ಎಲ್ಲಾದರ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲ್ಲೇ ಇದೆ. ಈಗ ಅಡುಗೆ ಮಾಡಲು ಬಳಸುವ , ಅಡುಗೆಗೆ ಅತೀ ಮುಖ್ಯವಾಗಿ ಬೇಕಾದ ಕರಿಬೇವು ಈಗ ಕಹಿಬೇವು ಆಗೋಗಿದೆ. ಹಿಂದೆ ಮಾರ್ಕೆಟ್ ನಲ್ಲಿ ಕರಿಬೇವು ಹೆಚ್ಚಾಗಿ ರವಾನೆಯಾಗ್ತಿತ್ತು.ಆದ್ರೆ ಈಗ ಕರಿಬೇವಿನ ಎಲೆಗಳು ಉದುರುವ ಸಮಯ . ಅಷ್ಟೇ ಅಲ್ಲದೇ ಈಗ ಕರಿಬೇವು ಮಾರುಕಟ್ಟೆ ಯಲ್ಲಿ ಕಡಿಮೆ ರಫ್ತಾಗ್ತಿದೆ .ಚಳಿಗಾಲದ ಅಂತ್ಯದ ವೇಳೆಗೂ ಕರಿಬೇವು ಸೊಪ್ಪಿನ ಇಳಿವರಿ ಪ್ರಮಾಣ ಕಡಿಮೆಯಾಗಿದೆ.ಮಾರುಕಟ್ಟೆಯಲ್ಲಿ ಬೇಡಿಕೆಯ ಅರ್ಧದಷ್ಟು ಮಾತ್ರವೇ ಕರಿಬೇವು ಪೂರೈಕೆಯಾಗ್ತಿರೋದ್ರಿಂದ ಕರಿಬೇವಿನ ದರ ಎಲ್ಲಾ ಕಡೆಯಿಂದಲೂ ಗಗನಕ್ಕೇರಿದೆ.ಕರಿಬೇವಿನ ಬೆಲೆ ಹಿಂದೆ ಕೆ.ಜಿ ಗೆ 60 ರೂಪಾಯಿ ಇತ್ತು. ಆದ್ರೆ ಈಗ ಕರಿಬೇವಿನ ಬೆಲೆ 160-180 ಗೆ ಏರಿಕೆಯಾಗಿದೆ. ಇಳುವರಿ ಕುಂಠಿತವಾದ ಹಿನ್ನೆಲೆಯಲ್ಲಿ ಪೂರೈಕೆಯೂ ಇಳಿಕೆಯಾಗಿದೆ. ಬಡ ಜನರ ಪಾಲಿಗಂತೂ ಕರಿಬೇವು ಈಗ ಕಹಿಯಾಗೋಗಿದೆ. ವ್ಯಾಪಾರಿಗಳಿಗಂತೂ ಸರಿಯಾಗಿ ಸೊಪ್ಪು ಸಿಗ್ತಿಲ್ಲ. ಮೊದಲಿನಂತೆ ಕರಿಬೇವು ಬರ್ತಿಲ್ಲ. ಮಾರ್ಚ್ ಅಂತ್ಯದವರೆಗೂ ಇದೇ ರೀತಿ ಕರಿಬೇವಿನ ಬೆಲೆ ಹೆಚ್ಚಿರಲಿದೆ ಅಂತಾ ವ್ಯಾಪಾರಿಗಳು ಹೇಳ್ತಿದ್ದಾರೆ. ಅಷ್ಟೇ ಅಲ್ಲದೇ ಮೊದಲಿನಂತೆ ವ್ಯಾಪಾರ ಆಗ್ತಿಲ್ಲ. ಬೆಲೆ ಹೆಚ್ಚಿರುವುದಕ್ಕೆ ಜನ ತೆಗೆದುಕೊಳ್ತಿಲ್ಲ ಅಂತಾ ವ್ಯಾಪಾರಿಗಳಂತೂ ವ್ಯಾಪಾರ ಇಲ್ಲದೇ ಕಂಗಾಲಾಗಿದ್ದಾರೆ.ಇನ್ನು ಗೃಹಿಣಿಯರಂತೂ ಪ್ರತಿನಿತ್ಯ ಅಡುಗೆ ಮಾಡಲು, ಒಗರಣೆಗೆ ಕರಿಬೇವನ್ನ ಹೆಚ್ಚೆಚ್ಚು ಬಳಸ್ತಾರೆ. ಕರಿಬೇವನ್ನ ಹೆಚ್ಚಾಗಿ ಬಳಸಿದ್ರೆ ಆರೋಗ್ಯಕ್ಕೆ ಒಳ್ಳೆದು. ಆದ್ರಲ್ಲೂ ಕಣ್ಣಿಗೆ ತುಂಬ ಒಳ್ಳೆಯದು ಹಾಗಾಗಿ ಹೆಚ್ಚಿಗೆ ಅಡುಗೆಯಲ್ಲಿ ಕರಿಬೇವು ಬಳಸ್ತಾರೆ. ಎಷ್ಟೋ ಮನೆಯಲ್ಲಿ ಕರಿಬೇವು ಇಲ್ಲ ಅಂದ್ರೆ ಅಡಿಗೆನ್ನೇ ಆಗಲ್ಲ. ಅಂತಾದ್ರಲ್ಲಿ ಈಗ ಮೂರು ಪಟ್ಟು ಕರಿಬೇವಿನ ಬೆಲೆ ಏರಿಕೆಯಾಗಿದೆ. ಹೀಗಾಗಿ ಗ್ರಾಹಕರಂತೂ ಹೇಗಾಪ್ಪ ಅಡುಗೆ ಮಾಡೋಣ ಅಂತಾ ಅಸಾಮಾಧಾನಗೊಂಡಿದ್ದಾರೆ. ಎಲ್ಲಾದರ ಬೆಲೆ ಹೆಚ್ಚಾಳವಾಯ್ತು ಈಗ ಕರಿಬೇವಿನ ಬೆಲೆಯೂ ಹೀಗೆ ಹೆಚ್ಚಾದ್ರೆ ಹೇಗೆ ಅಂತಾ ಬೇಸರಗೊಂಡಿದ್ದಾರೆ.ಒಟ್ನಲ್ಲಿ ಈಗ ಕರಿಬೇವಿನ ಬೆಲೆ ಬಡವರ ಕೈಗೆ ಎಟುಕದ ಮಟ್ಟದಲ್ಲಿ ದುಬಾರಿಯಾಗೋಗಿದೆ.. ಮದ್ಯಮವರ್ಗದ ಜನರಂತೂ ಹೀಗೆ ಬೆಲೆ ಹೆಚ್ಚಾಳವಾದ್ರೆ ಏನುಮಾಡಣ್ಣ , ಹೇಗೆ ಅಡುಗೆ ಪದಾರ್ಥ ತೆಗೆದುಕೊಳ್ಳಣ್ಣ ಅಂತಾ ಚಿಂತಿಸುವ ಪರಿಸ್ಥಿತಿ ನಿರ್ಮಾಣವಾಗೋಗಿದೆ.