್ರ ಓಡಾಡೋಕೆ ಸುತ್ತಿಕೊಂಡು ಇದ್ದಾರೆ.ನಾವಿಬ್ಬರೂ ಕೂಡ ಮೊನ್ನೆಯಷ್ಟೇ ಇಬ್ಬರೂ ಅಭಿಪ್ರಾಯ ವ್ಯಕ್ತಪಡಿಸಿದ್ದೇವೆ.ಅವರಿಗೆ ಅಸಮಾಧಾನ ಎಲ್ಲಿದೆ.ಇದೆಲ್ಲ ಮಾತನಾಡೋಕೆ ಪತ್ರ ಬರೆಯೋಕೆ ಅವರಿಗೆ ಎಲ್ಲಿ ಸಮಯವಿದೆ .ಬಿಜೆಪಿಯವರಿಗೆ ಇನ್ನೇನು ಕೆಲಸ ಇಲ್ಲ .ಈ ರೀತಿ ಫೇಕ್ ಲೆಟರ್‌ಗಳನ್ನ ತಯಾರು ಮಾಡುತ್ತಾರೆ.ನನ್ನ ಮೇಲೆ ಯಾರಾದರೂ ಲೆಟರ್ ಬರೆದು ಅಸಮಾಧಾನ ವ್ಯಕ್ತಪಡಿಸುತ್ತಾರಾ..? ಬಿಜೆಪಿ ಗರ್ಭಗುಡಿಯಲ್ಲೇ ಇರುವ ಅಸಮಧಾನವನ್ನು ಮುಚ್ಚಿಹಾಕಲು ಈ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.ಮೋದಿ ಸಾಹೇಬರು ಬಂದು ಇಲ್ಲೇ ರೋಡಲ್ಲಿ ಮಲಗಿದ್ದಾಯ್ತು.ಮೋದಿ ಅವರು ರಾಷ್ಟ್ರೀಯ ನಾಯಕರು .ಒಬ್ಬನೇ ಒಬ್ಬ ರಾಜ್ಯದ ನಾಯಕನ ಜೊತೆಲಿಟ್ಟುಕೊಂಡು ಒಂದು ಪಾದಯಾತ್ರ, ರೋಡ್ ಶೋ ಮಾಡೋಕೆ ಆಗಿಲ್ಲ .ಕೊನೆಯ ಪಕ್ಷ ಕ್ಷೇತ್ರದ ಅಭ್ಯರ್ಥಿಗಳ ಜೊತೆಗೆ ರೋಡ್ ಶೋ ಮಾಡೋಕೆ ಆಗಿಲ್ಲ.ಒಬ್ಬರೇ ಸಂಸತ್ ಭವನದ ಪೂಜೆ ಮಾಡುತ್ತಾರೆ.ರಾಮಮಂದಿರಕ್ಕೂ ಒಬ್ಬರೇ ಪೂಜೆಗೆ ಕುಳಿತುಕೊಳ್ಳುತ್ತಾರೆ.ಇಲ್ಲಿ ಮತದಾನ ಕೇಳೋಕೆ ಬಂದಾಗ ಸಂದರ್ಭದಲ್ಲಿ ಒಬ್ಬರೇ ರೋಡ್ ಶೋ ಮಾಡ್ತಾರೆ.ನಾಯಕನಾದವರು ನಾಯಕರನ್ನ ಬೆಳೆಸಬೇಕು.
 
ಯಾವ ಸಂಸತ್ ಸದಸ್ಯನಿಗೂ ಸಮಾಧಾನ ಇಲ್ಲ.ಎಲ್ಲರೂ ಅವರ ಹೆಸರು ಹೇಳಿಕೊಂಡು ವೋಟ್ ಕೇಳ್ತಾ ಇದ್ದಾರೆ ಅಷ್ಟೇ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments