Select Your Language

Notifications

webdunia
webdunia
webdunia
webdunia

ಮಲೆಮಹದೇಶ್ವರದಲ್ಲಿ ಕಸಾಯಿಖಾನೆಗೆ ಸೇರುತ್ತಿರುವ ಹರಕೆಯ ಗೋವುಗಳು

ಮಲೆಮಹದೇಶ್ವರದಲ್ಲಿ ಕಸಾಯಿಖಾನೆಗೆ ಸೇರುತ್ತಿರುವ ಹರಕೆಯ ಗೋವುಗಳು
ಚಾಮರಾಜನಗರ , ಮಂಗಳವಾರ, 24 ನವೆಂಬರ್ 2015 (11:43 IST)
ಶ್ರೀಕ್ಷೇತ್ರ ಮಲೆಮಹದೇಶ್ವರ ಕ್ಷೇತ್ರದಲ್ಲಿ  ಭಕ್ತರು ನೀಡುವ ಗೋವುಗಳನ್ನು ಹರಾಜು ಹಾಕುತ್ತಿರುವ ಶಾಕಿಂಗ್ ಸುದ್ದಿ ಭಕ್ತರ ಕಿವಿಗೆ ಬಿದ್ದಿದ್ದು, ಈ  ಪ್ರಕ್ರಿಯೆಗೆ ಭಕ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಟಿ ಕೋಟಿ ಆದಾಯವಿರುವ ಶ್ರೀಕ್ಷೇತ್ರದಲ್ಲಿ ಭಕ್ತರಿಂದ ಹರಕೆಯ ರೂಪದಲ್ಲಿ ಬಂದ ಗೋವುಗಳನ್ನು ಹರಾಜು ಹಾಕಿದ ಬಳಿಕ ಕಸಾಯಿಖಾನೆಗೆ ಕಳಿಸಲಾಗುತ್ತಿತ್ತು. ಟಿವಿ ಚಾನೆಲ್‌ವೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಈ ವಿಷಯ ಬಯಲಾಗಿದೆ.

 
ತಾವು ನೀಡುತ್ತಿರುವ ಹಸುಗಳ ದೇವರ ಸನ್ನಿಧಿಯಲ್ಲಿರುತ್ತದೆಂದು ಭಾವಿಸಿದ್ದ ಭಕ್ತರಿಗೆ ಗೋವುಗಳನ್ನು ಕಸಾಯಿಖಾನೆಗೆ ಕಳಿಸುವ ಸಂಗತಿ ಆಘಾತಕಾರಿಯಾಗಿದೆ.  ಚಾಮರಾಜನಗರದಲ್ಲಿ ನೂರಾರು ಭಕ್ತರು ಈ ಕುರಿತು ಅಭಿವೃದ್ಧಿ ಪ್ರಾಧಿಕಾರದ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದು ಭಕ್ತರ ಧಾರ್ಮಿಕ, ಆಚಾರ ವಿಚಾರಗಳಿಗೆ ಹಾನಿಯಾಗುವ ವಿಚಾರವಾಗಿದ್ದು, ಗೋವುಗಳ ಹರಾಜು ನಿಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.ಧಾರ್ಮಿಕ ಶ್ರದ್ಧಾ ಭಕ್ತಿಯಿಂದ ತಾವು ದಾನವಾಗಿ ನೀಡುವ , ಪ್ರೀತಿಯಿಂದ ಸಾಕಿದ ಗೋವುಗಳು ಕಸಾಯಿಖಾನೆಗೆ ಸೇರುತ್ತಿರುವುದು ತಮಗೆ ತೀವ್ರ ನೋವುಂಟುಮಾಡುವ ಸಂಗತಿಯಾಗಿದೆ ಎಂದು ಭಕ್ತರು ಪ್ರತಿಕ್ರಿಯಿಸಿದ್ದಾರೆ. 

Share this Story:

Follow Webdunia kannada