Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ನಟಿ, ರಮ್ಯ ಉಪ "ದೇಶ'

ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ನಟಿ, ರಮ್ಯ ಉಪ
ಮಂಡ್ಯ , ಮಂಗಳವಾರ, 30 ಆಗಸ್ಟ್ 2016 (14:30 IST)
ದೇಶದಲ್ಲಿ ಬೇರೆ ಬೇರೆ ಜಾತಿ ಧರ್ಮ ಭಾಷೆಗಳಿವೆ. ಪ್ರತಿಯೊಬ್ಬರು ಎಲ್ಲಾ ಜಾತಿ, ಧರ್ಮ ಮತ್ತು ಭಾಷೆಯನ್ನು ಪ್ರೀತಿಸಬೇಕು ಎಂದು ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ನಟಿ ರಮ್ಯ ಉಪ "ದೇಶ" ನೀಡಿದ್ದಾರೆ.
 
ಎಲ್ಲರನ್ನು ಒಂದೇ ಎಂಬ ರೀತಿ ನೋಡ್ಬೇಕು ಮತ್ತು ಪ್ರೀತಿಸಬೇಕು. ನಿಜವಾದ ಪ್ರೀತಿ ಎಂದರೆ ದೇಶದಲ್ಲಿರುವ ಪ್ರತಿಯೊಬ್ಬರನ್ನು ಪ್ರೀತಿಸಬೇಕು ಎಂದರು,
 
ಪಾಕಿಸ್ತಾನದ ವಿರುದ್ಧದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಮ್ಯಾ, ಕೆಲವು ಬಾರಿ ಪ್ರೀತಿಯನ್ನು ಹೇಳಿಕೊಂಡಂತೆ ದೇಶಪ್ರೇಮವನ್ನು ಹೇಳಿಕೊಳ್ಳಬೇಕಾಗುತ್ತದೆ. ನನ್ನ ದೇಶಭಕ್ತಿಯ ಬಗ್ಗೆ ಅನುಮಾನ ಪಡುವವರು ಪಡಲಿ. ಅದಕ್ಕೆ ನಾನೇನು ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
 
ಪಾಕಿಸ್ತಾನ ನರಕ ಎಂದು ಹೇಳಿಕೆ ನೀಡಿದ್ದ ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಮಾಜಿ ಸಂಸದೆ ರಮ್ಯಾ ಹಾಗೇನಿಲ್ಲ. ಪಾಕಿಸ್ತಾನದಲ್ಲಿನ ಜನರು ಒಳ್ಳೆಯವರು ಎಂದು ಹೇಳಿಕೆ ನೀಡಿ ವಿವಾದಕ್ಕೆ ಗ್ರಾಸವಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಎಸ್.ಈಶ್ವರಪ್ಪ ವಿರುದ್ಧ ವರಿಷ್ಠರು ಕಠಿಣ ಕ್ರಮಕೈಗೊಳ್ಳಲಿ: ಬಿಜೆಪಿ