Webdunia - Bharat's app for daily news and videos

Install App

ಮನೆಯೊಳಗೆ ನುಗ್ಗಿ ಅತ್ಯಾಚಾರೆವಸಗಲು ಪ್ರಯತ್ನಿಸಿದ ಕಾಮುಕರು

Webdunia
ಭಾನುವಾರ, 20 ಜುಲೈ 2014 (12:39 IST)
ಅಪ್ರಾಪ್ತೆಯನ್ನು ಅಪಹರಿಸಿ ಮದುವೆಯಾಗಿ, ಆಕೆಯ ಮೇಲೆ ಅತ್ಯಾಚಾರವೆಸಗಿರುವ ಕಿಡಿಗೇಡಿಗಳು ಇದೀಗ ಬಾಲಕಿಯ ತಾಯಿ ಮತ್ತು ಸಹೋದರಿಯ ಮೇಲೆ ಬಲತ್ಕಾರ ಮಾಡಲು ಯತ್ನಿಸಿರುವ ಘಟನೆ ಮೇಟಗಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಏಕಲವ್ಯ ನಗರದಲ್ಲಿ ನಡೆದಿದೆ.
 
ನಗರದ ಕೆಆರ್‌ಎಸ್‌ ರಸ್ತೆಯಲ್ಲಿರುವ ಏಕಲವ್ಯನಗರ ನಿವಾಸಿ ಅಲೆಮಾರಿ ಜನಾಂಗದ ಲೋಕೇಶ್‌ ಎಂಬಾತನೇ ಅಪ್ರಾಪ್ತೆಯ ತಾಯಿ ಮತ್ತು ಸಹೋದರಿಯ ಮೇಲೆ ಬಲತ್ಕಾರ ಮಾಡಲೆತ್ನಿಸಿರುವ ಆರೋಪಿ.
 
ಘಟನೆಯಿಂದ ಕಂಗಾಲಾಗಿರುವ ಬಾಲಕಿಯ ಕುಟುಂಬದವರು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಘಟನೆ ಕುರಿತು ಬಾಲಕಿ ಪೋಷಕರು ಜು. 14ರಂದು ಮೇಟಗಳ್ಳಿ ಠಾಣೆ ಪೊಲೀಸ್‌ ಠಾಣೆಯಲ್ಲಿ ಆರೋಪಿ ಲೋಕೇಶ್‌ ಹಾಗೂ ಆತನ ಸ್ನೇಹಿತರಾದ ಲಕ್ಷಣ, ಭರತ, ಅನ್ನಪೂರ್ಣ ಮತ್ತು ಮೋಹನ ಎಂಬವರ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
 
ಏನಿದು ಪ್ರಕರಣ?: ಆರೋಪಿ ಲೋಕೇಶ್‌ ಏಕಲವ್ಯನಗರದ ನಿವಾಸಿಯೊಬ್ಬರ 16 ವರ್ಷದ ಬಾಲಕಿಯನ್ನು ಅಪಹರಿಸಿ ಮದುವೆಯಾಗಿ ಅತ್ಯಾಚಾರ ಎಸಗಿದ್ದ. ಈ ಕುರಿತು ಪಂಚಾಯಿತಿ ನಡೆಸಿದ ಏಕಲವ್ಯನಗರದ ಅಲೆಮಾರಿ ಜನಾಂಗದ ಮುಖಂಡರು ಬಾಲಕಿಗೆ 18 ವರ್ಷ ತುಂಬಿದ ಬಳಿಕ ಮರು ಮದುವೆ ಮಾಡಿಸಲು ತೀರ್ಮಾನಿಸಿ, ಬಾಲಕಿ ಮತ್ತು ಲೋಕೇಶನನ್ನು ದೂರ ಮಾಡಿದ್ದರು.
 
ಪಂಚಾಯಿತಿ ತೀರ್ಮಾನದಂತೆ ಬಾಲಕಿ ತನ್ನ ಪೋಷಕರ ಮನೆಯಲ್ಲಿ ಉಳಿದಿಕೊಂಡಿದ್ದಳು. ಆದರೆ, ಜು. 12ರಂದು ರಾತ್ರಿ 8.30ರಲ್ಲಿ ಇಲ್ಲದ ನೆಪ ಮಾಡಿಕೊಂಡು ತನ್ನ ಬೆಂಬಲಿಗರ ಜೊತೆಗೆ ಬಾಲಕಿ ಮನೆಗೆ ತೆರಳಿದ ಆರೋಪಿ ಲೋಕೇಶ್‌, ಬಾಲಕಿಯನ್ನು ತನ್ನೊಂದಿಗೆ ಕಳುಹಿಸುವಂತೆ ಕೇಳಿದ್ದಾನೆ. ಆದರೆ, ಆಕೆಯ ತಾಯಿ ಲೋಕೇಶ್‌ ಮಾತನ್ನು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಲೋಕೇಶ್‌ ಬಾಲಕಿಯ ತಾಯಿ ಮತ್ತು ಸಹೋದರಿ (14 ವರ್ಷ)ಯ ಮೇಲೆ ಬಲತ್ಕಾರಕ್ಕೆ ಯತ್ನಿಸಿ, ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಬಾಲಕಿ ಪೋಷಕರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
 
ಹಣದ ಪ್ರಭಾವ ಬಳಸಿರುವ ಕಾರಣ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ನಿರ್ಲಕ್ಷಿಸುತ್ತಿದ್ದಾರೆ. ಪೊಲೀಸರು ಆರೋಪಿಗಳಾದ ಲೋಕೇಶ್‌ ಮತ್ತು ಆತನ ಬೆಂಬಲಿಗರನ್ನು ಬಂಧಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಬಾಲಕಿಯ ಪೋಷಕರು ಮನವಿ ಮಾಡಿದ್ದಾರೆ.
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments