Webdunia - Bharat's app for daily news and videos

Install App

ಗೋವಿಗೆ ಕೃತಘ್ನರಾಗಬಾರದು: ರಾಘವೇಶ್ವರಶ್ರೀ ಗೋಸಂದೇಶ

Webdunia
ಶನಿವಾರ, 6 ಆಗಸ್ಟ್ 2016 (19:31 IST)
ಮನುಷ್ಯ ಏನಾದರೂ ಆಗಬಹುದು ಆದರೆ ಕೃತಘ್ನನಾಗಬಾರದು. ಒಂದುವೇಳೆ ಕೃತಘ್ನನಾದರೂ ತಾಯಿಗೆ ಮಾತ್ರ ಕೃತಘ್ನನಾಗಬೇಡ, ಯಾಕಂದ್ರೆ ಹೊತ್ತು ಹೆತ್ತಿದ್ದಾಳೆ ತಾಯಿ. ಒಂದು ವೇಳೆ, ತಾಯಿಗೆ ಕೃತಘ್ನನಾದರೂ ಗೋಮಾತೆಗೆ ಮಾತ್ರ ಕೃತಘ್ನನಾಗಬಾರದು, ಯಾಕಂದ್ರೆ ತಾಯಿ ಹಾಲು ಕೊಡುವುದು ತನ್ನ ಮಕ್ಕಳಿಗೆ ಮಾತ್ರ, ಆದರೆ ಗೋವು ನಮಗೆಲ್ಲರಿಗೂ ಹಾಲು ಕೊಡುತ್ತದೆ. ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. 
ಇಲ್ಲಿನ ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾ ಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶಸಭೆಯಲ್ಲಿ ಮಾತನಾಡಿ, ಗೋವು ನಮ್ಮನ್ನು ಜೀವಂತ ಇರುವಾಗ ಮಾತ್ರ ಅಲ್ಲ, ಜೀವನದ ಅನಂತರವೂ ರಕ್ಷಿಸುತ್ತದೆ.  ನಾವು ಸತ್ತ ಮೇಲೆ ನಾವು ದಾನ ಕೊಟ್ಟ ಗೋವು ನಮ್ಮನ್ನು ವೈತರಣೀ ನದಿಯನ್ನು ದಾಟಿಸಿ ಸ್ವರ್ಗದ ಹಾದಿಯನ್ನು ಸುಗಮಗೊಳಿಸುತ್ತದೆ. ಅಂತಹ ಗೋಸಂತತಿಗೆ ಉಪಕಾರ ಮಾಡಲು ಆಗದಿದ್ರೂ ಕೃತಘ್ನರಾಗಬಾರದು ಎಂದು ನುಡಿದರು.
 
ನಮಗೆ ಉಪಕಾರ ಮಾಡುವ ಗೋ-ಮಾತೆಗೆ ಅಪಕಾರ ಮಾಡದಿರೋಣ. ಜೀವನದಲ್ಲಿ ಗೋವು ಇರಲೇಬೇಕು, ಅದಿಲ್ಲದಿದ್ದರೆ ನೋವು, ಸಾವು. ಗೋವಿದ್ದರೆ ಮಾತ್ರ ನಲಿವು. ಗೋವಿನಿಂದಲೇ ಭಾರತದ ಶ್ರೇಯಸ್ಸು. ಅಂತಹ ಗೋಮಾತೆಗೆ ಕೃತಘ್ನರಾದರೆ ಪ್ರಾಯಶ್ಚಿತ್ತವಿಲ್ಲ ಎಂದು ಅಭಿಪ್ರಾಯಪಟ್ಟರು.
 
ಆಂದ್ರಪ್ರದೇಶದ ಕರ್ನೂಲು ಜಿಲ್ಲೆ, ಯಾದವಗಿರಿ ಆದೋನಿ ಶ್ರೀ ಶಾರದಾ ದತ್ತಪೀಠಂನ ಪರಮಪೂಜ್ಯ ಶ್ರೀ ಶ್ರೀ ಸುಬ್ರಹ್ಮಣ್ಯಭಾರತೀ ಮಹಾಸ್ವಾಮೀಜಿಗಳು, ದ್ವಾಪರಯುಗದಲ್ಲಿ ಶ್ರೀಕೃಷ್ಣ ಪರಮಾತ್ಮ ಅವತಾರವೆತ್ತಿ ಗೋವುಗಳನ್ನು ರಕ್ಷಣೆ ಮಾಡಿದ್ದ , ಈ ಕಲಿಯುಗದಲ್ಲಿ ಪರಮಪೂಜ್ಯ ರಾಘವೇಶ್ವರ ಸ್ವಾಮೀಜಿಯವರು ಅವತರಿಸಿ ಗೋವುಗಳನ್ನು ರಕ್ಷಿಸುತ್ತಿದ್ದಾರೆ. ಗೋಪೂಜೆ ಮಾಡಿದರೆ ಎಲ್ಲ ದೇವ ದೇವತೆಗಳನ್ನು ಪೂಜಿಸಿದಂತೆ. ಗೋವಿನಷ್ಟು ಪವಿತ್ರವಾದ ಜನ್ಮ ಇನ್ನೊಂದಿಲ್ಲ. ಗೋ-ಮೂತ್ರ, ಗೋಮಯ ಸಕಲ ರೋಗ ಪರಿಹಾರಕ, ಇವೆರಡಿದ್ದರೆ ಯಾವ ವೈದ್ಯರೂ ಬೇಕಿಲ್ಲ, ಯಾವ ಔಷಧಿಯೂ ಬೇಕಿಲ್ಲ. ಪ್ರತಿನಿತ್ಯ ಅರ್ಧ ಚಮಚ ಗೋಮೂತ್ರವನ್ನು ಒಂದು ಲೋಟ ನೀರಿನೊಂದಿಗೆ ಸೇವಿಸಿದರೆ ಯಾವ ರೋಗವೂ ಬರುವುದಿಲ್ಲ ಎಂದರು.
 
ವಿಜಯನಗರದ ಮಾರುತಿ ಮೆಡಿಕಲ್ಸ್ನ ಮಾಲೀಕ ಅನನ್ಯ ಗೋಸೇವಕ, ಹಲವಾರು ಗೋವುಗಳ ಸಂರಕ್ಷಕ, ನಾಡಿನ ಜನರನ್ನು ಗೋವಿನೆಡೆಗೆ ಸೆಳೆಯುತ್ತಿರುವ ಮಹೇಂದ್ರ ಮುನ್ನೋಟ್ ಇವರಿಗೆ ಗೋ ಸೇವಾಪುರಸ್ಕಾರವನ್ನು ನೀಡಲಾಯಿತು.
 
ಶ್ರೀಭಾರತೀಪ್ರಕಾಶನ ಹೊರತಂದ ಸಾಧನಾಪಂಚಕ ಪ್ರವಚನಮಾಲಿಕೆಯ ವಿ.ಸಿ.ಡಿ ಹಾಗೂ ಶ್ರೀಧರ ಡಿ.ಎಸ್. ಕಿನ್ನಿಗೋಳಿ ಬರೆದ "ಜಡಭರತ" ಪುಸ್ತಕವನ್ನು ಸುಬ್ರಹ್ಮಣ್ಯಭಾರತೀ ಶ್ರೀಗಳು ಲೋಕಾರ್ಪಣೆ ಮಾಡಿದರು. 
 
ಉತ್ತರಕನ್ನಡದ ಅಂಗಡಿಬೈಲ್, ಚೆನ್ನಗಾರ, ಕುಂಟಗನಿ ಪ್ರದೇಶದ ಗೋಚಾತುರ್ಮಾಸ್ಯ ಸೇವಾಸಮಿತಿ ಅಚಿವೆ ಇದರ ಪದಾಧಿಕಾರಿಗಳಾದ ಜಿ. ಎಂ. ಶೆಟ್ಟಿ ಮಾಬಗಿ, ಬೊಮ್ಮಯ್ಯ ಗುನಾಗಾ, ನಿತ್ಯಾನಂದ ಗೋಪಾಲ ನಾಯಕ ಹಾಗೂ ಸರ್ವ ಸಮಾಜದ ಶಿಷ್ಯರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
 
ಬೆಂಗಳೂರು ನಗರ ರಾಜರಾಜೇಶ್ವರಿನಗರ ಹಾಗೂ ಬನಶಂಕರಿ ವಲಯದವರು ಸರ್ವಸೇವೆಯನ್ನು ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ಚಾತುರ್ಮಾಸ್ಯ ಸಮಿತಿಯ ಸದಸ್ಯರು ಇದ್ದರು. ಸರ್ಪಂಗಳ ರಾಮಚಂದ್ರ ಭಟ್ ದಂಪತಿಗಳು ಸಭಾಪೂಜೆ ಮಾಡಿದರು. ಅರ್ಪಿತಾ ಹೆದ್ಲಿ ನಿರೂಪಿಸಿದರು. 
 
ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
 
ಕೋಟ್ಸ್
 
ನಮಗೆ ಉಪಕಾರ ಮಾಡುವ ಗೋ-ಮಾತೆಗೆ ಅಪಕಾರ ಮಾಡದಿರೋಣ. ಜೀವನದಲ್ಲಿ ಗೋವು ಇರಲೇಬೇಕು, ಅದಿಲ್ಲದಿದ್ದರೆ ನೋವು, ಸಾವು. ಗೋವಿದ್ದರೆ ಮಾತ್ರ ನಲಿವು. ಗೋವಿನಿಂದಲೇ ಭಾರತದ ಶ್ರೇಯಸ್ಸು. ಅಂತಹ ಗೋಮಾತೆಗೆ ಕೃತಘ್ನರಾದರೆ ಪ್ರಾಯಶ್ಚಿತ್ತವಿಲ್ಲ.         
                - ಶ್ರೀರಾಘವೇಶ್ವರಶ್ರೀಗಳು, ಶ್ರೀರಾಮಚಂದ್ರಾಪುರ
 
ಗೋ-ಮೂತ್ರ, ಗೋಮಯ ಸಕಲ ರೋಗ ಪರಿಹಾರಕ, ಇವೆರಡಿದ್ದರೆ ಯಾವ ವೈದ್ಯರೂ ಬೇಕಿಲ್ಲ, ಯಾವ ಔಷಧಿಯೂ ಬೇಕಿಲ್ಲ.
-  ಪರಮಪೂಜ್ಯ ಶ್ರೀ ಶ್ರೀ ಸುಬ್ರಹ್ಮಣ್ಯಭಾರತೀ ಮಹಾಸ್ವಾಮೀಜಿಗಳು
 
ಮಹೇಂದ್ರ ಮುನ್ನೋಟ್ ಇವರಿಗೆ ಗೋ ಸೇವಾಪುರಸ್ಕಾರ ಪ್ರದಾನ 
ಶ್ರೀಧರ ಡಿ.ಎಸ್. ಕಿನ್ನಿಗೋಳಿ ಬರೆದ "ಜಡಭರತ" ಪುಸ್ತಕ ಲೋಕಾರ್ಪಣೆ 
ಆದೋನಿ ಶ್ರೀ ಶಾರದಾ ದತ್ತಪೀಠಂನ ಪರಮಪೂಜ್ಯ ಶ್ರೀ ಶ್ರೀ ಸುಬ್ರಹ್ಮಣ್ಯಭಾರತೀ ಸ್ವಾಮೀಜಿ ಉಪಸ್ಥಿತಿ
ಇಂದಿನ ಕಾರ್ಯಕ್ರಮ (07.08.2016):
ಬೆಳಗ್ಗೆ 7.00 ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
       ಲೋಕಾರ್ಪಣೆ : ರಾಮ ರಾಮ ರಾಮ - ಪುಸ್ತಕ
     ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಅಪರಾಹ್ನ 3.00 :  ಗೋಕಥಾ 
ವಿಶಿಷ್ಟ ನಿರೂಪಣೆಯ ಗೋಕಥಾ: ಗೋವಿನ ಕುರಿತಾದ ಕಥಾ ನಿರೂಪಣೆ, ಗಾಯನ, ಚಿತ್ರರಚನೆಗಳನ್ನೋಳಗೊಂಡ ವೈಶಿಷ್ಟ್ಯಪೂರ್ಣವಾದ 'ಗೋಕಥಾ' ಸಂಪನ್ನವಾಗಲಿದ್ದು, ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರು ಗೋಕಥೆ ನಿರೂಪಣೆಯನ್ನು ಮಾಡಲಿದ್ದಾರೆ.
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ 'ಸಾಧನಾಪಂಚಕ' ಪ್ರವಚನ
 
ಫೋಟೋ ಲಗತ್ತಿಸಿದೆ.
ಕ್ಯಾಪ್ಷನ್
SRPM 1
ಉತ್ತರಕನ್ನಡದ ಅಂಗಡಿಬೈಲ್, ಚೆನ್ನಗಾರ, ಕುಂಟಗನಿ ಪ್ರದೇಶದ ಗೋಚಾತುರ್ಮಾಸ್ಯ ಸೇವಾಸಮಿತಿ ಅಚಿವೆ ಇದರ ಪದಾಧಿಕಾರಿಗಳಾದ ಜಿ. ಎಂ. ಶೆಟ್ಟಿ ಮಾಬಗಿ, ಬೊಮ್ಮಯ್ಯ ಗುನಾಗಾ, ನಿತ್ಯಾನಂದ ಗೋಪಾಲ ನಾಯಕ ಹಾಗೂ ಸರ್ವ ಸಮಾಜದ ಶಿಷ್ಯರು ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
 
SRPM 2
ಗೋಸಂದೇಶಸಭೆಯಲ್ಲಿ ರಾಘವೇಶ್ವರಶ್ರೀಗಳು ಆಶೀರ್ವಚನ ಮಾಡಿದರು. ಆದೋನಿ ಶ್ರೀ ಶಾರದಾ ದತ್ತಪೀಠಂನ ಪರಮಪೂಜ್ಯ ಶ್ರೀ ಶ್ರೀ ಸುಬ್ರಹ್ಮಣ್ಯಭಾರತೀ ಸ್ವಾಮೀಜಿ ಹಾಗೂ ಗೋಸೇವಕ ಪುರಸ್ಕಾರ ಪಡೆದ ಮಹೇಂದ್ರ ಮುನ್ನೋಟ್ ಉಪಸ್ಥಿತರಿದ್ದರು.
 
SRPM 3
ಗೋಸಂದೇಶಸಭೆಯಲ್ಲಿ ಸಾನ್ನಿಧ್ಯ ವಹಿಸಿ ಸಂತ ಸಂದೇಶ ನೀಡಿದ ಆದೋನಿ ಶ್ರೀ ಶಾರದಾ ದತ್ತಪೀಠಂನ ಪರಮಪೂಜ್ಯ ಶ್ರೀ ಶ್ರೀ ಸುಬ್ರಹ್ಮಣ್ಯಭಾರತೀ ಸ್ವಾಮೀಜಿಯವರಿಗೆ ಗೋಚಿತ್ರವನ್ನು ಕೊಡುವುದರ ಮೂಲಕ ರಾಘವೇಶ್ವರಶ್ರೀಗಳು ತಮ್ಮ ಭಾವವನ್ನು ವ್ಯಕ್ತಪಡಿಸಿದರು.
 
SRPM 4
ಗೋಚಾತುರ್ಮಾಸ್ಯದ ಸಂದರ್ಭದಲ್ಲಿ ಕಲಾರಾಮದಡಿಯಲ್ಲಿ ಚಿಣ್ಣರಿಂದ 'ಪುಣ್ಯಕೋಟಿ' ರೂಪಕ ನಡೆಯಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

PM Modi: ಪ್ರಧಾನಿ ಮೋದಿ ಭಾಷಣ ಕನ್ನಡದಲ್ಲಿ ಸಂಪೂರ್ಣವಾಗಿ ಇಲ್ಲಿದೆ ನೋಡಿ

ಭಾರತದ ಮೇಲಿನ ದಾಳಿಯನ್ನು ಸಂಭ್ರಮಿಸಿದ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ, ಪಾಕ್‌ ಸೇನೆಯನ್ನು ಬಣ್ಣಿಸಿದ್ದು ಹೀಗೇ

Operation Sindoor: 17 ನವಜಾತ ಹೆಣ್ಣು ಮಕ್ಕಳಿಗೆ ಸಿಂಧೂರ್‌ ನಾಮಕರಣ

ಪೌರ ಕಾರ್ಮಿಕರ ವಿಚಾರದಲ್ಲಿ ದಿಟ್ಟ ಹೆಜ್ಜೆಯಿಟ್ಟ ಸಿಎಂ ಸಿದ್ದರಾಮಯ್ಯ ಸರ್ಕಾರ

Karavali Rain: ಬಿಸಿಲ ಬೇಗೆಗೆ ಸುಸ್ತಾಗಿದ್ದ ಮಂದಿಗೆ ಊಹಿಸಲಾಗದ ರೀತಿಯಲ್ಲಿ ಸುರಿದ ಮಳೆ

ಮುಂದಿನ ಸುದ್ದಿ
Show comments