Webdunia - Bharat's app for daily news and videos

Install App

ಉದ್ಯಮಿಯೊಬ್ಬರಿಂದ 2000 ರೂ. ನೋಟುಗಳಿದ್ದ 42 ಲಕ್ಷ ರೂ. ವಶಕ್ಕೆ

Webdunia
ಶುಕ್ರವಾರ, 25 ನವೆಂಬರ್ 2016 (12:04 IST)
ನಗರದ ಜವಳಿ ವ್ಯಾಪಾರಿಯೊಬ್ಬರ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರು 2000 ರೂ ಹೊಸ ನೋಟುಗಳಿರುವ 49.5 ಲಕ್ಷ ರೂಪಾಯಿಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
 
ಸೆಂಟ್ರಲ್ ಬೆಂಗಳೂರಿನ ಚಾಮರಾಜಪೇಟೆ ನಿವಾಸಿಯಾದ ಉದ್ಯಮಿಯೊಬ್ಬರ ಮನೆಯಲ್ಲಿ ಭಾರಿ ಮೊತ್ತದ ಹಣ ಅಡಗಿಸಿಡಲಾಗಿದೆ ಎನ್ನುವ ಮಾಹಿತಿ ಪಡೆದ ಪೊಲೀಸರು, ವ್ಯಾಪಾರಿಯ ಮನೆಯ ಮೇಲೆ ದಾಳಿ ನಡೆಸಿದಾಗ ಭಾರಿ ಮೊತ್ತದ ಹಣ ಪತ್ತೆಯಾಗಿದೆ.
 
ಕಲಸಿಪಾಳ್ಯದ ಬಸ್‌ಸ್ಟ್ಯಾಂಡ್‌ ಬಳಿ ಅನುಮಾನಾಸ್ಪದ ವ್ಯಕ್ತಿಯೊಬ್ಬ ಬ್ಯಾಗ್ ಹಿಡಿದು ತಿರುಗುತ್ತಿದ್ದಾನೆ ಎನ್ನುವ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದಾಗ ಆತನ ಬಳಿ 5 ಲಕ್ಷ ರೂಪಾಯಿ ಪತ್ತೆಯಾಗಿದೆ. ನಂತರ ವಿಚಾರಣೆ ನಡೆಸಿದಾಗ ಹಣ ತನ್ನ ಮಾಲೀಕ ಗುಲಾಬ್ ಸಿಂಗ್ ಅವರದ್ದು ಎಂದು ಬಾಯಿ ಬಿಟ್ಟಿದ್ದಾನೆ.
 
ಪೊಲೀಸರು ಉದ್ಯಮಿ ಗುಲಾಬ್ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿದಾಗ 2000 ರೂ ಹೊಸ ನೋಟುಗಳಿರುವ 42 ಲಕ್ಷ ರೂಪಾಯಿ ಮತ್ತು 500 ಮತ್ತು 1000 ರೂ ನೋಟುಗಳಿರುವ 2.5 ಲಕ್ಷ ರೂಪಾಯಿಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಗುಜರಾತ್‌: ಸೇತುವೆ ಮುರಿದು ನದಿಗೆ ಬಿದ್ದ ವಾಹನಗಳು, 9ಮಂದಿ ಸಾವು

ಮುಂಬೈ ದಾಳಿಯ ಮಾಸ್ಟರ್ ಮೈಂಡ್‌ ತಹವ್ವುರ್ ರಾಣಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ನಮ್ಮ ಪಕ್ಷದ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಬಿಕೆ ಹರಿಪ್ರಸಾದ್ ಗೆ ಟಾಂಗ್ ಕೊಟ್ಟ ವಿಜಯೇಂದ್ರ

ಜನೌಷಧಿ ಸರ್ಕಾರೀ ಆಸ್ಪತ್ರೆ ಬಳಿ ಬೇಡ ಅಷ್ಟೇ ಎಂದ ಸಚಿವ ಶರಣಪ್ರಕಾಶ್ ಪಾಟೀಲ್: ನೆಟ್ಟಿಗರ ಪ್ರತಿಕ್ರಿಯೆ ನೋಡಿ

Arecanut Price: ಅಡಿಕೆ ಬೆಲೆ ಯಥಾಸ್ಥಿತಿ, ಕೊಬ್ಬರಿಗೆ ಬಂಪರ್

ಮುಂದಿನ ಸುದ್ದಿ
Show comments