ಪಾಕಿಸ್ತಾನದ ಕುರಿತು ಮಾಜಿ ಸಂಸದೆ ರಮ್ಯಾ ಹೇಳಿಕೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಸಮರ್ಥಿಸಿಕೊಂಡಿದ್ದಾರೆ.
ನಟಿ ರಮ್ಯಾರ ಕುರಿತು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಸಮರ್ಥನೆ ಮಾಡಿಕೊಂಡಿದ್ದಾರೆ. ರಮ್ಯಾ ಹೇಳಿಕೆ ಯಾವುದೇ ತಪ್ಪಿಲ್ಲ. ಪ್ರಹ್ಲಾದ್ ಜೋಷಿ ರಮ್ಯಾ ಅವರನ್ನು ಪಾಕಿಸ್ತಾನಕ್ಕೆ ಹೋಗಿ ಎಂದಿದ್ದರು. ಆದ್ರೆ ಪಾಕ್ ಹೋಗಿ ಜಿನ್ನಾ ಹೊಗಳಿ ಬರುತ್ತಾರೆ ಎಲ್.ಕೆ ಅಡ್ವಾಣಿ ಎಂದು ತಿಳಿಸಿದರು. ಇದು ಆರ್‌ಎಸ್‌ಎಸ್ ಹಾಗೂ ಬಿಜೆಪಿ ದ್ವಂಧ್ವ ನೀತಿಗೆ ಸಾಕ್ಷಿ ಎಂದು ಆರೋಪ ಮಾಡಿದರು.
ಪಾಕಿಸ್ತಾನ ನರಕವಲ್ಲ, ಅಲ್ಲಿಯೂ ಒಳ್ಳೆಯ ಜನರು ಇದ್ದಾರೆ. ಪಾಕ್ ಜನರು ತುಂಬಾ ಒಳ್ಳೆಯವರು ಎಂದು ಹೇಳುವುದರ ಮೂಲಕ ರಮ್ಯಾ ವಿವಾದದ ಹೇಳಿಕೆ ನೀಡಿದ್ದರು.
ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯ ಹೇಳುವ ಹಕ್ಕಿದೆ. ಪಾಕ್ ಬಗ್ಗೆ ಹೇಳಿಕೆ ನನ್ನ ವೈಯಕ್ತಿಕ ಅಭಿಪ್ರಾಯ. ಬೇರೆಯವರು ಪಾಕಿಸ್ತಾನವನ್ನು ವಿರೋಧಿಸುತ್ತಾರೆ ಎಂದು ಎಲ್ಲರೂ ಒಂದೇ ಸಿದ್ಧಾಂತಕ್ಕೆ ಅನುಗುಣವಾಗಿರಬೇಕಿಲ್ಲ ಎಂದು ಹೇಳಿದ್ದರು. ರಮ್ಯಾ ವಿರುದ್ಧ ದೇಶದ್ರೋಹ ದಡಿ ಪ್ರಕರಣ ಕೂಡ ದಾಖಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ