Select Your Language

Notifications

webdunia
webdunia
webdunia
webdunia

ಕಾಂಗ್ರೆಸಿಗರು ಮೊದಲು ತಮ್ಮ ನಾಯಕನನ್ನು ಹುಡುಕಲಿ: ಶಾ ವ್ಯಂಗ್ಯ

ಕಾಂಗ್ರೆಸಿಗರು ಮೊದಲು ತಮ್ಮ ನಾಯಕನನ್ನು ಹುಡುಕಲಿ: ಶಾ ವ್ಯಂಗ್ಯ
ಬೆಂಗಳೂರು , ಶುಕ್ರವಾರ, 3 ಏಪ್ರಿಲ್ 2015 (14:30 IST)
ನಗರದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಿದ್ದು, ಕಾಂಗ್ರೆಸ್ ನಾಯಕರು ನಮ್ಮ ಪಕ್ಷದ ಹುಳುಕುಗಳನ್ನು ಹುಡುಕುವ ಮೊದಲು, ತಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಹುಡುಕಿಕೊಳ್ಳಲಿ ಎಂದು ಕಾಂಗ್ರೆಸ್‌ನ್ನು ಲೇವಡಿ ಮಾಡಿದ್ದಾರೆ. 
 
ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಎಲ್ಲಾ ಮುಖಂಡರೂ ಕೂಡ ನಮ್ಮ ಪಕ್ಷದ ಹುಳುಕುಗಳಾವುವು ಎಂದು ಹುಡುಕುವುದರಲ್ಲಿ ನಿರತರಾಗಿದ್ದಾರೆ. ಆದರೆ ಅದನ್ನು ಬಿಟ್ಟು ತಮ್ಮ  ನಾಯಕ ರಾಹುಲ್ ಗಾಂಧಿ ಅವರನ್ನು ಪತ್ತೆ ಹಚ್ಚಲಿ ಎಂದು ಕಾಂಗ್ರೆಸ್ ಪಕ್ಷದ ಬಗ್ಗೆ ವ್ಯಂಗ್ಯವಾಡಿದ್ದಾರೆ. 
 
ಈ ಸಂಬಂಧ ಕಾಂಗ್ರೆಸ್ ನಾಯಕರೂ ಕೂಡ ಪ್ರತಿಕ್ರಿಯಿಸಿದ್ದು, ಅವರು ಬಂದಾಗ ನಿಮಗೇ ತಿಳಿಯುಲಿದೆ. 
ಆದರೆ ಅಲ್ಲಿಯವರೆಗೂ ತಾವು ಸುಮ್ಮನಿರಬೇಕು ಎಂದಿದ್ದು, ಅವರು ರಜೆ ಮೇಲೆ ತೆರಳಿದ್ದರೆ ನಿಮಗೇನು ಕಷ್ಟ, ಪ್ರತಿಪಕ್ಷದ ಕೆಲಸ ತಪ್ಪು ಹುಡುಕುವುದು. ಹಾಗಾಗಿ ನಾವು ಸರ್ಕಾರದಲ್ಲಿನ ತಪ್ಪುಗಳು ಮಾತ್ರವೇ ಹುಡುಕುತ್ತಿದ್ದೇವೆ ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ ಎನ್ನಲಾಗಿದೆ.  
 
ಇನ್ನು ನಗರದ ಅಶೋಕ ಹೋಟೆಲ್‌ನಲ್ಲಿ ಆಯೋಜಿಸಲಾಗಿರುವ ಪಕ್ಷದ ಈ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯು ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಇದು ಮೊದಲ ದಿನವಾಗಿದೆ. ಇಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಕಾಂಗ್ರೆಸ್ ನಾಯಕರ ಬಗ್ಗೆ ಹೀಗೆ ವ್ಯಂಗ್ಯವಾಡಿದ್ದಾರೆ.    

Share this Story:

Follow Webdunia kannada