Select Your Language

Notifications

webdunia
webdunia
webdunia
webdunia

ನಿಗಮ ಮಂಡಳಿಗಳ ಸದಸ್ಯರ ಪಟ್ಟಿ ಸಿದ್ಧ: ಬಿಬಿಎಂಪಿ ಚುನಾವಣೆ ಬಳಿಕ ಬಿಡುಗಡೆಗೆ ಶಾಸಕರ ಒತ್ತಾಯ

ನಿಗಮ ಮಂಡಳಿಗಳ ಸದಸ್ಯರ ಪಟ್ಟಿ ಸಿದ್ಧ: ಬಿಬಿಎಂಪಿ ಚುನಾವಣೆ ಬಳಿಕ ಬಿಡುಗಡೆಗೆ ಶಾಸಕರ ಒತ್ತಾಯ
ಬೆಂಗಳೂರು , ಬುಧವಾರ, 24 ಜೂನ್ 2015 (16:12 IST)
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ನಿರ್ದೇಶನದಂತೆ ರಾಜ್ಯ ಸರ್ಕಾರವು ರಾಜ್ಯದಲ್ಲಿನ ನಿಗಮ ಮತ್ತು ಮಂಡಳಿಗಳಿಗೆ ನೇಮಕವಾಗಬೇಕಿದ್ದ ನಿರ್ದೇಶಕರು ಹಾಗೂ ಸದಸ್ಯರುಗಳ ಹೆಸರುಗಳನ್ನು ಸಿದ್ಧಪಡಿಸಿದ್ದು, ಪಟ್ಟಿಯನ್ನು ಇಂದು ಸಂಜೆ ಪ್ರಕಟಿಸುವ ಸಾಧ್ಯತೆ ಇದೆ. 
 
ಮೂಲಗಳ ಪ್ರಕಾರ, ರಾಜ್ಯದಲ್ಲಿನ 93 ನಿಗಮ ಮತ್ತು ಮಂಡಳಿಗಳಿಗೆ ಸದಸ್ಯ ಹಾಗೂ ನಿರ್ದೇಶಕ ಸ್ಥಾನಗಳಿಗೆ ಪಕ್ಷದ ಕಾರ್ಯಕರ್ತರುಗಳ ಹೆಸರನ್ನು ಸಿದ್ಧಪಡಿಸಿದ್ದು, ಪಟ್ಟಿಯಲ್ಲಿ ಸುಮಾರು 680 ಸದಸ್ಯರ ಹೆಸರುಗಳಿವೆ ಎಂದು ಹೇಳಲಾಗಿದ್ದು, ಇಂದು ಸಂಜೆ ಪಟ್ಟಿಯನ್ನು ಬಹಿರಂಗಪಡಿಸಲಾಗುವುದು ಎಂದು ತಿಳಿದು ಬಂದಿದೆ.  
 
ಇನ್ನು ಪಟ್ಟಿ ಬಿಡುಗಡೆಗೆ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಬೆಂಗಳೂರಿನ ಕಾಂಗ್ರೆಸ್ ಶಾಸಕರು ತಿರುಗಿ ಬಿದ್ದಿದ್ದು, ಪ್ರಕಟಿಸಲು ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬಿಬಿಎಂಪಿ ಚುನಾವಣೆ ಮುಗಿದ ಬಳಿಕ ಹೆಸರುಗಳನ್ನು ಪ್ರಕಟಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಒತ್ತಾಯಿಸುತ್ತಿದ್ದಾರೆ ಎಂಬುದಾಗಿ ಕೇಳಿ ಬಂದಿದೆ.  
 
ಇನ್ನು ಶಾಸಕರ ಈ ಒತ್ತಾಯಕ್ಕೆ ಬಿಬಿಎಂಪಿ ಚುನಾವಣೆಯೇ ಕಾರಣವಾಗಿದ್ದು, ಪಟ್ಟಿಯಲ್ಲಿ ಹೆಸರಿಲ್ಲದ ಕಾರ್ಯಕರ್ತರು ಅತೃಪ್ತರಾಗುತ್ತಾರೆ. ಅಲ್ಲದೆ ಚುನಾವಣೆಯಲ್ಲಿ ಅವರಿಂದ ಏಟು ಬೀಳಲಿದ್ದು, ಬಿಬಿಎಂಪಿ ಚುನಾವಣೆಯಲ್ಲಿ ಪರಾಭವ ಕಾಣಬಹುದು ಎಂಬುದು ಶಾಸಕರ ಅಭಿಪ್ರಾಯವಾಗಿದೆ. ಆದ್ದರಿಂದ ಚುನಾವಣೆ ಬಳಿಕ ಪ್ರಕಟಿಸಿ ಎಂದು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ. 

Share this Story:

Follow Webdunia kannada