ಕಾಂಗ್ರೆಸ್‌ನವರೇ ಕಾಂಗ್ರೆಸ್ ಮುಕ್ತ ರಾಜ್ಯಕ್ಕೆ ಮುಂದಾಗಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಅವರು, ಕಾಂಗ್ರೆಸ್ ಮುಕ್ತ ರಾಜ್ಯಕ್ಕೆ ಭಾರತೀಯ ಜನತಾ ಪಕ್ಷದವರು ಪ್ರಯತ್ನಿಸಬೇಕಿಲ್ಲ. ಆ ಪಕ್ಷದಿಂದಲೇ ಅದು ಸಾಕಾರವಾಗುತ್ತದೆ ಎಂದರು.
ಒಬ್ಬೊಬ್ಬರೇ ಕೈನಿಂದ ಹೊರಬರುತ್ತಿದ್ದಾರೆ. ಇತ್ತೀಚಿಗೆ ಇಬ್ರಾಹಿಂ ಸಹ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದರು. ಆದರೆ ಸಿದ್ದರಾಮಯ್ಯ ರಾಜಿ ಸಂಧಾನದಿಂದ ಅವರು ತಮ್ಮ ನಿರ್ಧಾರವನ್ನು ಹಿಂಪಡೆದರು. ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಬೇಕೆಂಬ ಬಿಜೆಪಿ ಕನಸನ್ನು ಕಾಂಗ್ರೆಸ್ಸಿಗರೇ ಮಾಡುತ್ತಿದ್ದಾರೆ, ಎಂದು ಈಶ್ವರಪ್ಪ ಹೇಳಿದ್ದಾರೆ. ಮಾಜಿ ಸಿಎಂ, ಕೇಂದ್ರ ಸಚಿವ ಎಸ್.ಎಂ,ಕೃಷ್ಣ ಪಕ್ಷಕ್ಕೆ ಗುಡ್ ಬೈ ಹೇಳಿರುವ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.
ಪಕ್ಷ ಮತ್ತು ಅಧಿಕಾರವನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಸಾಹಸ ಪಡುತ್ತಿದ್ದಾರೆ, ಎಂದು ಅವರು ವ್ಯಂಗ್ಯವಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ