Webdunia - Bharat's app for daily news and videos

Install App

ಅಂಗೈ ಹುಣ್ಣಿಗೆ ಸಿಎಂಗೆ ಕನ್ನಡಿ ಬೇಕೆ: ದೇವೇಗೌಡರ ಪ್ರಶ್ನೆ

Webdunia
ಶನಿವಾರ, 15 ನವೆಂಬರ್ 2014 (16:29 IST)
ಅಂಗೈ ಹುಣ್ಣಿಗೆ ಸಿಎಂ ಸಿದ್ದರಾಮಯ್ಯಗೆ ಕನ್ನಡಿ ಬೇಕೆ. 1995ರಲ್ಲಿ ನಾನೇ ಮುಖ್ಯಮಂತ್ರಿಯಾಗಿದ್ದೆ.  ಬಿಎಂಐಸಿ ಯೋಜನೆಗೆ ನಾನೇ ಅನುಮೋದನೆ ನೀಡಿದ್ದೆ. ಅಲ್ಲಿಂದ ಇಲ್ಲಿವರೆಗೆ ಸಿಬಿಐ ತನಿಖೆಯಾಗಲಿ. ಈ ವಿಚಾರವನ್ನು ಸಂಸತ್ತಿನಲ್ಲಿ ಕೂಡ ಚರ್ಚಿಸುತ್ತೇನೆ.  ಸದನಸಮಿತಿ ಬಗ್ಗೆ ನನಗೆ ನಂಬಿಕೆಯಿಲ್ಲ, ಸಿಬಿಐ ತನಿಖೆಯಾಗಲಿ ಎಂದು ಜೆಡಿಎಸ್ ಕಚೇರಿಯಲ್ಲಿ ದೇವೇಗೌಡರು ತಿಳಿಸಿದ್ದಾರೆ.

 ಬಿಎಂಐಸಿ ಯೋಜನೆಯಲ್ಲಿ ತಮ್ಮ ವಿರುದ್ಧ ಅಕ್ರಮ ಭೂ ಮಂಜೂರಾತಿಯ ಆರೋಪವನ್ನು ದೇವೇಗೌಡರು ಮಾಡಿದ್ದಾರೆ. ದೇವೇಗೌಡರ ಆಪಾದನೆಗಳ ಬಗ್ಗೆ ಸೂಕ್ತ ತನಿಖೆಯನ್ನು ನಡೆಸಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಭೂಮಂಜೂರಾತಿ ಅಧಿಕಾರವಿರಲಿಲ್ಲ.  

ನನ್ನ ರಾಜಕೀಯ ಬೆಳವಣಿಗೆ ಸಹಿಸದೇ ಆರೋಪಿಸಿದ್ದಾರೆ. ನನ್ನನ್ನು ಮತ್ತು ನನ್ನ ಸೋದರನನ್ನು ರಾಷ್ಟ್ರೀಯವಾಗಿ ತೇಜೋವಧೆ ಮಾಡೋದಕ್ಕೆ ಪ್ರಯತ್ನಿಸಿದ್ದಾರೆ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದರು.  ಈ ಹಿನ್ನೆಲೆಯಲ್ಲಿ ಅಂಗೈ ಹುಣ್ಣಿಗೆ ಸಿದ್ದರಾಮಯ್ಯಗೆ ಕನ್ನಡಿ ಬೇಕೆ ಎಂದು ದೇವೇಗೌಡರು ಪ್ರಶ್ನಿಸಿದ್ದಾರೆ.  

1995ರಿಂದ ನಡೆದ ಕೆರೆ ಒತ್ತುವರಿ ಬಗ್ಗೆ ತನಿಖೆಯಾಗಲಿ. ಸಿಬಿಐನಿಂದ ಬೇಕಾದ್ರೂ ತನಿಖೆ ಮಾಡಿ, ಸುಮ್ಮನೆ ಹೇಳಿಕೆಗಳನ್ನು ತಳ್ಳಿಹಾಕುವ ಪ್ರಯತ್ನ ಬೇಡ ಎಂದು ದೇವೇಗೌಡರು ಹೇಳಿದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments