Select Your Language

Notifications

webdunia
webdunia
webdunia
webdunia

1978ರಲ್ಲಿ ದೇವೇಗೌಡರಿಗೆ ಓಡಾಡೋಕೆ ಕಾರು ಕೂಡ ಇರ್ಲಿಲ್ಲ: ಎ.ಕೆ. ಸುಬ್ಬಯ್ಯ

1978ರಲ್ಲಿ ದೇವೇಗೌಡರಿಗೆ ಓಡಾಡೋಕೆ ಕಾರು ಕೂಡ ಇರ್ಲಿಲ್ಲ: ಎ.ಕೆ. ಸುಬ್ಬಯ್ಯ
ಬೆಂಗಳೂರು , ಬುಧವಾರ, 13 ಆಗಸ್ಟ್ 2014 (14:53 IST)
2011ರ ಕೆಪಿಎಸ್‌ಸಿ ನೇಮಕಾತಿ ರದ್ದತಿ ವಿರುದ್ಧ ಕ ಎಚ್‌ಡಿಕೆ ಹೋರಾಟವನ್ನು ಎ.ಕೆ. ಸುಬ್ಬಯ್ಯ ಖಂಡಿಸಿದ್ದಾರೆ. ದೇವೇಗೌಡ ಕುಟುಂಬ 1998ರಿಂದ ಕೆಪಿಎಸ್ಸಿ ಫಲಾನುಭವಿಯಾಗಿದೆ ಎಂದು ಎ.ಕೆ.ಸುಬ್ಬಯ್ಯ ಹೇಳಿದರು. ಇದು ಸಮಾಜಘಾತಕ ಹೋರಾಟ. ಕುಮಾರಸ್ವಾಮಿ ಹೋರಾಟ ಕೂಡಲೇ ಕೈಬಿಡಬೇಕು ಎಂದು ಅವರು ಬೆಂಗಳೂರಿನಲ್ಲಿ ಒತ್ತಾಯಿಸಿದರು.

362 ಅಭ್ಯರ್ಥಿಗಳಲ್ಲಿ ಪ್ರಾಮಾಣಿಕರ ಪಟ್ಟಿಯನ್ನು ಎಚ್ಡಿಕೆ ಕೊಡಲಿ, ಭ್ರಷ್ಟರು, ಪ್ರಾಮಾಣಿಕರನ್ನು ಒಂದು ಮಾಡುತ್ತಿದ್ದಾರೆ. ಭ್ರಷ್ಟಾಚಾರದಿಂದ ಆಯ್ಕೆಯಾಗಿರುವವರಿಗೆ ಗಲಿಬಿಲಿಯಾಗಿದೆ. ಅದಕ್ಕಾಗಿ ಅವರು ಹೋರಾಟಕ್ಕೆ ಇಳಿದಿದ್ದಾರೆ.  . ದೇವೇಗೌಡ ಕುಟುಂಬ ಕೆಪಿಎಸ್‌ಸಿ ಫಲಾನುಭಾವಿಯಾಗಿದೆ.

ಬಾಲಕೃಷ್ಣಗೌಡ ಕೆಪಿಎಸ್‌ಸಿ ಆಯ್ಕೆಯಾಗಿದ್ದು ಹೇಗೆ 1976ರಲ್ಲಿ ದೇವೇಗೌಡ ಪಕ್ಷದ ಕಚೇರಿಗೆ ಫೈಲ್ ತಂದಿದ್ರು, ಏನು ಎಂದು ಕೇಳಿದ್ದಕ್ಕೆ ಮಕ್ಕಳ ಭವಿಷ್ಯಕ್ಕಾಗಿ ಏನಾದರೂ ಮಾಡಬೇಕಲ್ವಾ, ಅಂತಾ ಅಡಗಿಸಿಕೊಂಡ್ರು. 1978ರಲ್ಲಿ ದೇವೇಗೌಡರಿಗೆ ಓಡಾಡೋಕೆ ಕಾರು ಇರದೇ ನನ್ನ ಕಾರಿನಲ್ಲಿ ಓಡಾಡುತ್ತಿದ್ದರು. ಈಗ ದೇವೇಗೌಡರ ಕುಟುಂಬದ ಆಸ್ತಿ ಎಷ್ಟಿದೆ . ಮೊಮ್ಮಗ 3 ಕೋಟಿ ಬೆಲೆಯ ಕಾರಿನಲ್ಲಿ ಓಡಾಡುತ್ತಿದ್ದಾರೆ. ಮಾನ, ಮರ್ಯಾದೆ ಇದ್ದರೆ ಎಚ್‌ಡಿಕೆ ಹೋರಾಟ ಕೈಬಿಡಲಿ ಎಂದು ಝಾಡಿಸಿದ್ದಾರೆ. 

Share this Story:

Follow Webdunia kannada