Webdunia - Bharat's app for daily news and videos

Install App

ಯದುವೀರ್ ಪಟ್ಟಾಭಿಷೇಕ: ಹಸಿರು ಸೀರೆಯಲ್ಲಿ ಗಮನ ಸೆಳೆದ ತ್ರಿಶಿಕಾ ಕುಮಾರಿ

Webdunia
ಗುರುವಾರ, 28 ಮೇ 2015 (11:49 IST)
ಮೈಸೂರು ರಾಜವಂಶದ 27ನೇ ಅರಸರ ಪಟ್ಟಾಭಿಷೇಕ ಕಾರ್ಯಕ್ರಮ ಇಂದು ನಗರದ ಅಂಬಾವಿಲಾಸ ಅರಮನೆಯಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮಕ್ಕೆ ಅರಸ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಭಾವಿ ಪತ್ನಿ ತ್ರಿಶಿಕಾ ಕುಮಾರಿ ಅವರೂ ಕೂಡ ಹಾಜರಾಗಿದ್ದಾರೆ. 
 
ಹಸಿರು ಸೀರೆಯನ್ನುಟ್ಟು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ತ್ರಿಶಿಕಾ ಕುಮಾರಿ, ಸಿಂಹಾಸನವನ್ನು ಅಲಂಕರಿಸಿದ ಬಳಿಕ ತಮ್ಮ ಭಾವಿ ಪತಿ ಯದುವೀರ್ ಅವರಿಗೆ ಶುಭಕೋರಿದರು. ಈ ವೇಳೆ ತ್ರಿಶಿಕಾ ಅವರ ತಾಯಿ ಮಹೇಶ್ರಿ ಕುಮಾರಿ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಹಾಜರಿದ್ದರು.   
 
ತ್ರಿಶಿಕಾ ಕುಮಾರಿ ಅವರು ಪ್ರಸ್ತುತ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಇಬ್ಬರಿಗೂ ಕಳೆದ 2013ರಲ್ಲಿಯೇ ನಿಶ್ಚಿತಾರ್ಥ ನಡೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಎರಡೂ ರಾಜಮನೆತನಗಳ ಎಲ್ಲಾ ಸದಸ್ಯರೂ ಒಪ್ಪಿಗೆ ಸೂಚಿಸಿದಲ್ಲಿ ಬರುವ ಡಿಸೆಂಬರ್ ತಿಂಗಳಿನಲ್ಲಿ ವಿವಾಹವೂ ನೆರವೇರಲಿದೆ ಎಂದು ಹೇಳಲಾಗುತ್ತಿದೆ.  
 
ಇನ್ನು ಯದುವೀರ್ ಅವರ ಪತ್ನಿಯಾಗಲಿರುವ ತ್ರಿಶಿಕಾ ಕೂಡ ರಾಜಮನೆತನದ ಹೆಣ್ಣು ಮಗಳಾಗಿದ್ದು, ರಾಜಸ್ತಾನ ರಾಜ್ಯದ ಯುವರಾಜ ದುಂಗರ್ಪುರ ಹರ್ಷವರ್ಧನ್ ಸಿಂಗ್ ಬಹದ್ದೂರ್ ಅವರ ಪುತ್ರಿಯಾಗಿದ್ದಾರೆ. 
 
ಈ ಪಟ್ಟಾಭಿಷೇಕ ಕಾರ್ಯಕ್ರಮವು ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ನಡೆಯುತ್ತಿದ್ದು, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಸಂಸ್ಥಾನದ 27ನೇ ಅರಸರಾಗಿ ಸಿಂಹಾಸನ ಏರಿದ್ದಾರೆ.  
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ