Select Your Language

Notifications

webdunia
webdunia
webdunia
webdunia

ರೇಪ್ ಪೀಡಿತೆಗೆ ಬಟ್ಟೆ ಇರದೆ ಮೂರು ಗಂಟೆ ಕಾಯಿಸಿದ ವೈದ್ಯರು

ರೇಪ್ ಪೀಡಿತೆಗೆ ಬಟ್ಟೆ ಇರದೆ ಮೂರು ಗಂಟೆ ಕಾಯಿಸಿದ ವೈದ್ಯರು
ಬೆಂಗಳೂರು , ಬುಧವಾರ, 23 ಜುಲೈ 2014 (18:52 IST)
ಅತ್ಯಾಚಾರದಿಂದ ಪೀಡಿತರಾದವರ ಚಿಕಿತ್ಸೆ ಮತ್ತು ತನಿಖೆಯ ಕುರಿತು ಸರ್ಕಾರ ಇದೇ ವರ್ಷ ಮಾರ್ಚ್‌‌ನಲ್ಲಿ ಹೊಸ ಗೈಡ್‌ಲೈನ್‌ ಜಾರಿಗೆ ತಂದಿತ್ತು ಆದರೆ ಕರ್ನಾಟಕದಲ್ಲಿ ಮಾತ್ರ ಇದಕ್ಕೆ ವಿರುದ್ದವಾಗಿ ನಡೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ರೇಪ್‌ ಪೀಡಿತೆಯ ಮೆಡಿಕಲ್‌ ಟೆಸ್ಟ್‌‌‌‌‌‌ಗಾಗಿ ಬಟ್ಟೆ ರಹಿತ ಕೂಡಿಸಿ ಮೂರು ಗಂಟೆ ಕಾಯಿಸಲಾಗಿದೆ. 
 
ಮಾನಸಿಕ ಅಸ್ವಸ್ಥ್ಯೆಯಾದ 23 ವರ್ಷದ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಮೈಸೂರಿನ ಚೆಲುವಾಂಬಾ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್‌‌‌ಗಾಗಿ ಕರೆದುಕೊಂಡು ಹೋಗಲಾಗಿತ್ತು. ಆಕೆಗೆ ಬೆಡ್‌‌‌ ಮೇಲೆ ಮೂರು ಗಂಟೆಗಳ ಕಾಲ ಕಾಯುವಂತಾಗಿದೆ ಎಂದು ಅತ್ಯಾಚಾರಕ್ಕೊಳಗಾದ ಮಹಿಳೆಯ ಪರಿವಾರದವರು ಆರೋಪಿಸಿದ್ದಾರೆ. ಆಗ ಆಕೆಯ ಶರೀರದ ಮೇಲೆ ಯಾವುದೇ ಬಟ್ಟೆ ಇರಲಿಲ್ಲ. ಮೆಡಿಕಲ್‌ ಸ್ಟಾಫ್‌‌ ಪೀಡಿತೆಯ ಕುಟುಂಬದವರಿಗೆ ಅವಮಾನ ಮಾಡಿದ್ದಾರೆ ಎನ್ನಲಾಗಿದೆ. 
 
" ರೇಪ್‌ ಪೀಡಿತೆಯ ಮೆಡಿಕಲ್‌‌‌ ಟೆಸ್ಟ್‌‌‌‌ಗಾಗಿ ನಮ್ಮ ಹತ್ತಿರ ಬೇರೆ ವ್ಯವಸ್ಥೆ ಇಲ್ಲ. ಇದಕ್ಕಾಗಿ ಇವಳ ಮೆಡಿಕಲ್‌ ಟೆಸ್ಟ್‌‌‌  ಲೆಬರ್‌ ವಾರ್ಡ್‌‌‌ನಲ್ಲಿ ಮಾಡಲಾಗಿದೆ" ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 
 
ಮಾರ್ಚ್‌‌ನಲ್ಲಿ ಸರ್ಕಾರ ಅತ್ಯಾಚಾರ ಪೀಡಿತೆಯರ  ತನಿಖೆಗಾಗಿ ಹೊಸ ನಿರ್ದೆಶನ ಜಾರಿಗೆ ತಂದಿದೆ. ಇದರಲ್ಲಿ ಟೂ ಫಿಂಗರ್‌ ಟೆಸ್ಟ್‌‌‌ ನಿಲ್ಲಿಸಲಾಗಿತ್ತು. ಹೊಸ ನಿರ್ದೇಶದಲ್ಲಿ ಇದನ್ನು ಅವೈಜ್ಞಾನಿಕ ಎಂದು ತಿಳಿಸಿ ಕಾನೂನು ಬಾಹಿರ ಎಂದು ತಿಳಿಸಲಾಗಿದೆ. ಆಸ್ಪತ್ರೆಯಲ್ಲಿ ಪಿಡಿತೆಯರ ಟೆಸ್ಟ್‌‌ಗಾಗಿ ಫಾರೆಂಸಿಕ್‌ ಮತ್ತು ಮೆಡಿಕಲ್‌ ಟೆಸ್ಟ್‌‌ಗಾಗಿ ಬೇರೆ ಬೇರೆ ಕೋಣೆ ಸಿದ್ದಪಡಿಸಲು ತಿಳಿಸಲಾಗಿತ್ತು. 
 
ಹೊಸ ಗೈಡ್‌ಲೆನ್ಸ್‌‌‌ನಲ್ಲಿ ಏನೇನಿದೆ ? 
 
1. ಪ್ರತಿ ಆಸ್ಪತ್ರೆಯಲ್ಲಿ ರೇಪ್‌ ಕೇಸ್‌‌‌ನಲ್ಲಿ ಮೆಡಿಕೋ-ಲೀಗಲ್‌ ವಿಷಯಕ್ಕಾಗಿ (ಎಮ್‌‌ಎಲ್‌‌ಸಿ) ಬೇರೆ ಕೋಣೆ ಇರಬೇಕು ಮತ್ತು ಇವರ ಹತ್ತಿರ ಗೈಡ್‌‌ಲೈನ್ಸ್‌‌‌‌ನಲ್ಲಿ ತಿಳಿಸಿರುವ ಅವಶ್ಯಕ ಉಪಕರಣಗಳು ಇರಬೇಕಾದದ್ದು ಅವಶ್ಯಕತೆ ಇದೆ. 
 
2. ಪೀಡಿತೆಯ ವೈಕಲ್ಪಿಕ ಬಟ್ಟೆಗಳನ್ನು ಸರಿ ಮಾಡಿಕೊಳ್ಳುವ ವ್ಯವಸ್ಥೆ ಇರಬೇಕು ಮತ್ತು ತನಿಖೆ ನಡೆಸುವಾಗ ಡಾಕ್ಟರ್‌ ಹೊರತು ಬೇರೆ ಯಾರೂ ಅಲ್ಲಿ ಇರಬಾರದು. 
 
 3. ಒಂದು ವೇಳೆ ಡಾಕ್ಟರ್‌ ಪುರುಷರು ಆಗಿದ್ದರೆ , ಒಬ್ಬ ಮಹಿಳೆ ಅಲ್ಲಿರಬೇಕು. 
 
4. ವೈದ್ಯರಿಂದ ಮಾಡುವ ಟೂ ಫಿಂಗರ್‌ ಟೆಸ್ಟ್‌‌‌ ಕಾನೂನು ಬಾಹಿರ ಎಂದು ಹೇಳಲಾಗಿದೆ. ಇದು ವೈಜ್ಞಾನಿಕವಲ್ಲ ಮತ್ತು ಈ ಟೆಸ್ಟ್‌ ಮಾಡಬಾರದು ಎಂದು ನಿಯಮದಲ್ಲಿ ತಿಳಿಸಲಾಗಿದೆ. 
 
 5. ವೈದ್ಯರು ರೇಪ್‌ ಶಬ್ಧ ಬಳಸದಿರಲು ತಿಳಿಸಲಾಗಿದೆ. ಏಕೆಂದರೆ ಇದು ಮೆಡಿಕಲ್‌ ಅಲ್ಲ ಕಾನೂನು ಟರ್ಮ್ ಆಗಿದೆ. 
 
6. ಇಲ್ಲಿಯವರೆಗೆ ಅತ್ಯಾಚ್ಯಾರಕ್ಕೊಳಗಾದ ಮಹಿಳೆಯ ಟೆಸ್ಟ್‌ ಕೇವಲ ಪೋಲಿಸರು ಹೇಳಿದ ಮೇಲೆ ಮಾತ್ರ ಮಾಡಲಾಗುತ್ತಿತ್ತು. ಆದರೆ, ಈಗ ಪೀಡಿತೆ ಮೊದಲು ಆಸ್ಪತ್ರೆಗೆ ಬಂದರೆ ಎಫ್‌‌‌‌ಐಆರ್‌‌‌ಗಿಂತ ಮೊದಲು ವೈದ್ಯರು ಆಕೆಯ ಟೆಸ್ಟ್‌ ಮಾಡಬೇಕು. 
 
7. ಪೀಡಿತೆಯ ಟೆಸ್ಟ್‌‌‌‌ನ ವಿಧಾನ ಮತ್ತು ವಿಭಿನ್ನ ಪ್ರಕ್ರಿಯೆಯ ಮಾಹಿತಿ ವೈದ್ಯರು ನೀಡಬೇಕಾಗುತ್ತದೆ ಮತ್ತು ರೋಗಿಗೆ ಅರ್ಥವಾಗುವ ಭಾಷೆಯಲ್ಲಿ ಮಾಹಿತಿ ನೀಡಬೇಕಾಗುತ್ತದೆ. 

Share this Story:

Follow Webdunia kannada