Select Your Language

Notifications

webdunia
webdunia
webdunia
webdunia

ಐಸಿಸ್‌‌‌‌‌‌‌ನಿಂದ ಪಾರಾದ ಲಕ್ಷ್ಮಿಕಾಂತ್ ಸಂಭಾಷಣೆ: ಮಾತೃ ಭಾಷೆ ಉಚ್ಛರಿಸಲು ತಿರಸ್ಕರಿಸಿದ್ದೇಕೆ

ಐಸಿಸ್‌‌‌‌‌‌‌ನಿಂದ ಪಾರಾದ ಲಕ್ಷ್ಮಿಕಾಂತ್ ಸಂಭಾಷಣೆ: ಮಾತೃ ಭಾಷೆ ಉಚ್ಛರಿಸಲು ತಿರಸ್ಕರಿಸಿದ್ದೇಕೆ
ಹೈದರಾಬಾದ್ , ಮಂಗಳವಾರ, 4 ಆಗಸ್ಟ್ 2015 (15:16 IST)
ಐಸಿಸ್ ಉಗ್ರರ ಕಪಿಮುಷ್ಠಿಯಿಂದ ತಪ್ಪಿಸಿಕೊಂಡು ತಾಯ್ನಾಡು ಸೇರಿರುವ ರಾಯಚೂರಿನ ಮಾಜಿ ಲಿಬಿಯಾ ಪ್ರಾಧ್ಯಪಕ ಲಕ್ಷ್ಮಿಕಾಂತ್ ಅವರು ತಮ್ಮ ಮಾತೃ ಭಾಷೆ ತೆಲುಗು ಹಾಗೂ ಕನ್ನಡ ಭಾಷೆಗಳಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. 
 
ಹೌದು, ಉಗ್ರರಿಂದ ಕಪಿಮುಷ್ಠಿಯಿಂದ ಮುಕ್ತಿಗೊಂಡು ನಿನ್ನೆ ರಾತ್ರಿ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ ಅವರನ್ನು ಮಾಧ್ಯಮ ಪ್ರತಿನಿಧಿಗಳು ಲಿಬಿಯಾದಲ್ಲಿನ ಬಂಧನದ ಅನುಭವದ ಬಗ್ಗೆ ಪ್ರಸ್ನಿಸಿದ್ದಾರೆ. ಇದಕ್ಕೆ ಅವರು ಪ್ರತಿಕ್ರಿಯಿಸಲು ಮುಂದಾದರಾದರೂ ಆಂಗ್ಲ ಭಾಷೆಯಲ್ಲಿ ಮಾತನ್ನರಂಭಿಸಿದರು. ಈ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ತೆಲುಗು ಅಥವಾ ಕನ್ನಡ ಭಾಷೆಗಳಲ್ಲಿ ಮಾತನಾಡಿ ಎಂದು ಮನವಿ ಮಾಡಿಕೊಂಡಗ ನಿರಾಕರಿಸಿದರು. ಅಲ್ಲದೆ ನಿರಾಕರಣೆಗೆ ಅವರು ಕಾರಣವನ್ನೂ ನೀಡಿದ್ದು, ನಾನು ಬಂಧನದಲ್ಲಿದ್ದ ಹಾಗೂ ಬಿಡುಗಡೆಹೊಂದಿದ ತರುವಾಯ ಇಲ್ಲಿನ ಮಾಧ್ಯಮಗಳು ನನ್ನ ಬಗ್ಗೆ ಅಪ ಪ್ರಚಾರ ಮಾಡಿವೆ. ಆದ್ದರಿಂದ ನಾು ತೆಲುಗು ಹಾಗೂ ಕನ್ನಡ ಭಾಷೆಗಳನ್ನು ಮಾತನಾಡುವುದಿಲ್ಲ ಎಂದಿದ್ದಾರೆ. 
 
ಇದೇ ವೇಳೆ ಮಾತನಾಡಿದ ಅವರು, ನನ್ನನ್ನು ಅಪಹರಣ ಮಾಡಿದ್ದುದು ನಿಜ. ಆದರೆ ನನಗೆ ಅವರು ಯಾವುದೇ ತೊಂದರೆ ನೀಡಿಲ್ಲ. ಅವರಿಗೆ ನನ್ನ ಕೃತಜ್ಞತೆ ಎಂದ ಅವರು, ನನ್ನನ್ನು ಅಪಹರಿಸಿದ್ದ ಗುಂಪಿನಲ್ಲಿ ನನ್ನ ವಿದ್ಯಾರ್ಥಿಯೂ ಕೂಡ ಒಬ್ಬನಿದ್ದ. ಈ ಹಿನ್ನೆಲೆಯಲ್ಲಿ ನಾನು ಪಾರಾಗಲು ಸಾಧ್ಯವಾಯಿತು ಎಂದ ಅವರು, ಅವರ ನಾಯಕನನ್ನು ಅಲ್ಲಿ ಶೇಖ್ ಎಂದು ಕರೆಯುತ್ತಾರೆ. ಅವರು ನೀನು ಬಾರತಕ್ಕೆ ಹಿಂದಿರುಗಿದ ಮೇಲೆ ನನಗೆ ಕರೆ ಮಾಡು ಎಂದು ಅವರ ವೈಯಕ್ತಿಕ ದೂರವಾಣಿ ಸಂಖ್ಯೆಯನ್ನೂ ನೀಡಿದ್ದಾರೆ. ಅಲ್ಲದೆ ಅವದ ಮೇಲ್ ನ್ನೂ ಕೂಡ ನೀಡಿದ್ದಾರೆ ಎಂದರು. 
 
ಬಳಿಕ, ನಾನು ಶೇಕ್ ಅವರೊಂದಿಗೆ ಸಂಪರ್ಕ ಸಾಧಿಸುತ್ತೇನೆ. ಆದರೆ ನಾನು ಕಳೆದ 10 ವರ್ಷಗಳಿಂದಲೂ ಕೂಡ ಅಲ್ಲಿಯೇ ಇದ್ದೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ಅರೇಬಿಕ್ ಬಾಷೆಯಲ್ಲಿಯೇ ಮಾತನಾಡುತ್ತೇನೆ. ಆದ್ದರಿಂದ ಯಾರೂ ಕೂಡ ತಪ್ಪು ತಿಳಿಯಬಾರದು ಎಂದು ಮಾಧ್ಯಮ ಹಾಗೂ ಸರ್ಕಾರಗಳಿಗೆ ಮನವಿ ಮಾಡಿದರು. 
 
ಇನ್ನು ಅವರ ಈ ಹೇಳಿಕೆಗಳು ಗೊಂದ ಸೃಷ್ಟಿಸುವಂತಿದ್ದು, ತಮ್ಮ ತಾಯ್ನಾಡಿಗೆ ಸುರಕ್ಷಿತವಾಗಿ ವಾಪಾಸಾದ ಮೇಲೂ ಕೂಡ ಅವರೊಂದಿಗೆ ಏಕೆ ಸಂಪರ್ಕ ಸಾಧಿಸಬೇಕು ಎಂಬ ಅನುಮಾನಗಳನ್ನು ಮೂಡಿಸುತ್ತಿದ್ದು, ಶೇಖ್ ಬಗ್ಗೆ ಲಕ್ಷ್ಮಿಕಾಂತ್ ಹೇಳುತ್ತಿರುವ ಪರಿ ಗೊಂದಲಕ್ಕೀಡು ಮಾಡುತ್ತಿದೆ. ಅಲ್ಲದೆ ಯಾವ ಕಾರಣಕ್ಕಾಗಿ ಸಂಪರ್ಕ ಮುಂದುವರಿಸಲು ಯತ್ನಿಸುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದ್ದು, ಆಂಧ್ರ ಪ್ದೇಶ ಮೂಲದ ಇನ್ನೂ ಇಬ್ಬರು ಉಗ್ರರ ಬಂಧನದಲ್ಲಿರುವ ಕಾರಣ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಎಂಬ ಅನುಮಾನವೂ ಕೂಡ ವ್ಯಕ್ತವಾಗುತ್ತಿದೆ.    

Share this Story:

Follow Webdunia kannada