Webdunia - Bharat's app for daily news and videos

Install App

ಪಾಲಿಕೆಯಲ್ಲಿ ಭ್ರಷ್ಟಾಚಾರ : ಕಮಿಷನರ್ ಪಿಎ ಎಸಿಬಿ ಬಲೆಗೆ

Webdunia
ಶುಕ್ರವಾರ, 9 ಅಕ್ಟೋಬರ್ 2020 (16:03 IST)
ಮಹಾನಗರ ಪಾಲಿಕೆಯಲ್ಲಿನ ಭ್ರಷ್ಟಾಚಾರ ಮತ್ತೊಮ್ಮೆ ಬಯಲಿಗೆ ಬಿದ್ದಿದ್ದು, ಕಮಿಷನರ್ ಪಿಎ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಖಾಸಗಿ ಶಾಲೆಯೊಂದಕ್ಕೆ ಫಾರಂ2 ನೀಡಲು 50 ಸಾವಿರ ರೂ.  ಲಂಚ ಪಡೆದ ಬಳ್ಳಾರಿ ನಗರದ  ಮಹಾನಗರ ಪಾಲಿಕೆ ಆಯುಕ್ತರ ಆಪ್ತ ಸಹಾಯಕ ಮತ್ತು ಅಟೆಂಡರ್ ಭ್ರಷ್ಟಾಚಾರ ನಿಗ್ರಹ ದಳ ಬೀಸಿದ ಬಲೆಗೆ ಬಿದ್ದಿದ್ದಾರೆ.

ಖಾಸಗಿ ಶಾಲೆ ಆಡಳಿತ ಮಂಡಳಿ ಅವರ ಪರವಾಗಿ ಚಂದ್ರಶೇಖರ್ ಎಂಬವರು ಕಳೆದ ಜುಲೈನಲ್ಲಿ ಫಾರಂ 2 ನೀಡಲು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಇದುವರೆಗೆ ನೀಡದೇ 60 ಸಾವಿರ ರೂ. ಹಣ ನೀಡುವಂತೆ ಪಾಲಿಕೆಯ ಆಯುಕ್ತರ ಪಿಎ ಮಲ್ಲಿಕಾರ್ಜುನ ಪಾಟೀಲ್ ಲಂಚ ಕೇಳಿದ್ದರಂತೆ.

ಈ ಬಗ್ಗೆ ಚಂದ್ರಶೇಖರ್ ಎಸಿಬಿಗೆ ದೂರು ನೀಡಿದ್ದರು. ಅಂತಿಮವಾಗಿ 50 ಸಾವಿರ ರೂ. ಲಂಚ ನೀಡುವ ಬಗ್ಗೆ ಮಾತುಕತೆ ನಡೆಸಿ ಹಣ ಪಡೆಯುವಾಗ ಮಲ್ಲಿಕಾರ್ಜುನ್ ಪಾಟೀಲ್ ಮತ್ತು ಅಟೆಂಡರ್ ಭಾಷಾ ಇಬ್ಬರು ಎಸಿಬಿ ಅಧಿಕಾರಿಗಳಿಗೆ ಹಣ ಸಮೇತ ಸಿಕ್ಕಿಬಿದ್ದಿದ್ದಾರೆ.

ಫಾರಂ 2 ಅನ್ನು ಪಾಲಿಕೆ ಆಯುಕ್ತರೇ ನೀಡಬೇಕು. ಅವರ ಸಹಿ ಬೇಕೆಬೇಕು.ಅದಕ್ಕಾಗಿ ಅವರಿಗೆ ಹಣ ನೀಡಲೇಬೇಕು ಎಂದು ಪಾಟೀಲ್ ದೂರುದಾರರಿಗೆ ಹೇಳಿದ್ದಾರಂತೆ.

ಈಗ ಎಸಿಬಿ ಅಧಿಕಾರಿಗಳು ಪಾಟೀಲ್ ಮತ್ತು ಭಾಷಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದು ಮುಂದಿನ ವಿಚಾರಣೆ ನಡೆಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಶ್ರಾವಣ ಮಾಸದ ಔತಣಕೂಟದಲ್ಲಿ ಮಾಂಸಾಹಾರ ಸೇವಿಸಿದರೇ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್: ವೈರಲ್ Video ಏನಿದೆ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

ಬಿಸಿ ನಾಗೇಶ್ ಗೆ ಪಕ್ಷದ ಧ್ವಜ ಹೊದಿಸಿ ಅಂತಿಮ ಗೌರವ ಸಲ್ಲಿಸಿದ ಬಿಜೆಪಿ ನಾಯಕರು

ಪತಿ ಅತ್ತ ಹೋದ ಕೂಡ್ಲೇ ಮನೆಯಲ್ಲೇ ಮತ್ತೊಬ್ಬನ ಜೊತೆ ಪತ್ನಿಯ ಸರಸ ಸಲ್ಲಾಪ.. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ಳು Video

ಎಸಿ… ಟಿವಿ.. ಫ್ಯಾನ್.. ಅಬ್ಬಬ್ಬಾ…ಎಮ್ಮೆ ಮೇಲೆ ಪ್ರೀತಿಗೆ ಈ ಮನುಷ್ಯ ಮಾಡಿದ ಕೆಲಸ ನಿಜಕ್ಕೂ ಶಾಕಿಂಗ್ video

ಮುಂದಿನ ಸುದ್ದಿ
Show comments