Webdunia - Bharat's app for daily news and videos

Install App

ಗಾಂಧಿ ಭಾರತ ವೇದಿಕೆಯಲ್ಲೇ ಡಾ.ಮನಮೋಹನ ಸಿಂಗ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಕಾಂಗ್ರೆಸ್‌ ನಾಯಕರು

Sampriya
ಶುಕ್ರವಾರ, 27 ಡಿಸೆಂಬರ್ 2024 (13:04 IST)
Photo Courtesy X
ಬೆಳಗಾವಿ: ಅರ್ಥಮಾಂತ್ರಿಕ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಗಲಿಕೆ ಕೇವಲ ಭಾರತಕ್ಕೆ ಮಾತ್ರವಲ್ಲ; ಇಡೀ ಜಗತ್ತಿಗೆ ದೊಡ್ಡ ನಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.

ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವಕ್ಕಾಗಿ ಇಲ್ಲಿನ ಸಿ.ಪಿ.ಇಡಿ ಮೈದಾನದಲ್ಲಿ ಹಾಕಿದ್ದ ಗಾಂಧಿ ಭಾರತ ವೇದಿಕೆಯಲ್ಲೇ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

‘ಅವರೊಂದು ಮಾತು ಹೇಳುತ್ತಿದ್ದರು; ನಾನು ಬದುಕಿರುವಾಗ ನನ್ನ ಬಗ್ಗೆ ಅಷ್ಟೊಂದು ಪ್ರಚಾರ ಸಿಗುವುದಿಲ್ಲ. ನಾನು ಸತ್ತ ಮೇಲೆ ಮಾಧ್ಯಮದವರು ಹೆಚ್ಚು ಪ್ರಚಾರ ಮಾಡುತ್ತಾರೆ ಎಂದು. ಆ ಮಾತು ಇಂದು ನಿಜವಾಗಿದೆ’ ಎಂದು ನೆನೆದರು.

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಾವು ಆರಂಭಿಸಿದಾಗ ನಾವು ಮನಮೋಹನ್ ಸಿಂಗ್ ಅವರನ್ನು ಕರೆಸಿದ್ದೆವು. ಕರ್ನಾಟಕದ ಆರ್ಥಿಕತೆ ಬಗ್ಗೆ ಒಂದು ಕಾರ್ಯಕ್ರಮಕ್ಕೆ ನಾವು ಕರೆಸಿದ್ದೆವು. ಆಗ, ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ಅತ್ಯಂದ ಸದೃಡವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದರು ಎಂದರು.

ಬಡತನದಿಂದ ಬಂದ ಮನಮೋಹನ ಸಿಂಗ್ ಅವರಿಗೆ ದೇಶದ ದೊಡ್ಡ ಹುದ್ದೆಗಳು ಸಿಕ್ಕವು. ಆದರೆ, ಅವರು ತಮ್ಮ ಬಡತನ ನಿವಾರಣೆ ಮಾಡಿಕೊಳ್ಳುವ ಯೋಚನೆ ಮಾಡಿದೇ, ಇಡೀ ದೇಶದ ದಾರಿದ್ರ್ಯ ನಿವಾರಣೆ ಮಾಡಿದರು. ಅವರನ ಆರ್ಥಿಕ ನೀತಿಗಳು, ವ್ಯಕ್ತಿತ್ವ, ಸರಳತೆ ಬಗ್ಗೆ ಮಾತನಾಡುವಾಗ ನನಗೆ ಅಚ್ಚರಿಯಾಗುತ್ತದೆ ಎಂದರು.

ಗಾಂಧಿ ಭಾರತ ವೇದಿಕೆಯಲ್ಲೇ ಮತ್ತೊಬ್ಬ ಗಾಂಧಿ ಅವರಿಗೆ ಶ್ರದ್ಧಾಂಜಲಿ ನೀಡಿದ್ದು ದುಃಖದ ಸಂಗತಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಮರಿಸಿದರು.

ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಅವರು ಜೂಮ್‌ ಮೀಟ್‌ ಮೂಲಕ ಭಾಗವಹಿಸುವಂತೆ ಯೋಚಿಸಿದ್ದೆವು. ಆದರೆ, ವಿಧಿ ಆಟ ಬೇರೆ ಆಗಿತ್ತು. ಒತ್ತುವರಿ ಮಾಡಿಕೊಳ್ಳುವ ಭೂಮಿಗೆ ನಗರದಲ್ಲಿ ಎರಡು ಪಟ್ಟು ಹಳ್ಳಿಗಳಲ್ಲಿ ನಾಲ್ಕು ಪಟ್ಟು ಪರಿಹಾರ ಕೊಡಬೇಕು ಎಂಬ ಅವರ ನಿಯಮ ಅಚ್ಚರಿ ಮೂಡಿಸಿತ್ತು’ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ,  ಸಚಿವ ಎಚ್.ಕೆ.ಪಾಟೀಲ, ಹಲವರು ಸಚಿವರು, ಶಾಸಕರು, ಜನಪ್ರತಿನಿಧಿಗಳು, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರೂ ನಮನ ಸಲ್ಲಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments