Webdunia - Bharat's app for daily news and videos

Install App

ಸಾರಿಗೆ ಇಲಾಖೆ ಅಂಧ ದರ್ಬಾರ್...!

Webdunia
ಭಾನುವಾರ, 8 ಅಕ್ಟೋಬರ್ 2023 (13:41 IST)
ಸಾರಿಗೆ ಸಚಿವರೇ ನಿಮ್ಮ ಸಾರಿಗೆ ನಿಗಮಗಳಲ್ಲಿ ಏನಾಗ್ತಿದೆ..?ಸಾರಿಗೆ ನೌಕರರ ಸಂಬಳ,ವೇತನ ಹೆಚ್ಚಳಕ್ಕೆ ಹಣ ಇಲ್ಲ ಅಂತೀರಿ,ನೌಕರರ ಯಾವ ಬೇಡಿಕೆಗಳಿಗೆ ನೋ ಬಜೆಟ್ ಅಂತೀರಿ,ಆರ್ಥಿಕ ಸಂಕಷ್ಟದ ಟೈಮ್ ನಲ್ಲಿ ಇದೆಲ್ಲಾ ನಿಮ್ಮಗೆ ಬೇಕಾ..?ಸಾರಿಗೆ ನಿಗಮಗಳಲ್ಲಿ ಐಷಾರಾಮಿ ಬಸ್ ಗಳ ವ್ಯಾಮೋಹ ಹೆಚ್ಚಾಗಿದೆ.
 
ಕೆ ಎಸ್ ಆರ್ ಟಿಸಿ ಯಲ್ಲಿ ಮತ್ತೆ ದುಬಾರಿ ಹೈಟೆಕ್ ಬಸ್ ಖರೀದಿ ಪರ್ವ ಶುರುವಾಗಿದೆ.ಐಷಾರಾಮಿ ಕಂಪನಿಯ ಟಾಪ್  ಎಂಡ್  ಸ್ಲೀಪರ್ ಬಸ್ ಗಳ ಮೇಲೆ ಅಧಿಕಾರಿಗಳಿಗೆ ವ್ಯಾಮೋಹ ಹೆಚ್ಚಾಗಿದ್ದು,40 ವಿಶ್ವ ದರ್ಜೆಯ ಅಶೋಕ ಲೇಲ್ಯಾಂಡ್ ಬಸ್ ಖರೀದಿಗೆ ಕೆ ಎಸ್ ಆರ್ ಟಿಸಿ ಪ್ಲ್ಯಾನ್ ನಡೆಸಿದೆ.ದುಬಾರಿ ಬಸ್ ಗಳ ಖರೀದಿ.. ಜನರ ಸೇವೆಗೂ ಕಮಿಷನ್‌ ಆಸೆಗೋ..?ಉತ್ತಮ ಸೇವೆ ಹೆಸರಿನಲ್ಲಿ ಕಮಿಷನರ್ ಲೂಟಿಗೆ  ಅಧಿಕಾರಿಗಳು ಇಳಿದ್ರಾ ಎಂಬ ಶಂಕೆ ಶುರುವಾಗಿದೆ.ಕೆ ಎಸ್ ಆರ್ ಟಿಸಿ ಯಲ್ಲಿ ಸದ್ಯ ಐಷರಾಮಿ ಬಸ್ ಗಳಿಗೆ ಬೇಡಿಕೆ ಇಲ್ಲದಿದ್ರೂ ಬಸ್‌ಗಳ  ಖರೀದಿ ಜೋರಾಗಿದೆ.ಕೋವಿಡ್ ಬಳಿಕ ನಿಗಮದಲ್ಲಿ‌ ಕೆಲ  ಐಷಾರಾಮಿ ಬಸ್ ಗಳು ನಿಂತಲ್ಲೇ ನಿಂತಿವೆ.ಆದ್ರೂ ದುಬಾರಿ ಮೌಲ್ಯದ ಬಸ್ ಖರೀದಿಗೆ ಅಧಿಕಾರಿಗಳು ಮುಂದಾಗಿದ್ದಾರೆ.ಸದ್ಯ ಕೆ ಎಸ್ ಆರ್ ಟಿಸಿ ಯಲ್ಲಿ 400 ಕ್ಕೂ ಐಷಾರಾಮಿ ಬಸ್ ಗಳಿವೆ.ಸಾಕಷ್ಟು ಐಷಾರಾಮಿ ಬಸ್ ಗಳಿಗೆ ಬೇಡಿಕೆ ಇಲ್ಲ..ಆದ್ರೆ ಬಸ್ ಖರೀದಿ ಯಾವ ಪುರುಷಾರ್ಥಕ್ಕೆ..?ಐಷಾರಾಮಿ ಬಸ್‌ಗಳ ಖರೀದಿ ಹಿಂದೆ ಕಮಿಷನ್ ಆರೋಪ ಕೇಳಿಬಂದಿದ್ದು,ಶಕ್ತಿ ಯೋಜನೆ ಬಳಿಕ ನಾರ್ಮಲ್ ಬಸ್ ಗಳಿಗೆ ಬೇಡಿಕೆ  ಹೆಚ್ಚಿದೆ.ಆದ್ರೂ ದುಬಾರಿ ಮೌಲ್ಯದ ಐಷಾರಾಮಿ ಬಸ್ ಗಳನ್ನ ರಸ್ತೆಗಿಳಿಸೋಕೆ  ಸಾರಿಗೆ ಇಲಾಖೆ ಮುಂದಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments