Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಮಹಿಮೆ: ವಿಧಾನಸಭೆಯಲ್ಲಿ ಶಾಸಕರಿಗೆ ಸ್ವಾದಿಷ್ಠ ಭೋಜನ

ಬಿಬಿಎಂಪಿ ಮಹಿಮೆ: ವಿಧಾನಸಭೆಯಲ್ಲಿ ಶಾಸಕರಿಗೆ ಸ್ವಾದಿಷ್ಠ ಭೋಜನ
ಬೆಂಗಳೂರು , ಸೋಮವಾರ, 20 ಏಪ್ರಿಲ್ 2015 (20:57 IST)
ಬಿಬಿಎಂಪಿ ವಿಭಜನೆ ತಿದ್ದುಪಡಿ ವಿಧೇಯಕ ಇಂದು ಅಂಗೀಕಾರವಾಗಲೇಬೇಕು ಎನ್ನುವ ಹಟಕ್ಕೆ ಬಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿತ್ತು.

 ಇಂದು ವಿಧಾನಸಭೆಯ ವಿಶೇಷ ಅಧಿವೇಶನದ ಹಿನ್ನೆಲೆಯಲ್ಲಿ ವಿಧಾನಸೌಧದ ಬಾಂಕ್ವೆಟ್​ ಹಾಲ್’​ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅದು ಕಾಂಗ್ರೆಸ್ ಶಾಸಕರು ಹಾಗೂ ಸಚಿವರಿಗೆ ಮಾತ್ರ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆ ಮಾಡಿದ್ದು, ಸಚಿವ ದಿನೇಶ್ ಗುಂಡೂರಾವ್ ಅವರು.

ಆದರೆ ಈ ವ್ಯವಸ್ಥೆಯ ಹಿಂದೆ ಇರುವ ಉದ್ದೇಶ ಏನು ಗೊತ್ತಾ?? ಕಾಂಗ್ರೆಸ್ ಶಾಸಕರು ಊಟಕ್ಕೆಂದು ಅಧಿವೇಶನದಿಂದ ಹೊರಹೋಗಬಾರದು, ಕಲಾಪದಲ್ಲಿ ಹಾಜರಾತಿ ಕೊರತೆಯಾಗಬಾರದೆಂಬ ಕಾರಣಕ್ಕಾಗಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಆದರೆ, ವಿರೋಧ ಪಕ್ಷದ ಶಾಸಕರಿಗೆ ಸದನದಿಂದ ಹೊರಹೋಗದಂತೆ ಸ್ಪೀಕರ್ ಸೂಚಿಸಿದ್ದಾರೆ. ಹೀಗಾಗಿ ವಿರೋಧ ಪಕ್ಷದ ಶಾಸಕರು ಊಟಕ್ಕೆ ಹೊರಹೋಗಲು ಆಗದೇ, ವ್ಯವಸ್ಥೆಯೂ ಇಲ್ಲದೇ ಪರದಾಡುವಂತಾಗಿದೆ.

Share this Story:

Follow Webdunia kannada