Webdunia - Bharat's app for daily news and videos

Install App

ಭೂ ವಿವಾದದಲ್ಲಿ ಡಿಜಿಪಿ ಓಂಪ್ರಕಾಶ್ ಪುತ್ರ ಕಾರ್ತಿಕೇಶ್?

Webdunia
ಸೋಮವಾರ, 22 ಆಗಸ್ಟ್ 2016 (18:13 IST)
ಡಿಜಿಪಿ ಓಂಪ್ರಕಾಶ್ ಅವರ ಮಗ ಕಾರ್ತೀಕೇಶ್ ಹೆಸರನ್ನು ಹೇಳಿ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರದಲ್ಲಿ ನಡೆದಿದೆ. 
 
ಮೃತ ರೈತನನ್ನು ಮಾಗಡಿ ಮೂಲದ ರೈತ ಶಿವಣ್ಣ ಎಂದು ಗುರುತಿಸಲಾಗಿದೆ. 
 
ರೈತ ಶಿವಣ್ಣನ ಕುಟುಂಬದಲ್ಲಿ ಆಸ್ತಿ ಕಲಹ ಉಂಟಾಗಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪ್ರಕರಣದಲ್ಲಿ ಶಿವಣ್ಣನ ವಿರುದ್ಧ ಅಂದರೆ ಆತನ ಸಹೋದರರಾದ ಲೋಕೇಶ್ ಮತ್ತು ನಾರಾಯಣಪ್ಪ ಪರವಾಗಿ ಆಗುವಂತೆ ಡಿಜಿಪಿ ಓಂ ಪ್ರಕಾಶ್  ಪುತ್ರ ಕಾರ್ತೀಕೇಶ್ ಲಾಬಿ ನಡೆಸಿದ್ದ ಎಂದು ಆರೋಪಿಸಲಾಗುತ್ತಿದೆ.
 
ವಿವಾದಿತ ಜಮೀನಿನಲ್ಲಿ ಕಾರ್ತಿಕೇಶ್ ಜಲ್ಲಿ ಕ್ರಷರ್ ವ್ಯವಹಾರ ನಡೆಸುತ್ತಿದ್ದರು. ಹೀಗಾಗಿ ತಮ್ಮ ತಂದೆಯ ಪ್ರಭಾವ ಬಳಸಿ ನನಗೆ ಆಸ್ತಿ ದೊರೆಯದಂತೆ ಮಾಡಿದ್ದಾರೆ. ನನ್ನ ಸಾವಿಗೆ ಡಿಜಿಪಿ ಪುತ್ರ ಕಾರ್ತಿಕೇಶ್ ಮತ್ತು ಕೆಲ ಅಧಿಕಾರಿಗಳು ಕಾರಣ ಎಂದು ಹೇಳಿ ವಿಡಿಯೋ ಮಾಡಿ ಶಿವಣ್ಣ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೂರು ದಿನದ ಹಿಂದೆ ವಿಷ ಕುಡಿದಿದ್ದ ಅವರು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. 
 
ನಾನು ಸತ್ತರೆ ಮಾತ್ರ ನನ್ನ ಮಕ್ಕಳಿಗೆ ನ್ಯಾಯ ಸಿಗೋದು ಎಂದು ಆತ ಸಂಬಂಧಿಕರ ಬಳಿ ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments