Select Your Language

Notifications

webdunia
webdunia
webdunia
webdunia

ಡಿನೋಟಿಫಿಕೇಶನ್ ಪ್ರಕರಣ: ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲು

ಡಿನೋಟಿಫಿಕೇಶನ್ ಪ್ರಕರಣ: ಸಿ.ಟಿ.ರವಿ ವಿರುದ್ಧ ಎಫ್‌ಐಆರ್ ದಾಖಲು
ಬೆಂಗಳೂರು , ಸೋಮವಾರ, 28 ಜುಲೈ 2014 (18:45 IST)
2007ರ ಅಕ್ಟೋಬರ್‌ನಲ್ಲಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಬಿಜೆಪಿ ಶಾಸಕ ಸಿ.ಟಿ. ರವಿ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆ. 2007 ಅಕ್ಟೋಬರ್ 22ರಂದು ಡಿನೋಟಿಫೈ ಮಾಡಿರುವ ಆರೋಪವನ್ನು ಸಿ.ಟಿ. ರವಿ ವಿರುದ್ಧ ಹೊರಿಸಲಾಗಿದೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಈ ಪ್ರಕರಣವನ್ನು ದಾಖಲಿಸಲಾಗಿದೆ.   ಸಿ.ಟಿ.ರವಿ  ಚಿಕ್ಕಮಗಳೂರು ಬಿಜೆಪಿ ಶಾಸಕರಾಗಿದ್ದಾರೆ. 
 
2012ರಲ್ಲಿ  ಆದಾಯ ಮೀರಿದ ಆಸ್ತಿ ಸಂಪಾದಿಸಿದ್ದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕೋರ್ಟ್‌ನಲ್ಲಿ ಸಿ.ಟಿ.ರವಿ ವಿರುದ್ಧ ಪ್ರಕರಣ ದಾಖಲಿಸಿದ್ದ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನಲ್ಲಿರುವ ಸಿ.ಟಿ.ರವಿ ಅವರ ನಿವಾಸ ಮತ್ತು ಫಾರಂಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದರು.

ಸಾಮಾಜಿಕ ಕಾರ್ಯಕರ್ತ ಎ.ಸಿ.ಕುಮಾರ್ ಎಂಬವರು ಈ ಕೇಸು ದಾಖಲಿಸಿದ್ದರು. 2004ರ ವಿಧಾನಸಭೆ ಚುನಾವಣೆಯಲ್ಲಿ ರವಿ ಅವರ ಘೋಷಿತ ಆಸ್ತಿ 10.1 ಲಕ್ಷ ರೂ.ಗಳಾಗಿತ್ತು. 2008ರಲ್ಲಿ ವಾರ್ಷಿಕ ಆದಾಯ 19.8 ಲಕ್ಷ ಮತ್ತು ಒಟ್ಟು ಆಸ್ತಿ 92. 95 ಲಕ್ಷವೆಂದು ಘೋಷಿಸಿದ್ದರು.  ಆದರೆ 2012ರಲ್ಲಿ ಅವರ ಆಸ್ತಿ ಮೌಲ್ಯ 50 ಕೋಟಿಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. 
 

Share this Story:

Follow Webdunia kannada