Select Your Language

Notifications

webdunia
webdunia
webdunia
webdunia

62 ಕೋಟಿ ಗುಳುಂ: ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶೋಭಾ ಬಂಧನ

62 ಕೋಟಿ ಗುಳುಂ: ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶೋಭಾ ಬಂಧನ
ಶಿವಮೊಗ್ಗ , ಶುಕ್ರವಾರ, 25 ಜುಲೈ 2014 (17:13 IST)
ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶೋಭಾ ಎಂಬವರನ್ನು ಬ್ಯಾಂಕಿನ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. ಡಿಸಿಸಿ ಬ್ಯಾಂಕ್‌ನಲ್ಲಿ 62 ಕೋಟಿ ರೂ. ಅವ್ಯವಹಾರ ಎಸಗಿದ ಆರೋಪವನ್ನು ಅವರ ವಿರುದ್ಧ ಹೊರಿಸಲಾಗಿದೆ.

ಅವ್ಯವಹಾರ ಬಯಲಾದ ನಂತರ ಶೋಭಾ ತಲೆಮರೆಸಿಕೊಂಡಿದ್ದರು.  ಮ್ಯಾನೇಜರ್ ಶೋಭಾ ಅವರು ಆಭರಣ ಸಾಲದ ಮೂಲಕ ಸಾಲ ಪಡೆದಿದ್ದರು. ನಕಲಿ ಚಿನ್ನ, ಕಳಪೆ ಚಿನ್ನ ಮತ್ತು ಚಿನ್ನವಿಲ್ಲದೇ  ಕೂಡ ಆಭರಣ ಸಾಲವನ್ನು ಪಡೆದು ಬ್ಯಾಂಕ್‌ಗೆ ವಂಚನೆ ಮಾಡಿದ್ದರು.  ಬಂಧಿಸಿದ ಕೆಲಹೊತ್ತಿನಲ್ಲೇ ಶೋಭಾ ಅವರನ್ನು ಜೆಎಂಎಫ್‌ಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ.  ಪೊಲೀಸರು ಶೋಭಾಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ನಿನ್ನೆ ಕ್ಯಾಷಿಯರ್ ರವೀಂದ್ರ ಸೇರಿ ನಾಲ್ವರನ್ನು ಬಂಧಿಸಲಾಗಿದ್ದು, ವಿಚಾರಣೆ ವೇಳೆ 62 ಕೋಟಿ ರೂ. ಅವ್ಯವಹಾರ ಬೆಳಕಿಗೆ ಬಂದಿದೆ. ಆಭರಣ ಸಾಲದ ಹೆಸರಿನಲ್ಲಿ ಶೋಭಾ ಕೋಟ್ಯಂತರ ರೂ. ಸಾಲ ಪಡೆದು ವಂಚಿಸಿರುವುದು ಬಯಲಾಗಿದೆ.

Share this Story:

Follow Webdunia kannada