Daily Horoscope
✕

ಕಾಂಗ್ರೆಸ್‌ ಪಕ್ಷ ನಟರನ್ನು ಕರೆತಂದಿರಲಿಲ್ವಾ?-ಸಿಎಂ

Webdunia
ಶನಿವಾರ, 8 ಏಪ್ರಿಲ್ 2023 (17:00 IST)
ನಟ ಸುದೀಪ್​​ ಸಿಎಂ ಬಸವರಾಜ್​​ ಬೊಮ್ಮಾಯಿಗೆ ನನ್ನ ಬೆಂಬಲ ಎಂದು ಹೇಳಿದ್ದು, ಕಾಂಗ್ರೆಸ್​ ಲೇವಡಿ ಮಾಡಲು ಆರಂಭಿಸಿತ್ತು.. ಇದಕ್ಕೆ ಸಿಎಂ ಬಸವರಾಜ​ ಬೊಮ್ಮಾಯಿ ದೆಹಲಿಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಕಾಂಗ್ರೆಸ್‌ ಈ ಹಿಂದೆ ನಟರನ್ನು ಕರೆತಂದಿರಲಿಲ್ವಾ? ನಟರನ್ನ ಬಳಸಿಕೊಂಡು ಪ್ರಚಾರ ಮಾಡಿರಲಿಲ್ವಾ? ವಿಪಕ್ಷಗಳ ಟೀಕೆ ಸರ್ವೆ ಸಾಮಾನ್ಯ..ಸುದೀಪ್‌ ಬಂದಿದ್ದರಿಂದ ವಿಪಕ್ಷಗಳಿಗೆ ತಳಮಳ ಶುರುವಾಗಿದೆ ಎಂದು ವಿಪಕ್ಷಗಳ ಹೇಳಿಕೆಗೆ ಸಿಎಂ ಬೊಮ್ಮಾಯಿ ಲೇವಡಿ ಮಾಡಿದ್ರು.. ಇನ್ನು BJP ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ನಟ ಸುದೀಪ್​ BJP ಬೆಂಬಲ ಕುರಿತು ಪ್ರತಿಕ್ರಿಯಿಸಿದ್ದಾರೆ.. ಲೋಕತಂತ್ರ ವ್ಯವಸ್ಥೆಯಲ್ಲಿ ನಟ ಸುದೀಪ್​ಗೆ ಯಾವುದೇ ಪಕ್ಷಕ್ಕೆ ಬೆಂಬಲ ಕೊಡುವ ಹಕ್ಕಿದೆ, ಕಾಂಗ್ರೆಸ್‌ನವರಿಗೆ ಸೋಲುವ ಭಯ.. ಹಾಗಾಗಿ ಸುದೀಪ್ ವಿರುದ್ಧ ಟೀಕೆ ಮಾಡ್ತಿದಾರೆ. ತನಿಖಾ ಸಂಸ್ಥೆಗಳ ಭಯದಿಂದ ಸುದೀಪ್ ಬೆಂಬಲ ಅಂತ ಕಾಂಗ್ರೆಸ್ ಟೀಕಿಸಿರೋದು ಸರಿಯಲ್ಲ, ಕಾಂಗ್ರೆಸ್​​ಗೆ ಯಾರಾದ್ರೂ ಬೆಂಬಲ ಕೊಟ್ಟರೆ ಆಗ ಅವರಿಗೂ ತನಿಖಾ ಸಂಸ್ಥೆಗಳ ಭಯ ಇದೆ ಅಂತ ಅರ್ಥನಾ ಎಂದು ಭಾಟಿಯಾ ಪ್ರಶ್ನಿಸಿದ್ರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

174 ಜನರ ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್‌ಗೆ ಇಸ್ರೇಲ್‌ನಿಂದ ಉನ್ನತ ಗೌರವ

ಫಾರಂ-7 ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್: ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಕೇತನ್ ಅಗರ್ವಾಲ್ ಮರ್ಡರ್ ಕೇಸ್ ಗೆ ಟ್ವಿಸ್ಟ್: ದೋಷಾರೋಪಪಟ್ಟಿಯಲ್ಲಿ ಬೆಚ್ಚಿ ಬೀಳಿಸುವ ಅಂಶ ಬಯಲು

ಎಲ್ಲರೆದುರೇ ಬ್ಯಾಂಕ್ ನಲ್ಲೇ ಮಹಿಳೆಯ ಲಕ್ಷ ಹಣ, ಪಾಸ್ ಬುಕ್ ಎಗರಿಸಿದ ಖತರ್ನಾಕ್ ಖದೀಮ: video

ಹರಿದ್ವಾರ ಹೆದ್ದಾರಿಯಲ್ಲಿ ಮಹಿಳೆಯರ ಕಾರು ಚೇಸ್ ಮಾಡಿ ಅಸಭ್ಯ ವರ್ತನೆ: Video

ಮುಂದಿನ ಸುದ್ದಿ
Show comments