ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶನಿಕಾಟ ಶುರುವಾದಂತೆ ಗೋಚರವಾಗುತ್ತಿದೆ. ಇಂದು ಸಿಎಂ ಗೃಹ ಕಛೇರಿ ಕೃಷ್ಣದಲ್ಲಿ ಅವರ ಕಾರಿನ ಮೇಲೆ ಸುಮಾರು 20 ನಿಮಿಷಗಳ ಕಾಲ ಶನಿಯ ವಾಹನ ಕಾಗೆ ಮರಿ ಕುಳಿತು ಅಚ್ಚರಿ ಮೂಡಿಸಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ದಲಿತ ಮುಖ್ಯಮಂತ್ರಿ ಮತ್ತು ಇತ್ತೀಚಿಗೆ ರಾಜ್ಯ ಸಚಿವ ಸಂಪುಟ ಸಚಿವರ ಭ್ರಷ್ಟಾಚಾರ ಹಗರಣಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಮುಖ್ಯಮಂತ್ರಿ ಅವರನ್ನು ಬದಲಾವಣೆ ಮಾಡುವಂತೆ ಹೋರಾಟ ನಡೆಸಿರುವ ಮಧ್ಯಯೇ ಒಂದು ಪುಟ್ಟ ಕಾಗೆ ಮರಿ ಅಪಶಕುನ ನುಡಿದಿದೆಯೇ ಎಂದು ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಇಂದು ಮುಂಜಾನೆ ಮುಖ್ಯಮಂತ್ರಿ ಗೃಹ ಕಛೇರಿಯಲ್ಲಿ ಸಿಎಂ ಕಾರಿನ ಮೇಲೆ ಪುಟ್ಟ ಕಾಗೆ ಮರಿಯೊಂದು ಕುಳಿತಿತ್ತು. ಗೃಹ ಕಛೇರಿಯ ಸಿಬ್ಬಂದಿಗಳು ಎಷ್ಟೇ ಪ್ರಯತ್ನ ಪಟ್ಟರು ಕಾಗೆ ಮರಿ ಅವರ ಕಾರು ಬಿಟ್ಟು ಹಾರಿ ಹೋಗಲೇ ಇಲ್ಲ. ಕಾರನ್ನು ಹಿಂದೆ ಮುಂದೆ ಮಾಡಿದರು ಜಪ್ಪಯ್ಯಾ ಎನ್ನದೆ ಕಾಗೆ ಮರಿ ಕುಳಿತಿತ್ತು. ಕೊನೆಗೆ ಬೇಸತ್ತ ಸಿಬ್ಬಂದಿಗಳು ಕಾಗೆ ಮರಿಯನ್ನು ಕೈಯಿಂದ ಹಿಡಿದು ಪಕ್ಕಕ್ಕೆ ಬಿಟ್ಟು ಬಂದ ಘಟನೆ ನಡೆದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.