ಚರ್ಚ್ ಸ್ಟ್ರೀಟ್ ರೀತಿ ಗಾಂಧಿ ಬಜಾರ್ ರಸ್ತೆ ಅಭಿವೃದ್ಧಿ !

Webdunia
ಭಾನುವಾರ, 19 ಮಾರ್ಚ್ 2023 (18:52 IST)
ಗಾಂಧಿ‌ ಬಜಾರ್ ರಸ್ತೆಯನ್ನ "ಮನಸು ಗಾಂಧಿ‌ ಬಜಾರ್" ಯೋಜನೆಯಡಿ ಸರ್ಕಾರ ಅಭಿವೃದ್ಧಿಪಡಿಸ್ತಾಇದೆ.ಆದ್ರೆ ಇದೀಗ ಈ ಯೋಜನೆಗೆ ಸ್ಥಳೀಯರು ವಿರೋದ ವ್ಯಕ್ತಪಡಿಸ್ತಿದ್ದಾರೆ.ಗಾಂಧಿ ಬಜಾರ್‌ನ ರಾಮಕೃಷ್ಞ ಆಶ್ರಮದದಿಂದ ಟ್ಯಾಗೋರ್ ವೃತ್ತದಿಂದವರೆಗಿನ 8೦೦ಮೀಟರ್ ರಸ್ತೆಯನ್ನ ವೈಟ್ ಟ್ಯಾಪಿಂಗ್ ಮಾಡಲಾಗ್ತಿದೆ.ಇ ಹಿ‌ಂದೆ 80ಅಡಿ ಇದ್ದ ರಸ್ತೆಯನ್ನ ಇದೀಗ ಕೇವಲ‌ 22ಅಡಿ ಮಾಡಿದ್ದಾರೆ .  12ಅಡಿ ಪುಟ್‌ಪಾತ್ ಅನ್ನು 35 ಅಡಿಗೆ ಹೆಚ್ಚಿಸಿ ಎರಡು ಬಾಗದಲ್ಲಿ  ನಿರ್ಮಿಸಲಾಗುತ್ತಿದೆ..ಆದರೆ ಇ ಕಾರ್ಯಕ್ಕೆ ಸ್ಥಳಿಯರು ವಿರೋದ ವ್ಯಕ್ತಪಡಿಸ್ತಾ ಇದ್ದಾರೆ.

ಯೋಜನೆ ರೂಪಿಸುವ ಮೋದಲೇ ಸ್ಥಳಿಯರು ಮೊದಲಿನಂತೆ ರಸ್ತೆ ನಿರ್ಮಿಸೊದಕ್ಕೆ  ಒತ್ತಾಯಿಸಿದ್ರಂತೆ ಆದರೆ ಸ್ಥಳೀಯರ ಬೇಡಿಕೆಯ ವಿರುದ್ಧವಾಗಿ ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ರಸ್ತೆ ನಿರ್ಮಿಸ್ತಾ ಇದ್ದಾರೆ ಎಂದು ಆರೋಪಿಸಲಾಗ್ತಿದೆ.  .ಕೇವಲ ದ್ವಿಚಕ್ರ ವಾಹನಗಳಿಗೆ ಮಾತ್ರ ಸಂಚಾರಕ್ಕೆ  ಅವಕಾಶಕೊಡುವ ಹುನ್ನಾರವನ್ನ ಮಾಡ್ತಿದ್ದು ,ಇದರಿಂದ ಸ್ಥಳೀಯ ಅಂಗಡಿ‌ ಮಾಲಿಕರಿಗೆ ಮುಂದಿನದಿನಗಳಲ್ಲಿ ವ್ಯಾಪಾರದಲ್ಲಿ ಕುಂಟಿತವಾಗಲಿದೆ ಎನ್ನೋ ಆರೋಪವು ಕೇಳಿ ಬಂದಿದೆ.


ಪಾರಂಪರಿಕವಾಗಿ ಇದ್ದ ರೀತಿಯಾಗಿಯೇ ರಸ್ತೆಯನ್ನ ನಿರ್ಮಿಸಬೇಕು,ನಾವ್ಯಾರು ಚರ್ಚಸ್ಟ್ರೀಟ್ ಮಾದರಿಯ  ರಸ್ತೆಯನ್ನ ಕೇಳಿರಲಿಲ್ಲ ಇದರಿಂದ ಸ್ಥಳಿಯ ನಿವಾಸಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದು ಗಾಂಧಿ ಬಜಾರ್ ವರ್ತಕರ ಸಂಘದ ವತಿಯಿಂದ ಬಿಬಿಎಂಪಿಗೆ  ಇಗಾಗಲೆ ಸಾಕಷ್ಟು ಬಾರಿ ಮನವಿಯನ್ನ ಮಾಡಿಕೊಳ್ಳಲಾಗಿದೆ.
ಸದ್ಯ ಕಾಮಗಾರಿ ಪ್ರಗತಿಯಲ್ಲಿದ್ದು ಬಿಬಿಎಂಪಿ ಸ್ಥಳಿಯರ ಬೇಡಿಕೆಯನ್ನ ಪರಿಗಣನೆಗೆ ತೆಗೆದು ಕೊಳ್ಳುತ್ತಾ ಎನ್ನೋದನ್ನ ಕಾದು ನೋಡಬೇಕಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ ಗೆಲ್ಲುತ್ತಿದ್ದಂತೇ ಕಾರ್ಯಕರ್ತರಿಗೆ ಮುಂದಿನ ನಾಲ್ಕು ಟಾರ್ಗೆಟ್ ನೀಡಿದ ಪ್ರಧಾನಿ ಮೋದಿ

ಸಾಲುಮರದ ತಿಮ್ಮಕ್ಕನ ಕೊನೆಯ ಆಸೆ ಈಡೇರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ

ಬಿಹಾರದಲ್ಲಿ ಕೇವಲ 2 ಸ್ಥಾನದಲ್ಲಿ ಮುನ್ನಡೆ, ರಾಹುಲ್ ಗಾಂಧಿಗೆ ಇದು 95 ನೇ ಸೋಲು

ಬಿಜೆಪಿಗೆ ನೆಹರೂ, ಗಾಂಧೀಜಿಯನ್ನು ತೆಗಳುವುದೇ ಕೆಲಸ: ಸಿದ್ದರಾಮಯ್ಯ

ಬಿಹಾರ ಚುನಾವಣೆ ಗೆದ್ದಿದ್ದಕ್ಕೆ ಲಾಡು ಹಂಚಿ ಥಕಥೈ ಕುಣಿದ ಕರ್ನಾಟಕ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments