ಬೆಂಗಳೂರು: ಕೊರೋನಾ ಒಂದು ಲಸಿಕೆ ಪಡೆದ ಮೇಲೆ ಎರಡನೇ ಲಸಿಕೆ ಪಡೆಯುವುದು ಕಡ್ಡಾಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆದೇಶ ಜಾರಿಗೊಳಿಸಿದೆ.
ಕೊರೋನಾ ಲಸಿಕೆ ಒಮ್ಮೆ ಹಾಕಿಸಿಕೊಂಡ ಮೇಲೆ ಇನ್ನೊಮ್ಮೆ ಹಾಕಿಸಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಸರ್ಕಾರ ಈಗ ಕಡ್ಡಾಯ ನಿಯಮ ಜಾರಿಗೊಳಿಸಿದೆ.
ಕೊವ್ಯಾಕ್ಸಿನ್ ಪಡೆದವರು 4 ವಾರಗಳ ಬಳಿಕ ಹಾಗೂ ಕೊವಿಶೀಲ್ಡ್ ಲಸಿಕೆ ಪಡೆದವರು 12 ವಾರಗಳ ಬಳಿಕ ಕಡ್ಡಾಯವಾಗಿ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು. ಒಂದು ಲಸಿಕೆ ಹಾಕಿದ ಮೇಲೆ ಸೋಂಕು ತಗುಲಿದ್ದರೆ,ಮೂರು ತಿಂಗಳ ಬಳಿಕ ಎರಡನೇ ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.